ಅಹಮದಾಬಾದ್‌ : ಗುಜರಾತ್‌ನ ಅಹಮದಾಬಾದ್‌ ನಲ್ಲಿ ಸ್ಪಾ ಸೆಂಟರ್ ನ ಮಾಲೀಕ ಈಶ್ಯಾನ್ಯ ರಾಜ್ಯದ ಮಹಿಳೆಯ ಮೇಲೆ ಹಲ್ಲೆ ಮಾಡಿರುವ ವಿಡಿಯೋವೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಸಿಂಧು ಭವನ ರಸ್ತೆಯ ಮಾರುಕಟ್ಟೆ ಸಂಕೀರ್ಣದಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಹಲ್ಲೆಗೈಯುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಹಲ್ಲೆ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆದ ತಕ್ಷಣ, ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಆರೋಪಿಯನ್ನು ಸ್ಪಾ ಸೆಂಟರ್ ಮಾಲೀಕ ಮೊಹ್ಸಿನ್ ಎಂದು ಗುರುತಿಸಲಾಗಿದ್ದು, ಮಹಿಳೆ ಆತನ ವ್ಯಾಪಾರ ಪಾಲುದಾರಳು ಎಂದು ಹೇಳಲಾಗುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ನೀವು ಇನ್ನೂ ಆಸ್ತಿಯನ್ನು ನೋಂದಾಯಿಸಿಕೊಂಡಿಲ್ವಾ..?


ಈ ವೀಡಿಯೊ ಸೆಪ್ಟೆಂಬರ್ 25 ರಂದು ನಡೆದ ಘಟನೆಯನ್ನು ಸೆರೆ ಹಿಡಿದಿದೆ. ಇದರಲ್ಲಿ ಮೊಹ್ಸಿನ್ ಮೊದಲು ಅವಳನ್ನು ಕ್ರೂರವಾಗಿ ಎಳೆದೊಯ್ದನು ಮತ್ತು ನಂತರ ಅವಳ ಮೇಲೆ ಹಲ್ಲೆಗೈಯಲು ಮುಂದಾಗಿದ್ದಾನೆ. ಇದೆ ವೇಳೆ ಇದನ್ನು ತಡೆಯಲು ಯತ್ನಿಸಿದ ಯುವಕನನ್ನು ಲೆಕ್ಕಿಸದೆ ಮೊಹಿಸಿನ್ ಆಕೆಗೆ ಹೊಡೆಯುವುದನ್ನು ಮುಂದುವರೆಸಿದ್ದಾನೆ. ಈಗ ಮಹಿಳೆ ಯಾವುದೇ ಎಫ್‌ಐಆರ್ ದಾಖಲಿಸದಿದ್ದರೂ, ಪೊಲೀಸರು ವೀಡಿಯೊವನ್ನು ನೋಡಿದ ನಂತರ ಹುಡುಗಿಯನ್ನು ಪತ್ತೆಹಚ್ಚಿದರು ಮತ್ತು ನಂತರ ಎಫ್‌ಐಆರ್ ದಾಖಲಿಸಲು ಸಲಹೆ ನೀಡಿದರು. ಆರೋಪಿ ಡ್ಯಾನಿಲಿಮ್ಡಾ ಪ್ರದೇಶದ ನಿವಾಸಿಯಾಗಿದ್ದು, ಪೊಲೀಸರು ಆತನ ಕುಟುಂಬ ಮತ್ತು ಸ್ನೇಹಿತರನ್ನು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


ವರ್ಚಸ್ಸು ಕಳೆದುಕೊಂಡಿರುವ ಕಾಂಗ್ರೆಸ್ ಆಪರೇಷನ್ ಗೆ ಮುಂದಾಗಿದೆ : ಬಸವರಾಜ ಬೊಮ್ಮಾಯಿ


ಮೊಹ್ಸಿನ್ ಅಲ್ಲಿಗೆ ಬಂದು ಮಹಿಳೆಯೊಂದಿಗೆ ಜಗಳವಾಡಿದ್ದಾನೆ. ವಾಗ್ವಾದ ಎಷ್ಟಿತ್ತೆಂದರೆ ಇಬ್ಬರ ನಡುವೆ ಜಗಳ ಶುರುವಾಯಿತು. ಮೊಹ್ಸಿನ್ ಅವಳನ್ನು ನಿಷ್ಕರುಣೆಯಿಂದ ಹೊಡೆಯಲು ಪ್ರಾರಂಭಿಸಿದನು. ತಾನು ಈಶಾನ್ಯ ಭಾರತದ ನಿವಾಸಿ ಎಂದು ಸಂತ್ರಸ್ತೆ ಹೇಳಿದ್ದಾರೆ. ಕೆಲಸದ ನಿಮಿತ್ತ ಅಹಮದಾಬಾದ್‌ನಲ್ಲಿ ನೆಲೆಸಿದ್ದಾಳೆ. ಮೊಹ್ಸಿನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಪ್ರಕರಣದಲ್ಲಿ ಮುಂದಿನ ಕ್ರಮ ನಡೆಯುತ್ತಿದೆ.


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.