ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ, ಪ್ರತಿಪಕ್ಷಗಳ ನಾಯಕರು ದೆಹಲಿಯ ತಲ್ಕೊಟ ಕ್ರೀಡಾಂಗಣದಲ್ಲಿ ಸೇರಿದ್ದರು. ಈ ವೇಳೆ ಮಾತನಾಡಿಯ ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ ನೇರವಾಗಿ ಬಿಜೆಪಿಯ ಮೇಲೆ ಟೀಕಾ ಪ್ರಹಾರ ನಡೆಸಿದರಲ್ಲದೆ, ಸಂವಿಧಾನದ ಅಡಿಪಾಯವನ್ನು ರಕ್ಷಿಸಲು ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಜನಸಂಘರಕ್ ಸಮ್ಮೇಳನದಲ್ಲಿ ಮಾತನಾಡಿದ ಸೋನಿಯಾ ಗಾಂಧಿ, "ಕೆಲವು ವರ್ಷಗಳ ಹಿಂದೆ ಇಂತಹ ಸಂದರ್ಭಗಳಲ್ಲಿ ನಾವು ಒಟ್ಟುಗೂಡಬೇಕಾಗುತ್ತದೆ ಎಂದು ನಾವು ಭಾವಿಸಿರಲಿಲ್ಲ. ಇಂದು ನಾವು ದೇಶಭಕ್ತಿಯ ಹೊಸ ವ್ಯಾಖ್ಯಾನವನ್ನು ಕಲಿತಿದ್ದೇವೆ. ವೈವಿಧ್ಯತೆಯನ್ನು ಸ್ವೀಕರಿಸದವರನ್ನು ದೇಶಭಕ್ತರು ಎಂದು ಕರೆಯಲಾಗುತ್ತಿದೆ. ಜಾತಿ-ಧರ್ಮದ ಆಧಾರದ ಮೇಲೆ ಜನರ ನಡುವೆ ತಾರತಮ್ಯ ಮಾಡಲಾಗುತ್ತಿದೆ. ಆಹಾರ, ಉಡುಗೆ, ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯದಲ್ಲೂ ನಾವು ನಿರಂಕುಶತ್ವವನ್ನು ಎದುರಿಸುತ್ತಿದ್ದೇವೆ ಎಂದರು.



ಪ್ರಸ್ತುತ ಸರ್ಕಾರ ಜನರು ಉತ್ತಮ ಜೀವನ ನಡೆಸುವುದನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದ ಸೋನಿಯಾ, ನಾವು ಅದರ ವಿರುದ್ಧ ಧೈರ್ಯವಾಗಿ ಹೋರಾಡಬೇಕು. ಭಾರತಕ್ಕೆ ಅಂತಹ ಸರ್ಕಾರದ ಅಗತ್ಯವಿದೆ. ದೇಶದ ಎಲ್ಲಾ ನಾಗರೀಕರು ಜವಾಬ್ದಾರಿಯುತವಾಗಿ ಸಂವಿಧಾನದಲ್ಲಿ ಬರೆದಿರುವ ಮೂಲ ಸ್ವಾತಂತ್ರ್ಯವನ್ನು ಪುನಃ ಸ್ಥಾಪಿಸಬೇಕು. ಸಂವಿಧಾನದ ಅಡಿಪಾಯವನ್ನು ರಕ್ಷಿಸಲು ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.


'ಭವಿಷ್ಯಕ್ಕಾಗಿ ದಣಿವರಿವಿಲ್ಲದೆ ಕೆಲಸ ಮಾಡಬೇಕು' ಎಂಬ ಜವಾಹರ್ ಲಾಲ್ ನೆಹರೂ ಅವರ ಮಾತುಗಳು ನೆನಪಾಗುತ್ತಿದೆ ಎಂದ ಸೋನಿಯಾ, ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವ ಬಗ್ಗೆ ಯಾವುದೇ ಸಂದೇಹವಿಲ್ಲ. ಆ ಭರವಸೆಗಳೆಲ್ಲವೂ ಈಡೇರಲಿದೆ. ನಾವು ಈ ಮೊದಲೂ ಮಾಡಿ ತೋರಿಸಿದ್ದೇವೆ. ಮಂದೆಯೂ ಜನಪರ ಕೆಲಸಗಳನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.


ದೇಶದಲ್ಲಿ 200 ಎನ್ಜಿಒಗಳೊಂದಿಗೆ ಚರ್ಚೆ ನಡೆಸಿದ ವಿರೋಧ ಪಕ್ಷಗಳು, ಈ ವೇಳೆ ಕೇಂದ್ರ ಸರಕಾರದ ನೀತಿ ಮತ್ತು ಅದರ ಕಾರ್ಯವಿಧಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದವು.