ನವದೆಹಲಿ: ನ್ಯೂಜಿಲೆಂಡ್ ಶೂಟೌಟ್ ಪ್ರಕರಣವನ್ನು ಖಂಡಿಸಿ ರಾಹುಲ್ ಗಾಂಧಿ ಮಾಡಿರುವ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಜಗತ್ತಿಗೆ ಮಹಾತ್ಮಾ ಗಾಂಧೀಜಿಯಂತವರು ಬೇಕೇ ಹೊರತು ಹಿಟ್ಲರ್, ಮೋದಿಯಂತವರಲ್ಲ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. 



COMMERCIAL BREAK
SCROLL TO CONTINUE READING

ನ್ಯೂಜಿಲೆಂಡ್ ನಲ್ಲಿ ನಡೆದ ಸಾಮೂಹಿಕ ಶೂಟೌಟ್  ಪ್ರಕರಣದಲ್ಲಿ ಸುಮಾರು ಜನರು ಮೃತಪಟ್ಟಿದ್ದರು.ಈ ಹಿನ್ನಲೆಯಲ್ಲಿ ಟ್ವೀಟ್ ಮಾಡಿ ರಾಹುಲ್ ಈ ಘಟನೆಯನ್ನು ಖಂಡಿಸಿದ್ದರು.


ಇದಕ್ಕೆ ತಕ್ಷಣ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ನ ಹಿರಿಯ ನಾಯಕ ದಿಗ್ವಿಜಯ ಸಿಂಗ್ " ನಾನು ರಾಹುಲ್ ಗಾಂಧಿ ಹೇಳಿರುವುದನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ಜಗತ್ತಿಗೆ ಸನಾತನ ಧರ್ಮ ಗೌತಮ ಬುದ್ಧರಿಂದ ಬಂದಂತಹ ಪ್ರೀತಿ, ಸಹಾನೂಭೂತಿ ಅಗತ್ಯವಿದೆ ಹೊರತು ದ್ವೇಷ ಮತ್ತು ಹಿಂಸೆಯಲ್ಲ. ನಮಗೆ ಮಹಾತ್ಮಾ ಗಾಂಧೀಜಿ,ಮಾರ್ಟಿನ್ ಲೂಥರ್ ಕಿಂಗ್ ರಂತಹ ಪುರುಷರ ಅಗತ್ಯವಿದೆ ಹೊರತು ಹಿಟ್ಲರ್, ಮುಸ್ಸೊಲಿನಿ ಮತ್ತು ಮೋದಿ ಅಂತಹ ವ್ಯಕ್ತಿಗಳಲ್ಲ ಎಂದು ಹೇಳಿದರು.  


ಶುಕ್ರವಾರದಂದು ನ್ಯೂಜಿಲ್ಯಾಂಡ್ ನ ಶೂಟೌಟ್ ನಲ್ಲಿ ಸುಮಾರು 49 ಜನರು ಮೃತಪಟ್ಟಿದ್ದರು.