ಶಿಲ್ಲಾಂಗ್(ಮೇಘಾಲಯ) : 2019ರಲ್ಲಿ ಕೇಂದ್ರದಲ್ಲಿ  ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ಸರಕು ತೆರಿಗೆ ಮತ್ತು ಸರಕು ತೆರಿಗೆ (ಜಿಎಸ್ಟಿ)ಯ ರಚನೆಯನ್ನು ಸರಳಿಕರಿಸಲಿದ್ದೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬುಧವಾರ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇಲ್ಲಿನ ಸೇಂಟ್ ಎಡ್ಮಂಡ್ ಕಾಲೇಜಿನಲ್ಲಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, "ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ, ಜಿಎಸ್ಟಿ ರಚನೆಯಲ್ಲಿ ಬದಲಾಯಿಸಿ ಅದನ್ನು ಸರಳಿಕರಿಸಲಿದ್ದೇವೆ" ಎಂದು ತಿಳಿಸಿದರು.


ಇನ್ನು ಮುಂದುವರೆದು ಮಾತನಾಡಿದ ರಾಹುಲ್ "ನಾವು ಅಧಿಕಾರದಲ್ಲಿದ್ದಾಗ ಭಿನ್ನವಾದ ಜಿಎಸ್ಟಿಯನ್ನು ಪ್ರಸ್ತಾಪಿಸಿದ್ದೆವು. ಅದರಲ್ಲಿ ಜನರು ಬಳಸುವ ಉತ್ಪನ್ನಗಳನ್ನು ತೆರಿಗೆಯಿಂದ ಹೊರಗೆ ಇಡಲಾಗಿತ್ತು ಆದ್ದರಿಂದ ಅಧಿಕಾರಕ್ಕೆ ಬಂದಲ್ಲಿ ನಾವು ಈ ಹಿಂದೆ ಪ್ರಸ್ತಾಪಿಸಿದ ಜಿಎಸ್ಟಿ ರಚನೆಯ ಮುಂದುವರೆದ ಭಾಗವಾಗಿ ಅದನ್ನು ಜಾರಿಗೊಳಿಸಲಿದ್ದೇವೆ" ಎಂದು ಅಭಿಪ್ರಾಯಪಟ್ಟರು.


ಇದೆ ಸಂದರ್ಭದಲ್ಲಿ ಬಿಜೆಪಿ ಜಾರಿಗೆ ತಂದಿರುವ ಈ ಐದು ಹಂತದ ಸಂಕೀರ್ಣ ರಚನೆಯ ಜಿಎಸ್ಟಿಯು ದೇಶಾದ್ಯಂತ ಸಾಮಾನ್ಯ ಜನರಿನ್ನು ತೊಂದರೆ ಅನುಭವಿಸುವಂತೆ ಮಾಡಿದೆ ಮತ್ತು ಲಕ್ಷಾಂತರ ಜನರು ಇದರಿಂದಾಗಿ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ ಎಂದು ಬಿಜೆಪಿ ಮೇಲೆ ಕಿಡಿಕಾರಿದರು.