ಬೆಂಗಳೂರು: ಗೌತಮ್ ಅದಾನಿ ಒಡೆತನದ ಅದಾನಿ ಸಂಸ್ಥೆಯ ಷೇರು ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ SBI ಹಾಗೂ LIC ಈಗಾಗಲೇ ಹಣ ಸುರಕ್ಷಿತ ಎಂದು ಉಭಯ ಸಂಸ್ಥೆಗಳು ಅಭಯ ನೀಡಿವೆ.ಇದಾದ ಬೆನ್ನಲ್ಲೇ ಈಗ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ ಇದು ಒಂದು ಖಾಸಗಿ ಸಂಸ್ಥೆಯ ವಿಷಯ, ದೇಶಕ್ಕೆ ಸಂಬಂಧ ಪಟ್ಟ ವಿಷಯವಲ್ಲ. ದೇಶದ ಜನತೆ ಕಳವಳ ಆಗ್ಬೇಕಿಲ್ಲ ಎಂದು  ಸ್ಪಷ್ಟನೆ ನೀಡಿದರು.


COMMERCIAL BREAK
SCROLL TO CONTINUE READING

ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಇವರು, ಅದಾನಿ ಕಂಪನಿಯ ಷೇರು ಕುಸಿತ ಪ್ರಕರಣ ಚರ್ಚಿತವಾಗುತ್ತಿದೆ.ಇದರ ಬಗ್ಗೆ ಷೇರ್ ಮಾರ್ಕೆಟ್‌ ರೆಗ್ಯುಲೇಟರಿ (SEBI) ನೋಡಿಕೊಳ್ಳಲಿದೆ ಎಂದರು.


ಪ್ರಧಾನಿ ನರೇಂದ್ರ ಮೋದಿ ಟೀಕಿಸಲು ಅದಾನಿ ಕಂಪನಿ ಷೇರು ಕುಸಿತ ಪ್ರಕರಣ ಬಳಕೆ ಆಗ್ತಿದೆಯಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಪಿಯೂಷ್ ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ, ಎಂದರು.ಆದರೆ,ಸಂಸತ್ ನಲ್ಲಿ ಅದಾನಿ ಷೇರು ಕುಸಿತ ಪ್ರಕರಣ ಸದ್ದು ಮಾಡಿತು ಎಂದು ಕಲಾಪ ನಡೆಯದಿರುವ ಬಗ್ಗೆ ಹತಾಷೆ  ವ್ಯಕ್ತಪಡಿಸಿದ ಇವರು, ಸದನ ಇರೋದು ಚರ್ಚೆಯಾಗುವುದಕ್ಕೆ ಆದರೆ ರಾಷ್ಟ್ರಪತಿ ಭಾಷಣದ ಮೇಲೆ ಚರ್ಚೆ ಆಗದಿರುವುದು ದುರದೃಷ್ಟಕರ, ಎಂದರು.


ಸಚಿವ ಸಂಪುಟ ವಿಸ್ತರಣೆ ಸಿಎಂಗೆ ಬಿಟ್ಟಿದ್ದು ಯಾರನ್ನ ತೆಗೆದುಕೊಳ್ಳಬೇಕು,ಬಿಡಬೇಕು ಅಂತ ಸಿಎಂ ನಿರ್ಧಾರ ಮಾಡ್ತಾರೆ, ಸೂಕ್ತ ಸಮಯದಲ್ಲಿ ಸಿಎಂ ನಿರ್ಧಾರ ಮಾಡಲಿದ್ದಾರೆ ಎಂದರು.


40% ಕಮಿಷನ್ ಪ್ರಶ್ನೆಗೆ ತಬ್ಬಿಬ್ಬಾದ ಗೊಯಲ್ :


ರಾಜ್ಯ ಸರ್ಕಾರದ ವಿರುದ್ಧ ಅನೇಕರು 40% ಕಮಿಷನ್ ಆರೋಪ ಕುರಿತು ಸರಣಿ ಪ್ರಶ್ನೆ ಮಾಡಿದಾಗ ಕೇಂದ್ರ ಸಚಿವರು ತಬ್ಬಿಬ್ಬಾದರು.ನಂತರ ಮಾತಾನ್ನಾಡಿ,40% ಭ್ರಷ್ಟಾಚಾರ ಆರೋಪವನ್ನು ಕಾಂಗ್ರೆಸ್ ಮಾಡಿದೆ ಆದರೆ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ ಮುಕ್ತ ಅಂತ ಹೇಳಿದ್ದಾರೆ.ಯಾವುದೇ ಭ್ರಷ್ಟಾಚಾರ ಪ್ರಕರಣವನ್ನು ತನಿಖೆ ನಡೆಸುತ್ತೇವೆ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ. ಮೋದಿ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ತರಬೇಕು ಅಂತ ನಿರ್ಧಾರ ಮಾಡಿದ್ದಾರೆ, ಮೋದಿ ಅವರು 40% ಕಮಿಷನ್ ಬಗ್ಗೆ ಖಚಿತ ಮಾಹಿತಿ ಇದ್ದಲ್ಲಿ ಖಂಡಿತ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರ ನಡೆಯೋಕೆ ನಾವು ಬಿಡಲ್ಲ ಕಾಂಗ್ರೆಸ್ ಸುಳ್ಳು ಆರೋಪಗಳ ಬಗ್ಗೆ ಜನ ತಲೆ ಕೆಡಿಸಿಕೊಳ್ಳುವುದಿಲ್ಲ ಬಿಜೆಪಿಗೆ ಕರ್ನಾಟಕ ಜನ ಸ್ಪಷ್ಟ ಬಹುಮತ ನೀಡುತ್ತಾರೆ, ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಬಿ ಎಸ್ ವೈ ರನ್ನ ಬಿಜೆಪಿ ಕಡೆಗಣನೆ?:


ಇನ್ನು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನ ಬಿಜೆಪಿ ಕಡೆಗಣನೆ ಮಾಡಿದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿ,ಮಾಜಿ ಸಿಎಂ ಯಡಿಯೂರಪ್ಪ ನಮ್ಮ ಪರಮೋಚ್ಚ ನಾಯಕ , ಅವರು ಅತ್ಯಂತ ಹಿರಿಯ ನಾಯಕರಾಗಿದ್ದಾರೆ, ಅವರು ಉನ್ನತ ಸ್ಥಾನದಲ್ಲಿ ಇದ್ದಾರೆ.ಅತ್ಯುನ್ನತ ನಿರ್ಧಾರ ಕೈಗೊಳ್ಳುವ ಸಮಿತಿ ಸದಸ್ಯರಾಗಿದ್ದಾರೆ.ಬಿಜೆಪಿಯ ಎಲ್ಲಾ ನಿರ್ಧಾರಗಳಲ್ಲೂ ಅವರು ಪ್ರಮುಖರಾಗಿರುತ್ತಾರೆ ಅವರನ್ನ ಪಕ್ಷ ಗೌರವಯುತವಾಗಿ ನಡೆಸಿಕೊಳ್ಳುತ್ತಿದೆ.ಮುಂದೆ ಸಹ ನಡೆಸಿಕೊಳ್ಳುತ್ತದೆ.ಅವರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸಲಿದ್ದೇವೆ ಎಂದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.