ನವದೆಹಲಿ: ಎರಡು ದಿನಗಳ ಹಿಂದಷ್ಟೇ ಒಡಿಶಾ, ಪಶ್ಚಿಮ ಬಂಗಾಳದ ಕರಾವಳಿಯನ್ನು ಅಪ್ಪಳಿಸಿದ್ದ ಯಾಸ್ ಚಂಡಮಾರುತದಿಂದಾಗಿ (Yaas Cyclone) ಹಲವೆಡೆ ಭಾರೀ ಮಳೆಯಾಗುತ್ತಿದೆ. ಸತತ ಮಳೆಯಿಂದಾಗಿ ದೇಶದ ಅನೇಕ ಪ್ರದೇಶಗಳಲ್ಲಿ ತಾಪಮಾನದಲ್ಲಿ ಕುಸಿತ ಕಂಡುಬಂದಿದೆ. ಅದರಲ್ಲೂ ಉತ್ತರ ಭಾರತದ ಅನೇಕ ಪ್ರದೇಶಗಳಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೂ ಮಳೆಯಾಗುತ್ತಿದೆ.


COMMERCIAL BREAK
SCROLL TO CONTINUE READING

ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಮಳೆ:
ಉತ್ತರ ಪ್ರದೇಶದಲ್ಲಿ ಮಾನ್ಸೂನ್ ಪ್ರಭಾವದಿಂದಾಗಿ ಅನೇಕ ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಇದರಿಂದ ಜನರಿಗೆ ಸುಡುವ ಬಿಸಿಲಿನ ಬೇಗೆಯಿಂದ ಪರಿಹಾರ ಸಿಕ್ಕಂತಾಗಿದೆ.


'ಯಾಸ್' ಚಂಡಮಾರುತದ ಪರಿಣಾಮ ಉತ್ತರ ಪ್ರದೇಶದಲ್ಲಿ ಗೋಚರಿಸುತ್ತದೆ. ಬಂಗಾಳದಿಂದ ಉತ್ತರ ಪ್ರದೇಶಕ್ಕೆ ತಲುಪುವಾಗ, ಅದರ ವರ್ತನೆ ಸಡಿಲಗೊಂಡಿದ್ದರೂ ಸಹ ಚಂಡಮಾರುತದಿಂದಾಗಿ (Yaas Cyclone), ಉತ್ತರ ಪ್ರದೇಶದ ಅನೇಕ ಜಿಲ್ಲೆಗಳಲ್ಲಿ ಹವಾಮಾನವು ಪರಿಣಾಮ ಬೀರಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುರುವಾರ ರಾತ್ರಿಯಿಂದ ನಿರಂತರವಾಗಿ ಮಳೆಯಾಗುತ್ತಿದೆ.


ಇದನ್ನೂ ಓದಿ -  Cyclone Yaas: ಒಡಿಶಾ, ಬಂಗಾಳದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಇಲ್ಲಿದೆ Video


ಚಂಡಮಾರುತದ ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು, ಲಕ್ನೋದ ಪ್ರಾದೇಶಿಕ ಹವಾಮಾನ ಕೇಂದ್ರವು ರಾಜ್ಯದ ಅನೇಕ ಜಿಲ್ಲೆಗಳಿಗೆ ಮಳೆ ಎಚ್ಚರಿಕೆಯನ್ನು ನೀಡಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ 50-60 ಕಿ.ಮೀ ವೇಗದಲ್ಲಿ ಬಲವಾದ ಗಾಳಿಯೊಂದಿಗೆ ಭಾರಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.


ಹವಾಮಾನ ಇಲಾಖೆಯ ಪ್ರಕಾರ, ಶ್ರಾವಸ್ತಿ, ಬಲರಾಂಪುರ್, ಗೊಂಡಾ, ಸಿದ್ಧಾರ್ಥನ್ ನಗರ, ಬಸ್ತಿ, ಎಸ್.ಕೆ.ನಗರ, ಮಹಾರಾಜಗಂಜ್, ಕುಶಿನಗರ, ಗೋರಖ್ಪುರ್, ಡಿಯೋರಿಯಾ, ಬಲ್ಲಿಯಾ, ಅಂಬೇಡ್ಕರನಗರ, ಅಜಮ್‌ಗಢ್, ಮೌ, ಗಾಜಿಪುರ್, ವಾರಣಾಸಿ, ಚಂದೌಲಿ ಮತ್ತು ಸೋನಭದ್ರಾಗಳಲ್ಲಿ ಶುಕ್ರವಾರ ಭಾರಿ ಮಳೆಯಾಗಲಿದೆ (Rain) ಎಂದು ತಿಳಿದುಬಂದಿದೆ.


ಅದೇ ಸಮಯದಲ್ಲಿ, ಅಯೋಧ್ಯೆ, ಸುಲ್ತಾನಪುರ, ಜೌನ್‌ಪುರ, ಪ್ರತಾಪ್‌ಗಢ ಮತ್ತು ಮಿರ್ಜಾಪುರದಲ್ಲಿ ಲಘು ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 


ಇದನ್ನೂ ಓದಿ - Cyclone Yaas : ಒಡಿಶಾ, ಪಶ್ಚಿಮ ಬಂಗಾಳದಲ್ಲಿ ನಗರಗಳಿಗೆ ನುಗ್ಗಿದ ನೀರು, ರಕ್ಷಣಾ ಕಾರ್ಯದಲ್ಲಿ ಸೇನೆ


ಮಾನ್ಸೂನ್ ದಕ್ಷಿಣ ಭಾರತದ ಕಡೆಗೆ ಚಲಿಸುತ್ತಿದೆ:
ನೈಋತ್ಯ ಮಾನ್ಸೂನ್ ಬಂಗಾಳಕೊಲ್ಲಿಯ ಹೆಚ್ಚಿನ ಭಾಗಗಳತ್ತ ಸಾಗಿದೆ ಮತ್ತು ಮೇ 31 ರೊಳಗೆ ಕೇರಳ ತಲುಪುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಗುರುವಾರ ತಿಳಿಸಿದೆ. ಅಲ್ಲದೆ ಗೋವಾದಲ್ಲಿ ಮೇ 28 ರಿಂತ ಸತತ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.