ಲಕ್ನೋ: ಪ್ರಧಾನಿ ಮೋದಿ ಸರ್ಕಾರ ಪ್ರಸ್ತಾಪಿಸಿರುವ  ಒಂದು ರಾಷ್ಟ್ರ ಒಂದು ಚುನಾವಣೆಗೆ ಸಿದ್ದ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇತ್ತೀಚಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಇದಕ್ಕೆ ಬೆಂಬಲ ವ್ಯಕ್ತಪಡಿಸಿರುವುದರ ಹಿನ್ನಲೆಯಲ್ಲಿ  ಮಾತನಾಡಿದ ಅವರು " ನಾವು ಒಂದು ರಾಷ್ಟ್ರ ಒಂದು ಚುನಾವಣೆ ಸಿದ್ದ, 2019ಕ್ಕೆ ನಿಮ್ಮ ತಯಾರಿಯನ್ನು ನಡೆಸಿ, ಈ ವಿಷಯದಲ್ಲಿ ನಾವು ನಿಮ್ಮ ಜೊತೆ ಇರುತ್ತೇವೆ" ಎಂದು ತಿಳಿಸಿದರು.


ಮಂಗಳವಾರದಂದು ಯೋಗಿ ಆದಿತ್ಯನಾಥ್ ಅವರು ದೇಶದ ಅಭಿವೃದ್ದಿಯ ನಿಟ್ಟಿನಲ್ಲಿ ಏಕಕಾಲಕ್ಕೆ ಚುನಾವಣೆಯನ್ನು ನಡೆಸುವ ಕುರಿತಾಗಿ ಮಾಧ್ಯಮಗಳಿಗೆ ಉತ್ತರಿಸಿದ್ದರು. ಈ ಹಿಂದೆ ಪ್ರಧಾನಿ ಮೋದಿಯಿಂದ ಹಿಡಿದು ಅಮಿತ್ ಶಾ ವರೆಗೆ ಹಲವು ಬಿಜೆಪಿ ನಾಯಕರು ಏಕಕಾಲದ ಚುನಾವಣೆಗೆ ಬೆಂಬಲ ವ್ಯಕ್ತಪಡಿಸಿದ್ದರು. ಈಗ 2019ಕ್ಕೆ ಲೋಕಸಭಾ ಚುನಾವಣೆ ಇರುವುದರಿಂದ ಈ ಚರ್ಚೆಗೆ ಈಗ ಮತ್ತಷ್ಟು ಬೇಡಿಕೆ ಬಂದಿದೆ.