ನವದೆಹಲಿ:  ಇತರ ರಾಜ್ಯಗಳಲ್ಲಿ ಅನೇಕ ಹಿಂಸಾಚಾರಗಳು ನಡೆದಿದ್ದರೂ ಪಶ್ಚಿಮ ಬಂಗಾಳವನ್ನು ಸಂಸತ್ತಿನಲ್ಲಿ ಅನಗತ್ಯವಾಗಿ ಗುರಿಯಾಗಿಸಲಾಗುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಂಗಳವಾರ ಹೇಳಿದೆ. 


COMMERCIAL BREAK
SCROLL TO CONTINUE READING

"ಪಶ್ಚಿಮ ಬಂಗಾಳದ ಕಾನೂನು ಸುವ್ಯವಸ್ಥೆ ಕುರಿತು ಚರ್ಚಿಸಲು ಭಾರತದ ಸಂಸತ್ತನ್ನು ಹೆಚ್ಚು ವೇದಿಕೆಯನ್ನಾಗಿ ಪರಿವರ್ತಿಸಲಾಗುತ್ತಿದೆ. ಉತ್ತರ ಪ್ರದೇಶ ಮತ್ತು ಇತರ ಕೆಲವು ರಾಜ್ಯಗಳಲ್ಲಿ ಅನಿಯಂತ್ರಿತ ಹಿಂಸಾಚಾರವಿರುವಾಗ ಪಶ್ಚಿಮ ಬಂಗಾಳವನ್ನು ಹೆಚ್ಚು ಗುರಿಯಾಗಿ ಮಾಡಲಾಗುತ್ತಿದೆ ಎಂದು 'ಟಿಎಂಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಟಿಎಂಸಿ ನೇತೃತ್ವದ ರಾಜ್ಯ ಸರ್ಕಾರ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದೆ ಮತ್ತು ಕೆಲವು ವಿರಳ ಘಟನೆಗಳು ನಡೆದಿರಬಹುದು ಆದರೆ ಅವುಗಳನ್ನು ಕಾನೂನಿನ ಅನುಗುಣವಾಗಿ ವ್ಯವಹರಿಸಲಾಗುತ್ತಿದೆ ಎಂದು ಹೇಳಿದೆ.


"ಎಲ್ಲರಿಗೂ ತಿಳಿದಿರುವಂತೆ, ಕಾನೂನು ಮತ್ತು ಸುವ್ಯವಸ್ಥೆ ಭಾರತದ ಸಂವಿಧಾನದಲ್ಲಿ ರಾಜ್ಯದ ವಿಷಯವಾಗಿದೆ. ಈ ಸಾಂವಿಧಾನಿಕವಾಗಿರುವ ವಿಷಯವನ್ನು ಪಶ್ಚಿಮ ಬಂಗಾಳ ಕಡ್ಡಾಯವಾಗಿ ಪಾಲಿಸುತ್ತಿದೆ. ಲೋಕಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಕೆಲವು ವಿರಳ ಮತ್ತು ಪ್ರತ್ಯೇಕ ಘಟನೆಗಳು ನಡೆದಿರಬಹುದು.ಆದರೆ ಅವುಗಳನ್ನು ರಾಜ್ಯಸರ್ಕಾರವು ಕಾನೂನಿನ ಪ್ರಕಾರ ನಿಭಾಯಿಸುತ್ತಿದೆ ಎಂದು ಟಿಎಂಸಿ ಹೇಳಿದೆ. "ಲೋಕಸಭಾ ಚುನಾವಣೆಯ ಸಮಯದಲ್ಲಿ, ಕಾನೂನು ಮತ್ತು ಸುವ್ಯವಸ್ಥೆ ಚುನಾವಣಾ ಆಯೋಗದ ಅಧೀನದಲ್ಲಿತ್ತು. ಆದಾಗ್ಯೂ ,ರಾಜ್ಯ ಸರ್ಕಾರವು ತನ್ನ ಜವಾಬ್ದಾರಿಗಳ ಬಗ್ಗೆ ತಿಳಿದಿದೆ ಮತ್ತು ಅವುಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ" ಎಂದು ಹೇಳಿದೆ.


"ಅಲ್ಲದೆ, ಹೆಚ್ಚಾಗಿ, ಭಾರತ ಸರ್ಕಾರವು ತನ್ನದೇ ಆದ ಕಟ್ಟುಪಾಡುಗಳನ್ನು ರಾಜ್ಯಕ್ಕೆ ತಳ್ಳುತ್ತಿದೆ. ಗಡಿಗಳನ್ನು ನಿರ್ವಹಿಸುವುದು, ಗಡಿಯ ಮೂಲಕ ಒಳ ನುಸುಳುವಿಕೆಯನ್ನು ಪರಿಶೀಲಿಸುವುದು ಇತ್ಯಾದಿ ಕಾರ್ಯವು , ಕೇಂದ್ರ ಏಜೆನ್ಸಿಗಳಾದ ಬಿಎಸ್ಎಫ್, ಎಸ್‌ಎಸ್‌ಬಿ, ಸಿಐಎಸ್ಎಫ್, ಎಸ್‌ಐಬಿ, ಕೋಸ್ಟ್ ಗಾರ್ಡ್, ಕಸ್ಟಮ್ಸ್ ಗಳದ್ದು . ಆದ್ದರಿಂದ ಕೇಂದ್ರ ಸಂಸ್ಥೆಗಳ ಚಟುವಟಿಕೆಗಳಿಗೆ ರಾಜ್ಯ ಸರ್ಕಾರವನ್ನು ದೂಷಿಸುವ ಪ್ರವೃತ್ತಿ ಇದೆ. ಆದಾಗ್ಯೂ, ಪಶ್ಚಿಮ ಬಂಗಾಳ ಸರ್ಕಾರ ಸಹಕಾರ ನೀಡಲಿದೆ, "ಎಂದು ಅದು ಹೇಳಿದೆ.