ನವದೆಹಲಿ: ನೀರನ್ನು ವ್ಯರ್ಥ ಮಾಡುವುದನ್ನು ನಿಷೇಧಿಸಲಾಗಿರುವ ಮತ್ತು ಭವಿಷ್ಯದ ಸಮಸ್ಯೆಗಳ ಬಗ್ಗೆ ಎಚ್ಚರಿಸಿರುವ ಸಂದೇಶಗಳನ್ನು ನೀವು ಓದಿರಬಹುದು. ಆದರೆ ಈ ರಾಜ್ಯದಲ್ಲಿ  ಕಂಪನಿಗಳು ನೀರಿಲ್ಲ ಎಂದು ತಮ್ಮ ಸಿಬ್ಬಂದಿಯ್ನು ಮನೆಯಿಂದ ಕೆಲಸ ಮಾಡುವಂತೆ ಕೇಳಿಕೊಂಡಿದೆ.


COMMERCIAL BREAK
SCROLL TO CONTINUE READING

ಇದು ಬೇರಾವುದೋ ದೇಶದ ಕಥೆಯಲ್ಲ. ನಮ್ಮ ದೇಶದ ಕಥೆ. ಚೆನ್ನೈನ ಓಲ್ಡ್ ಮಹಾಬಲಿಪುರಂನಲ್ಲಿರುವ ಐಟಿ ಕಂಪನಿಗಳು ಮನೆಯಿಂದ ಕೆಲಸ ಮಾಡಲು ತಮ್ಮ ಸಿಬ್ಬಂದಿಯನ್ನು ಕೇಳಿದ್ದಾರೆ. ವಾಸ್ತವವಾಗಿ ಸರಿಯಾಗಿ ನೀರಿನ ಸರಬರಾಜಿಲ್ಲ ಕಾರಣ ಕಚೇರಿ ನಿರ್ವಹಣೆಗೆ ತೊಂದರೆಯಾಗುತ್ತಿದೆ.


5 ಸಾವಿರ ನೌಕರರಿಗೆ ಮನೆಯಿಂದ ಕೆಲಸ: 
ಕಂಪನಿಗಳು ತಮ್ಮ ಐಟಿ ಸಿಬ್ಬಂದಿಗೆ ತಮ್ಮ ಅನುಕೂಲಕ್ಕಾಗಿ ಎಲ್ಲಿಂದಲಾದರೂ ಕೆಲಸ ಮಾಡಬಹುದೆಂದು ತಿಳಿಸಿದ್ದಾರೆ. ಮುಂದಿನ 100 ದಿನಗಳಲ್ಲಿ ನೀರಿನ ಕೊರತೆಯಿಂದ ಕಂಪನಿಗಳು ನಿಭಾಯಿಸಬೇಕಿದೆ. ಕಳೆದ ಏಳು ತಿಂಗಳಿನಿಂದ ನಗರದಲ್ಲಿ ಮಳೆ ಬಂದಿಲ್ಲ. ಅಷ್ಟೇ ಅಲ್ಲ ಚೆನ್ನೈನಲ್ಲಿ, ಮುಂದಿನ ತಿಂಗಳು ನೀರಿನ ಬಿಕ್ಕಟ್ಟನ್ನು ಎದುರಿಸಬೇಕಿದೆ. ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ಸುದ್ದಿ ಪ್ರಕಾರ, 12 ಐಟಿ ಕಂಪೆನಿಗಳಲ್ಲಿ ಕೆಲಸ ಮಾಡುವ 5 ಸಾವಿರ ಉದ್ಯೋಗಿಗಳನ್ನು ಮನೆಯಿಂದ ಕೆಲಸ ಮಾಡಲು ಕೇಳಲಾಗುತ್ತದೆ.


ಈ ಮೊದಲು 'ವರ್ಕ್ ಫ್ರಮ್ ಹೋಂ' ನೀಡಿದ್ದ ಕಂಪನಿಗಳು:
ಈ ಮೊದಲು ಕೂಡ ಈ ಐಟಿ ಕಂಪನಿಗಳು ತಮ್ಮ ನೌಕರರಿಗೆ 'ವರ್ಕ್ ಫ್ರಮ್ ಹೋಂ' ಅವಕಾಶ ನೀದುತ್ತು. ಆ ಸಮಯದಲ್ಲಿ ಖಾಸಗಿ ಟ್ಯಾಂಕರ್ ನಿರ್ವಾಹಕರು ಮುಷ್ಕರವನ್ನು ಘೋಷಿಸಿದರು. ಓಲ್ಡ್ ಮಹಾಬಲಿಪುರಂನಲ್ಲಿ 600 IT ಮತ್ತು ITA ಸಂಸ್ಥೆಗಳಿವೆ. ನೀರಿನ ಬಳಕೆ ಕಡಿಮೆ ಮಾಡಲು ಕಂಪನಿಗಳು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿವೇ. ಕೆಲವು ಕಂಪನಿಗಳು ಕುಡಿಯುವ ನೀರನ್ನು ತಮ್ಮ ಮನೆಯಿಂದಲೇ ತರುವಂತೆ ನೌಕರರಿಗೆ ತಿಳಿಸಿದ್ದಾರೆ. ಅಂದಾಜು ಪ್ರಕಾರ, ಓಲ್ಡ್ ಮಹಾಬಲಿಪುರಂ ಪ್ರದೇಶದಲ್ಲಿ, ಬೇಸಿಗೆಯಲ್ಲಿ 30 ಮಿಲಿಯನ್ ಲೀಟರ್ ನೀರಿನ ಅಗತ್ಯವಿರುತ್ತದೆ, ಅದರಲ್ಲಿ ಹೆಚ್ಚಿನ ನೀರನ್ನು ಹೊರಗಿನಿಂದ ತರಿಸಲಾಗುತ್ತದೆ.