Weather Update: ಉತ್ತರ ಭಾರತದಲ್ಲಿ ಗುಡುಗು ಸಹಿತ ಭಾರಿ ಮಳೆ, ದೆಹಲಿಯಲ್ಲಿ ಭೂಕಂಪ
ಹವಾಮಾನ ಇಲಾಖೆಯ ಪ್ರಕಾರ, ಹಿಮಾಚಲ ಪ್ರದೇಶದ ಅನೇಕ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ನಿನ್ನೆ ರಾತ್ರಿ ಸೋಲನ್, ಹಮೀರ್‌ಪುರ, ಮಂಡಿ, ಕುಲ್ಲು ಮತ್ತು ಶಿಮ್ಲಾದಲ್ಲಿ ಭಾರಿ ಮಳೆಯಾಗಿದೆ.
ನವದೆಹಲಿ: ಉತ್ತರ ಭಾರತ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಸೋಮವಾರ ಧಾರಾಕಾರ ಮಳೆಯಾಗಿದ್ದು, ನಂತರ ಹವಾಮಾನ ಬದಲಾಗಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ಸಹ, ಕಳೆದ ರಾತ್ರಿಯ ಮಳೆಯಿಂದಾಗಿ ತಾಪಮಾನ ಕಡಿಮೆಯಾಗಿದೆ. ಅನೇಕ ಪ್ರದೇಶಗಳಲ್ಲಿ, ಭಾರೀ ಬಿರುಗಾಳಿಯೊಂದಿಗೆ ಬಂದ ಮಳೆಯಿಂದಾಗಿ ಮರಗಳು ಧರೆಗುರುಳಿದ್ದು ಸಂಚಾರ ದಟ್ಟಣೆಯಂತಹ ಪರಿಸ್ಥಿತಿಗೆ ಕಾರಣವಾಯಿತು. ಈ ಮಧ್ಯೆ ರಾಷ್ಟ್ರ ರಾಜಧಾನಿಯಲ್ಲಿ ಭೂಕಂಪ ಸಂಭವಿಸಿದೆ.
ದೆಹಲಿಯಲ್ಲಿ ಭೂಕಂಪ:
ಕಳೆದ ರಾತ್ರಿ ದೆಹಲಿಯಲ್ಲಿ ಭಾರಿ ಮಳೆಯ ನಡುವೆ ಲಘು ಭೂಕಂಪ (Earthquake) ಉಂಟಾಗಿದೆ. ರೋಹಿಣಿ ಪ್ರದೇಶದಲ್ಲಿ ಈ ನಡುಕಗಳ ತೀವ್ರತೆಯನ್ನು ರಿಕ್ಟರ್ ಪ್ರಮಾಣದಲ್ಲಿ 2.4 ಎಂದು ದಾಖಲಾಗಿದೆ. ಆದರೆ ಇದರಿಂದ ಯಾವುದೇ ಆಸ್ತಿ-ಪಾಸ್ತಿ ಅಥವಾ ಜೀವಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಇದಲ್ಲದೆ, ಅನೇಕ ಪ್ರದೇಶಗಳಲ್ಲಿ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗಿದೆ.
Coronavirus ಮೂರನೇ ಅಲೆ ಸಾಧ್ಯತೆ ಹೇಗೆ ಕಡಿಮೆಯಾಗಲಿದೆ? ಮುಖ್ಯ ಆರ್ಥಿಕ ಸಲಹೆಗಾರ ಹೇಳಿದ್ದೇನು?
ಅದೇ ಸಮಯದಲ್ಲಿ, ಹವಾಮಾನ ಇಲಾಖೆಯ ಪ್ರಕಾರ, ಹಿಮಾಚಲ ಪ್ರದೇಶದ (Himachal Pradesh) ಅನೇಕ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ನಿನ್ನೆ ರಾತ್ರಿ ಸೋಲನ್, ಹಮೀರ್‌ಪುರ, ಮಂಡಿ, ಕುಲ್ಲು ಮತ್ತು ಶಿಮ್ಲಾದಲ್ಲಿ ಭಾರಿ ಮಳೆಯಾಗಿದೆ.
ಇದನ್ನೂ ಓದಿ - Corona Vaccine: ಕರೋನಾ ಲಸಿಕೆ ಪಡೆದು 10 ಕೋಟಿ ಗೆಲ್ಲುವ ಅವಕಾಶ
ಗಾಳಿಯೊಂದಿಗೆ ಮಳೆ:
ದೆಹಲಿ-ಎನ್‌ಸಿಆರ್‌ನಲ್ಲೂ ಸೋಮವಾರ ರಾತ್ರಿ ಭಾರಿ ಮಳೆಯಿಂದಾಗಿ ಹವಾಮಾನ ತಣ್ಣಗಾಗಿದೆ. ಈ ಅವಧಿಯಲ್ಲಿ ರಾಜಧಾನಿಯ ಸುತ್ತಮುತ್ತಲಿನ ಘಜಿಯಾಬಾದ್‌ನ ಲೋನಿ, ಬಹದ್ದೂರ್‌ಗಢದಲ್ಲಿ 50-80 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿತ್ತು. ಹರಿಯಾಣ, ರಾಜಸ್ಥಾನ ಮತ್ತು ಪಶ್ಚಿಮ ಉತ್ತರ ಪ್ರದೇಶದ ಪಕ್ಕದ ದೆಹಲಿಯಲ್ಲೂ ಇದೇ ಹವಾಮಾನ ಮುಂದುವರೆದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.