ನವದೆಹಲಿ: ಕಾಶ್ಮೀರಿಗಳ ದುಃಸ್ಥಿತಿಗೆ ಕಾಂಗ್ರೆಸ್ ಅನ್ನು ದೂಷಿಸಿದ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ನೂತನ ಸ್ವರ್ಗ ಸೃಷ್ಟಿಸುವ ಭರವಸೆ ನೀಡಿದರು.


COMMERCIAL BREAK
SCROLL TO CONTINUE READING

ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ನರೇಂದ್ರ ಮೋದಿ 'ಈ ನಿರ್ಧಾರ ಭಾರತದ ಏಕತೆಗಾಗಿ. ಈ ನಿರ್ಧಾರವು ಜಮ್ಮು ಮತ್ತು ಕಾಶ್ಮೀರದ ಜನರ ಆಕಾಂಕ್ಷೆಗಳನ್ನು ಮತ್ತು ಕನಸುಗಳನ್ನು ಈಡೇರಿಸುವ ಮಾಧ್ಯಮವಾಗಲಿದೆ ಎಂದರು. ಜಮ್ಮು ಕಾಶ್ಮೀರವನ್ನು ಭಾರತದ ಸಂವಿಧಾನದ ಅಡಿಗೆ ಒಳಪಡಿಸುವ ನಿರ್ಧಾರ ಕೇಂದ್ರ ಸರ್ಕಾರದ್ದಲ್ಲ, ಇದು 130 ಕೋಟಿ ಭಾರತೀಯರ ಭಾವನೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.


'ಈ ನಿರ್ಧಾರವು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಜನರನ್ನು ಹಿಂಸೆ, ಭಯೋತ್ಪಾದನೆ, ಪ್ರತ್ಯೇಕತಾವಾದ, ಭ್ರಷ್ಟಾಚಾರದಿಂದ ಹೊರಗೆ ತರುವುದು 'ಎಂದು ಪ್ರಧಾನಿ ಹೇಳಿದರು. ಅಶಾಂತಿ ಮತ್ತು ಅಪನಂಬಿಕೆಗೆ ಹರಡಲು ಗಡಿಯುದ್ದಕ್ಕೂ ಪ್ರಯತ್ನಗಳು ನಡೆಯುತ್ತಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಉತ್ತೇಜನ ನೀಡಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ ಎಂದರು.


ಜಮ್ಮು ಮತ್ತು ಕಾಶ್ಮೀರದ ಯುವಕರು, ತಾಯಂದಿರು ಮತ್ತು ಸಹೋದರಿಯರು ದೀರ್ಘಕಾಲದ ಹಿಂಸಾಚಾರದಿಂದ ಹೊರಬರಲು ಮನಸ್ಸು ಮಾಡಿದ್ದಾರೆ.ಅವರು ಅಭಿವೃದ್ಧಿ ಮತ್ತು ಹೊಸ ಉದ್ಯೋಗಾವಕಾಶಗಳನ್ನು ಬಯಸುತ್ತಾರೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಲ್ಲಿನ ಸಮಸ್ಯೆಗಳನ್ನು ನಿಗ್ರಹಿಸಲು ನಾವು ಹೊಸ ಪ್ರಯತ್ನಗಳನ್ನು ಮಾಡುವುದಾಗಿ ಭರವಸೆ ನೀಡಿದ್ದೇವೆ. ಇಂದು ದೇಶವು ಆ ಕನಸುಗಳನ್ನು ಈಡೇರಿಸುವತ್ತ ಸಾಗಲು ಪ್ರಾರಂಭಿಸಿದೆ ಎಂದು ನಾನು ತೃಪ್ತಿಯಿಂದ ಹೇಳಬಲ್ಲೆ ಎಂದರು.