ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾಗಿದೆ ಮಾಸ್ಕ್ ಧರಿಸಿ ಎಂದು ಒಬಾಮಾಗೆ ಪತ್ರ ಬರೆದ ದೆಹಲಿ ನಿವಾಸಿ
ನಗರದಲ್ಲಿನ ಟೌನ್ ಹಾಲ್ ಸಭೆಯಲ್ಲಿ ಪಾಲ್ಗೊಳ್ಳುವಾಗ ಮುಖವಾಡ ಧರಿಸಲು ಮಾಜಿ ಯು.ಎಸ್. ಅಧ್ಯಕ್ಷ ಬರಾಕ್ ಒಬಾಮರಿಗೆ ದೆಹಲಿ ನಿವಾಸಿ ಮನವಿ ಮಾಡಿದ್ದಾರೆ.
ನವದೆಹಲಿ: ನಗರದಲ್ಲಿನ ಟೌನ್ ಹಾಲ್ ಸಭೆಯಲ್ಲಿ ಪಾಲ್ಗೊಳ್ಳುವಾಗ ಮುಖವಾಡ ಧರಿಸಲು ಮಾಜಿ ಯುಎಸ್ ಅಧ್ಯಕ್ಷ ಬರಾಕ್ ಒಬಾಮರಿಗೆ ದೆಹಲಿ ನಿವಾಸಿ ಮನವಿ ಮಾಡಿದ್ದಾರೆ. ಹೀಗೆ ಮಾಡುವುದರಿಂದ ಜಾಗೃತಿ ಮೂಡಿಸುವ ಮತ್ತು ವಾಯು ಮಾಲಿನ್ಯದ ವಿರುದ್ಧ ಕ್ರಮ ತೆಗೆದುಕೊಳ್ಳಲು ಅದು ಪ್ರೇರೇಪಿಸುತ್ತದೆ ಒಬಾಮಾಗೆ ತೆರೆದ ಪತ್ರದಲ್ಲಿ ಡಾಟಾ ಸೈಂಟಿಫಿಕ್ ಅಮೃತ್ ಶರ್ಮಾ ಹೇಳಿದ್ದಾರೆ.
ಸತತ ಏಳನೇ ದಿನವೂ ದೆಹಲಿಯಲ್ಲಿ ವಾಯು ಗುಣಮಟ್ಟವು ತುಂಬಾ ಕೆಟ್ಟದಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಇಂದು ಏರ್ ಕ್ವಾಲಿಟಿ ಇಂಡೆಕ್ಸ್ (AUI) 360 ಅನ್ನು ದಾಖಲಿಸಿದೆ. ಒಬಾಮಾ ಜೊತೆ ಸಂಭಾಷಣೆ ಅಧಿವೇಶನದಲ್ಲಿ ಪಾಲ್ಗೊಳ್ಳಲು, ಶರ್ಮಾರನ್ನು ಟೌನ್ ಹಾಲ್ಗೆ ಆಹ್ವಾನಿಸಲಾಗಿದೆ. ಬರಾಕ್ ಒಬಾಮಾ ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಭೇಟಿಯಾಗಲಿದ್ದಾರೆ. ಟೌನ್ ಹಾಲ್ನಲ್ಲಿ, ಒಬಾಮಾ 300 ವಿವಿಧ ಯುವ ನಾಯಕರೊಂದಿಗೆ ಮಾತನಾಡಲಿದ್ದಾರೆ.