ನವದೆಹಲಿ: ವರ್ಷಾಂತ್ಯದೊಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಿಸಲು ಅನುವಾಗುವಂತೆ  ಸುಪ್ರೀಂ ಕೋರ್ಟ್‌ ರಾಮ ಜನ್ಮಭೂಮಿ ವಿವಾದವನ್ನು ಬೇಗನೆ ಬಗೆಹರಿಸಿಸಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಕಾರ್ಯಾಧ್ಯಕ್ಷ ಆಲೋಕ್‌ ಕುಮಾರ್‌ ಆಗ್ರಹಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಜೀ ನ್ಯೂಸ್ ಡಿಜಿಟಲ್ ಜೊತೆ ಮಾತನಾಡಿದ ಅಲೋಕ್ ಕುಮಾರ್, ಆರೋಧ್ಯಾ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಕರಣ ತೀರ್ಪು ನೀಡುವಲ್ಲಿ ಸುಪ್ರೀಂ ಕೋರ್ಟ್ ಸಾಕಷ್ಟು ವಿಳಂಬ ಮಾಡಿದೆ. ಸುಪ್ರೀಂ ಕೋರ್ಟ್ ಎಷ್ಟು ಬೇಗ ತೀರ್ಪು ನೀಡುತ್ತದೆಯೋ, ಅಷ್ಟು ಬೇಗ ರಾಮಮಂದಿರ ನಿರ್ಮಾಣ ಮಾಡಲು ಸಾದ್ಯ. ವಕೀಲರ ಪ್ರಕಾರ, ವಿಶ್ವಹಿಂದೂ ಪರಿಷತ್ ಅಥವಾ ರಾಮ್ ಲಾಲ್ ಅವರ ಕೇಸು ಹೆಚ್ಚು ಬಲವಾಗಿದೆ. ಹಾಗಾಗಿ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.


ಮುಂದುವರೆದು ಮಾತನಾಡಿದ ಅವರು, ಅಯೋಧ್ಯೆಯ ವಿವಾದಿತ ತಾಣವು ರಾಮ ಲಲ್ಲಾನಿಗೆ ಸೇರಿದ್ದೆಂದು ಸುಪ್ರೀಂ ಕೋರ್ಟ್‌ ತೀರ್ಪು ಕೊಟ್ಟಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಿಸುವುದು ಸುಲಭವಾಗುವುದು. ಒಂದು ವೇಳೆ ಸುಪ್ರೀಂ ಕೋರ್ಟ್ ತೀರ್ಪು ನೀಡಲು ವಿಳಂಬ ಮಾಡಿದರೆ ಉಗ್ರ ಹೋರಾಟ ಮಾಡುವುದಾಗಿ ಅವರು ತಿಳಿಸಿದರು.