Wayanad Lok Sabha Results: ಕೇರಳ ರಾಜ್ಯದಲ್ಲಿ ಪಾಲಕ್ಕಾಡ್ ಮತ್ತು ಚೇಲಕ್ಕರ ವಿಧಾನಸಭಾ ಕ್ಷೇತ್ರಗಳ ಚಣಾವಣೆ ನಡೆದಿತ್ತು, ಇದರ ಜೊತೆಗೆ ವಯನಾಡು ಲೋಕಾಸಭಾ ಕ್ಷೇತ್ರದ ಚಣಾವಣೆ ಕೂಡ ನಡೆದಿತ್ತು. ಇದೀಗ ಇಂದೇ ವಯನಾಡು ಲೋಕಾಸಭಾ ಕ್ಷೇತ್ರದ ಫಲಿತಾಂಶ ಹೊರಬೀಳಲಿದೆ.


COMMERCIAL BREAK
SCROLL TO CONTINUE READING

ಮತ ಎಣಿಕೆ ಈಗಾಗಲೆ ಎಲ್ಲಾ ಸಿದ್ಧತೆಗಳು ನಡೆದಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಕಾರ್ಯ ಶುರುವಾಗಲಿದೆ. ಈ ಚುಣಾವಣೆ ಫಲಿತಾಂಶಕ್ಕಾಗಿ ಎಲ್ಲರು ಕಾತುರದಿಂದ ಕಾಯುತ್ತಿದ್ದಾರೆ. ಏಕೆಂದರೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ. 


ದಕ್ಷಿಣ ರಾಜ್ಯದಿಂದ ಚುನಾವಣಾ ಮೂಲಕ ಪ್ರಿಯಾಂಕ ವಾದ್ರಾ ಕಣಕ್ಕೆ ಪದಾರ್ಪಣೆ ಮಾಡಿದ್ದಾರೆ. ಇದರಿಂದಾಗಿ ಈ ಚುಣಾವಣಾ ಫಲಿತಾಂಶ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ವಯನಾಡು ಲೋಕಸಭಾ ಕ್ಷೇತ್ರವು  7 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಸಾರ್ವತ್ರಿಕ ಚುನಾವಣೆಯಲ್ಲಿ ರಾಹುಲ್​ ಗಾಂಧಿ ಈ ವರ್ಷ ಗೆಲುವು ಸಾಧಿಸಿದ್ದರು. ರಾಯಬರೇಲಿ ಕ್ಷೇತ್ರದಲ್ಲಿಯೂ ರಾಹುಲ್‌ ಗಾಂಧಿ ಗೆದ್ದಿದ್ದ ಕಾರಣ ವಯನಾಡು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಇದೇ ಕಾರಣದಿಂದ ಇದೀಗ ಕ್ಷೇತ್ರದ ಜನರು ಮತ್ತೊಂದು ಉಪಚುನಾವಣೆಯನ್ನು ಎದುರಿಸುತ್ತಿದ್ದಾರೆ.


ವಯನಾಡ್‌ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಉಪಚುನಾವಣಾ ಕಣದಲ್ಲಿದ್ದಾರೆ. ಇನ್ನೂ ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್​ ನೇತೃತ್ವದ ಯುಡಿಎಫ್​ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ತ್ಯನ್​ ಮೊಕೆರಿ ಮತ್ತು ಬಿಜೆಪಿ ನೇತೃತ್ವದ ಎನ್​ಡಿಎ ಅಭ್ಯರ್ಥಿಯಾಗಿ ನವ್ಯ ಹರಿದಾಸ್​ ಕಣದಲ್ಲಿದ್ದಾರೆ.


ಇನ್ನೂ ರಾಹುಲ್‌ ಕ್ಷೇತ್ರದಲ್ಲಿ ಗೆದ್ದು ಬೀಗ್ತಾರಾ ಸಹೋದರಿ..? ಎನ್ನುವ ಕುತೂಹಲ ಎಲ್ಲರಲ್ಲೂ ಶುರುವಾಗಿದ್ದು, ಮಧ್ಯಾನದ ವೇಳೆಗೆ ಈ ಕುತೂಹಲಕ್ಕೆ ತೆರೆ ಬೀಳಲಿದೆ, ಇನ್ನೂ ಇಂದು ಪ್ರಕಟವಾಗುವ ಫಲಿತಾಂಶದ ಮೇಲೆ ಪ್ರೀಯಾಂಕ ವಾದ್ರಾ ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.