ಪಾಟ್ನಾ: ಪ್ರಧಾನಿ ಮೋದಿ ಇತ್ತೀಚಿಗೆ ಚಂಪಾರಣ ಸತ್ಯಾಗ್ರಹಕ್ಕೆ ನೂರು ವರ್ಷ ತುಂಬಿದ ಹಿನ್ನಲೆಯಲ್ಲಿ ಮಾತನಾಡುತ್ತಾ ಒಂದು ವಾರದಲ್ಲಿ ಬಿಹಾರದಲ್ಲಿ  ಸುಮಾರು 8.5 ಲಕ್ಷ ಶೌಚಾಲಯಗಳನ್ನು ಕಟ್ಟಲಾಗಿದೆ ಎಂದು ಹೇಳಿದ್ದರು.


COMMERCIAL BREAK
SCROLL TO CONTINUE READING

ಈಗ ಈ ಹೇಳಿಕೆಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಆರ್ ಜೆ ಡಿ ನಾಯಕ ತೇಜಸ್ವಿ ಯಾದವ್ " ಪ್ರಧಾನಿಗಳು ಒಂದು ವಾರದಲ್ಲಿ ಬಿಹಾರದಲ್ಲಿ  8.5 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಹೇಳುತ್ತಾರೆ.



ಹಾಗಾದರೆ 
ವಾರ = ಏಳು ದಿನಗಳು 
ದಿನ =24 ಘಂಟೆ 
ಏಳು ದಿನ =168 ಗಂಟೆ 
ಒಂದು ಗಂಟೆ= 60 ನಿಮಿಷ 
ಅದ್ದರಿಂದ 850000%168=5059 ಪ್ರತಿ ಪ್ರತಿ ಗಂಟೆಗೆ ನಿರ್ಮಿಸಲಾಗಿರುವ ಶೌಚಾಲಯಗಳು
5059/60= 84.31 ಪ್ರತಿ ನಿಮಿಷಕ್ಕೆ ನಿರ್ಮಿಸಲಾಗಿರುವ ಶೌಚಾಲಯಗಳು 
 
ಇದು ನಿಜಕ್ಕೂ ಅತಿ ದೊಡ್ಡ ಮೂರ್ಖತನದ ಹೇಳಿಕೆ ಇಂತಹ ಸುಳ್ಳನ್ನು  ಬಿಹಾರದ ಮುಖ್ಯಮಂತ್ರಿಯು ಒಪ್ಪುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ದ ತೇಜಸ್ವಿ ಯಾದವ್ ವ್ಯಂಗವಾಡಿದ್ದಾರೆ.