ನವದೆಹಲಿ:  ಕರೋನಾ ಸಂಕಟದ ಮಧ್ಯೆ ಬೇಸಿಗೆಯ ಬೇಗೆಯ ದಿನಗಳು ಜನರನ್ನು ಕಂಗಾಲಾಗಿಸಿದೆ. ವಾಯುವ್ಯ ಸೇರಿದಂತೆ ಮಧ್ಯ ಭಾರತದ ಅನೇಕ ಭಾಗಗಳಲ್ಲಿ ತೀವ್ರ ಶಾಖದ ಅಲೆ ಇದೆ. ದೆಹಲಿ-ಎನ್‌ಸಿಆರ್‌ನಲ್ಲಿ ಇಂದಿಗೂ ಬೇಗೆಯ ಉಷ್ಣತೆ ಮುಂದುವರೆದಿದೆ. ಹವಾಮಾನ ಇಲಾಖೆಯ ಪ್ರಕಾರ ಇಂದು ಉಷ್ಣಾಂಶವು 46 ಡಿಗ್ರಿ ಸೆಲ್ಸಿಯಸ್ ವರೆಗೆ ಏರಬಹುದು. ಇದು 2002ರ ದಾಖಲೆಯನ್ನು ಮುರಿಯಲಿದೆ.


COMMERCIAL BREAK
SCROLL TO CONTINUE READING

ಮಂಗಳವಾರ ದೆಹಲಿ-ಎನ್‌ಸಿಆರ್‌ನಲ್ಲಿನ ತಾಪಮಾನವು 46 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದು ಈ ಋತುವಿನ ಅತಿ ಹೆಚ್ಚು ತಾಪಮಾನ ಎಂದು ದಾಖಲಿಸಲಾಗಿದೆ. 1944ರಲ್ಲಿ ಪಾದರಸ ದೆಹಲಿಯ ಸಫ್ದರ್ಜಂಗ್‌ನಲ್ಲಿ 47.2 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದಾಗ ಸಾರ್ವಕಾಲಿಕ ದಾಖಲೆಯನ್ನು ದಾಖಲಿಸಲಾಗಿದೆ. ಕೊನೆಯ ಬೇಸಿಗೆಯ ದಾಖಲೆ 1998ರಲ್ಲಿ ತಾಪಮಾನವು 46.6 ಡಿಗ್ರಿ ಸೆಲ್ಸಿಯಸ್‌ಗೆ ಏರಿತು. 2002ರ ವರ್ಷದಲ್ಲಿಯೂ ಸಹ ತಾಪಮಾನವು 46 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.


ಹವಾಮಾನ ಇಲಾಖೆಯ ಪ್ರಕಾರ ದೆಹಲಿ-ಎನ್‌ಸಿಆರ್‌ನಲ್ಲಿ ಇಂದು ತಾಪಮಾನವು 46 ಡಿಗ್ರಿಗಳಿಗಿಂತ ಹೆಚ್ಚಿದ್ದರೆ 2002ರ ಬೇಸಿಗೆಯ ದಾಖಲೆಯನ್ನು ಮುರಿಲಿದೆ. ಇಂದು ಬೆಳಿಗ್ಗೆ ಕನಿಷ್ಠ ತಾಪಮಾನವನ್ನು 28 ಡಿಗ್ರಿಗಳಲ್ಲಿ ದಾಖಲಿಸಲಾಗಿದೆ, ಇದು ಸಾಮಾನ್ಯಕ್ಕಿಂತ ಎರಡು ಡಿಗ್ರಿ, ಆದರೆ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 6 ಡಿಗ್ರಿಗಳಾಗಿದೆ. ದೆಹಲಿ ಎನ್‌ಸಿಆರ್‌ನಲ್ಲಿ ಬೆಚ್ಚಗಿನ ಗಾಳಿ ಮುಂದುವರಿಯಲಿದೆ. ಪ್ರಸ್ತುತ ಮುಂಬರುವ ಎರಡು ದಿನಗಳಲ್ಲಿ ದೆಹಲಿಯು ಶಾಖದಿಂದ ಪರಿಹಾರ ಪಡೆಯುವ ಭರವಸೆ ಇಲ್ಲ. 


ಈ 5 ರಾಜ್ಯಗಳಲ್ಲಿ ರೆಡ್ ಅಲರ್ಟ್:
ದೆಹಲಿ, ರಾಜಸ್ಥಾನ, ಹರಿಯಾಣ, ಪಂಜಾಬ್ ರಾಜ್ಯಗಳಲ್ಲಿ ಐಎಂಡಿ ರೆಡ್ ಅಲರ್ಟ್ ಘೋಷಿಸಿದೆ. ಏಕೆಂದರೆ ಈ ಪ್ರದೇಶಗಳಲ್ಲಿ ತಾಪಮಾನ ಹೆಚ್ಚುವ ಅಪಾಯವಿದ್ದು, ಉಷ್ಣಾಂಶದ ಹೊಡೆತದಿಂದ ಪಾರಾಗುವ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದೆ. ಅಲ್ಲದೆ ಜನರು ಅನಗತ್ಯವವಾಗಿ ಮನೆಯಿಂದ ಹೊರಬೀಳಬಾರದು ಎಂದು ಇಲಾಖೆ ಹೇಳಿದೆ.


ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಮೇ 29-30ರಂದು ಧೂಳಿನೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ, ಅದರ ನಂತರ ತಾಪಮಾನ ಕುಸಿಯಬಹುದು. ಅಲ್ಲದೆ ಹವಾಮಾನ ಇಲಾಖೆಯು ಮೇ 31 ರಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದೆ.