ನವದೆಹಲಿ: ಕರ್ನಾಟಕ ಚುನಾವಣೆ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೈಲಾಸ ಮಾನಸ ಸರೋವರ ಯಾತ್ರೆಗೆ ಹೋಗುವುದಾಗಿ ಹೇಳಿದ್ದರು. ಆದರೆ ಯಾತ್ರೆಗೆ ಈವರೆಗೆ ರಾಹುಲ್ ಗಾಂಧಿ ಅವರಿಂದ ಯಾವುದೇ ಮನವಿ ಬಂದಿಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್, "ಮಾನಸ ಸರೋವರ ಯಾತ್ರೆಗೆ ತೆರಳಲು ಇಚ್ಚಿಸುವವರನ್ನು ತಡೆಯುವ ಯಾವ ಆಶಯವೂ ನಮಗಿಲ್ಲ. ಇಲ್ಲಿಯವರೆಗೆ, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಅಡಿಯಲ್ಲಿ ಟಿಬೆಟ್ ಸ್ವಾಯತ್ತ ಪ್ರದೇಶದ ಮಾನಸ ಸರೋವರ ಯಾತ್ರೆಗೆ ರಾಹುಲ್ ಗಾಂಧಿ ಭೇಟಿ ಬಗ್ಗೆ ರಾಹುಲ್ ಗಾಂಧಿ ಅವರಿಂದ ಯಾವುದೇ ಅಧಿಕೃತ ವಿನಂತಿ ಸ್ವೀಕರಿಸಲಿಲ್ಲ" ಎಂದಿದ್ದಾರೆ. 


ಈ ವರ್ಷ ಮಾನಸ ಸರೋವರ ಯಾತ್ರೆಯನ್ನು ಜೂನ್‌ 8ರಿಂದ ಸೆ.8ರ ವರೆಗಿನ ಅವಧಿಯಲ್ಲಿ ಎರಡು ಮಾರ್ಗಗಳ ಮೂಲಕ ನಡೆಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.