ನನ್ನ ಮೇಲೆ ನಂಬಿಕೆ ಇರಲಿ, ಎನ್ಆರ್ಸಿ ಬಂಗಾಳದಲ್ಲಿ ಕಾಲಿಡಲು ಬಿಡುವುದಿಲ್ಲ- ಮಮತಾ ಬ್ಯಾನರ್ಜೀ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರದಂದು ಬಂಗಾಳದ ಜನರಿಗೆ ತಮ್ಮ ಮೇಲೆ ನಂಬಿಕೆ ಇಡುವಂತೆ ಮನವಿ ಕೊಂಡಿದ್ದಾರೆ. ಎಸ್ಆರ್ಸಿ ವಿಚಾರವಾಗಿ ಮಾತನಾಡಿದ ಅವರು ಅದನ್ನು ಪಶ್ಚಿಮ ಬಂಗಾಳದಲ್ಲಿ ಅನುಮತಿಸುವುದಿಲ್ಲ ಎಂದರು.
ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರದಂದು ಬಂಗಾಳದ ಜನರಿಗೆ ತಮ್ಮ ಮೇಲೆ ನಂಬಿಕೆ ಇಡುವಂತೆ ಮನವಿ ಕೊಂಡಿದ್ದಾರೆ. ಎಸ್ಆರ್ಸಿ ವಿಚಾರವಾಗಿ ಮಾತನಾಡಿದ ಅವರು ಅದನ್ನು ಪಶ್ಚಿಮ ಬಂಗಾಳದಲ್ಲಿ ಅನುಮತಿಸುವುದಿಲ್ಲ ಎಂದರು.
ಬಿಜೆಪಿಗೆ ನಾಚಿಕೆಯಾಗಬೇಕು ಎನ್ಆರ್ಸಿಯಿಂದಾಗಿ ಬಂಗಾಳದಲ್ಲಿ ಆರು ಜನರ ಸಾವಿಗೆ ಕಾರಣವಾಯಿತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಪಶ್ಚಿಮ ಬಂಗಾಳದಲ್ಲಿ ಎನ್‌ಆರ್‌ಸಿಯನ್ನು ಜಾರಿಗೆ ತರಲು ಬಿಜೆಪಿಯ ಕ್ರಮಗಳನ್ನು ಟೀಕಿಸಿದ ಅವರು, “ಬಂಗಾಳದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ ಆದರೆ ಇದು ದೇಶದ ಇತರ ಭಾಗಗಳಲ್ಲಿ ಅಪಾಯದಲ್ಲಿದೆ' ಎಂದು ಹೇಳಿದರು.
ಇದೇ ವೇಳೆ ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ನಡೆದ ಘಟನೆಯ ಕುರಿತು ಮಾತನಾಡಿದ ಅವರು, 'ಎಬಿವಿಪಿ, ಬಿಜೆಪಿ ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ಮಾಡಿದ್ದನ್ನು ನಾವು ನೋಡಿದ್ದೇವೆ, ಅವರು ಎಲ್ಲೆಡೆ ಅಧಿಕಾರವನ್ನು ಚಲಾಯಿಸಲು ಬಯಸುತ್ತಾರೆ' ಎಂದರು
"ಖಾಸಗೀಕರಣದ ವಿರುದ್ಧ ಹಾಗೂ ಸಾರ್ವಜನಿಕ ವಲಯದ ಉದ್ಯಮಗಳನ್ನು ಮುಚ್ಚುವುದನ್ನು ವಿರೋಧಿಸಿ ಅಕ್ಟೋಬರ್ 18 ರಂದು ನಡೆಯುವ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದು ಅವರು ಹೇಳಿದರು, ದೇಶದ ಕೆಲವು ಪ್ರಮುಖ ಪಿಎಸ್ಯು ಬ್ಯಾಂಕುಗಳನ್ನು ವಿಲೀನಗೊಳಿಸಲು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಕೈಗೊಂಡ ನಡೆಯನ್ನು ಅವರು ವಿರೋಧಿಸಿದರು.
ಮಮತಾ ಬ್ಯಾನರ್ಜೀ ಅವರು ಇತ್ತೀಚಿಗೆ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಮತಾ ಬ್ಯಾನರ್ಜೀ ಅವರನ್ನು ಭೇಟಿ ಮಾಡಿದ್ದರು.