Weather Alert 18-05-2023: ಕಳೆದ 3 ದಿನಗಳಿಂದ ಬಿಸಿಲಿನ ತಾಪದ ಬೆಂದಿದ್ದ ಜನರಿಗೆ ಬುಧವಾರ ರಾತ್ರಿ ಕೊಂಚ ನೆಮ್ಮದಿ ಸಿಕ್ಕಿದೆ. ಬುಧವಾರ ತಡರಾತ್ರಿ ದೆಹಲಿ-ಎನ್‌ಸಿಆರ್ ಸೇರಿದಂತೆ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ಬಲವಾದ ಗಾಳಿಯೊಂದಿಗೆ ತುಂತುರು ಮಳೆಯಾಗಿದೆ. ಇದರೊಂದಿಗೆ ತಾಪಮಾನವೂ 2-3 ಡಿಗ್ರಿ ಇಳಿಕೆಯಾಗಿದೆ. ಆದರೆ ಗುಡುಗು ಸಹಿತ ಮಳೆಯ ಹೊರತಾಗಿಯೂ, ದಿನದ ಗರಿಷ್ಠ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ ಎಂದು ಇಲಾಖೆ ಮೂಲಗಳು ಹೇಳುತ್ತಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Shukra Gochar 2023: ಈ ರಾಶಿಯವರಿಗೆ ಇನ್ಮುಂದೆ ಶುಕ್ರದೆಸೆ ಶುರು: ಸಂಪತ್ತಿಗಿರಲ್ಲ ಕಿಂಚಿತ್ತು ಕೊರತೆ; ಇರೋ-ಬರೋ ಅದೃಷ್ಟವೆಲ್ಲಾ ಇವರದ್ದೇ..!


ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಪ್ರಕಾರ, ಬುಧವಾರದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಶ್ಚಾತ್ಯ ಪ್ರಕ್ಷುಬ್ಧತೆ ಸಕ್ರಿಯವಾಗಿದೆ. ಇದರ ಪರಿಣಾಮದಿಂದ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಬಲವಾದ ಗಾಳಿ ಬೀಸಿದ್ದು, ಹಲವೆಡೆ ಗುಡುಗು ಸಹಿತ ಮಳೆ ಸುರಿದಿದೆ. ಕಳೆದ 24 ಗಂಟೆಗಳ ಹವಾಮಾನದ ಬಗ್ಗೆ ತಿಳಿಯುವುದಾದರೆ, ದಕ್ಷಿಣ ಹರಿಯಾಣದಲ್ಲಿ ಲಘು ಧೂಳಿನ ಬಿರುಗಾಳಿ ಬೀಸಿದೆ. ಕರಾವಳಿ ಆಂಧ್ರಪ್ರದೇಶ, ಪೂರ್ವ ಮಧ್ಯಪ್ರದೇಶ ಮತ್ತು ಆಗ್ನೇಯ ಉತ್ತರ ಪ್ರದೇಶ ಮತ್ತು ಹರಿಯಾಣದ ಕೆಲವೆಡೆ ಲಘು ಮಳೆಯಾಗಿದೆ. ಸಿಕ್ಕಿಂ, ಕರಾವಳಿ ಒಡಿಶಾ, ಆಂತರಿಕ ತಮಿಳುನಾಡಿನ ಕೆಲವು ಭಾಗಗಳು, ದಕ್ಷಿಣ ಕರ್ನಾಟಕ, ದಕ್ಷಿಣ ಮಧ್ಯಪ್ರದೇಶ ಮತ್ತು ಗುಜರಾತ್‌ ನಲ್ಲಿ ಕೂಡ ಹಗುರದಿಂದ ಸಾಧಾರಣ ಮಳೆಯಾಗಿದೆ.


ಇನ್ನು ದೆಹಲಿಯಲ್ಲಿನ ಮುಂದಿನ 24 ಗಂಟೆಗಳ ಹವಾಮಾನ ಪರಿಸ್ಥಿತಿಯ ಬಗ್ಗೆ ತಿಳಿಯುವುದಾದರೆ, ಪಂಜಾಬ್, ಹರಿಯಾಣ, ವಾಯುವ್ಯ ಉತ್ತರ ಪ್ರದೇಶ ಮತ್ತು ಉತ್ತರ ರಾಜಸ್ಥಾನದ ಕೆಲವು ಭಾಗಗಳಲ್ಲಿ ಲಘು ಮಳೆಯೊಂದಿಗೆ ಧೂಳಿನಿಂದ ಕೂಡಿದ ಬಿರುಗಾಳಿ ಬೀಸಬಹುದು. ಇಂದು ಮತ್ತು ನಾಳೆ ಅಂದರೆ ಮೇ 19ರಂದು ದೆಹಲಿ-ಎನ್‌ಸಿಆರ್ ಜನರಿಗೆ ಮಳೆರಾಯನ ದರ್ಶನದಿಂದ ತಂಪಾದ ವಾತವಾರಣ ಸಿಗಬಹುದು. ಮೇ 20-21 ರಂದು ಬಲವಾದ ಬಿಸಿಲು ಇರುತ್ತದೆ. ಮೇ 22 ರಂದು ಹಗಲಿನಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಮೇ 23 ರಂದು ಕೂಡ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.


ಈ ಸಮಯದಲ್ಲಿ, ಈಶಾನ್ಯ ಭಾರತದ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಮತ್ತು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕೇರಳ, ತಮಿಳುನಾಡು, ಈಶಾನ್ಯ ಬಿಹಾರ ಮತ್ತು ಗಿಲ್ಗಿಟ್-ಬಲಿಸ್ತಾನ್, ಮುಜಫರಾಬಾದ್, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು.


ಇದನ್ನೂ ಓದಿ: Horoscope: ಇಂದು ಈ ರಾಶಿಗಳ ಮೇಲೆ ಗುರುವಿನ ದಯೆ; ವ್ಯಾಪಾರದಲ್ಲಿ ಭಾರೀ ವೃದ್ಧಿ; ಧನಲಾಭ ಖಚಿತ!


ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆ ಎಚ್ಚರಿಕೆ:


ಹವಾಮಾನ ಇಲಾಖೆ ಪ್ರಕಾರ, ಮುಂದಿನ 3 ದಿನಗಳ ಕಾಲ ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಅಸ್ಸಾಂ, ಮೇಘಾಲಯ, ಮಣಿಪುರ, ಅರುಣಾಚಲ ಪ್ರದೇಶ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಮೇ 18 ರಿಂದ 21 ರವರೆಗೆ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ. ದೇಶದ ಉಳಿದ ರಾಜ್ಯಗಳಲ್ಲಿ ಮುಂದಿನ 2 ದಿನಗಳ ಕಾಲ ಹವಾಮಾನದಲ್ಲಿ ಯಾವುದೇ ಮಹತ್ವದ ಬದಲಾವಣೆಯಾಗುವ ಸಾಧ್ಯತೆ ಇಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.