ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ (Delhi Assembly Election 2020) ಇಂದು ಬೆಳಿಗ್ಗೆಯಿಂದ ಮತದಾನ ನಡೆಯುತ್ತಿದೆ. ಮತದಾನದ ಸಂದರ್ಭದಲ್ಲಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ತಮ್ಮ Sixth Sense ಹೇಳುತ್ತಿದೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ದೆಹಲಿ ಚುನಾವಣೆಯಲ್ಲಿ 50 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ತಮ್ಮ ಪಕ್ಷ ರಾಷ್ಟ್ರ ರಾಜಧಾನಿಯಲ್ಲಿ ಸರ್ಕಾರ ರಚಿಸಲಿದೆ ಎಂದು ವಿಶ್ವಾಸದಿಂದ ನುಡಿದ ಮನೋಜ್ ತಿವಾರಿ, ನನ್ನ ಸಹೋದರರು ಮತ್ತು ದೆಹಲಿಯ ಜನರ ಆಶೀರ್ವಾದ ನನಗೆ ಇದೆ ಎಂದು ಹೇಳಿದರು. ನಾವು ಸರ್ಕಾರ ರಚಿಸುತ್ತೇವೆ ಎಂದು ನನ್ನ ಸಿಕ್ಸ್ತ್ ಸೆನ್ಸ್(Sixth Sense) ಹೇಳುತ್ತದೆ ಎಂದು ಅವರು ಹೇಳಿದರು.


ಆದರೆ, ಬಿಜೆಪಿ ನಾಯಕ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.


ಏತನ್ಮಧ್ಯೆ, ಅರವಿಂದ್ ಕೇಜ್ರಿವಾಲ್ ಅವರು ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿದ ಬಗ್ಗೆ ಕೂಡ ಬಿಜೆಪಿ ಸಂಸದ ಮನೋಜ್ ತಿವಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೇಜ್ರಿವಾಲ್ ಪೂಜೆಗೆ ಹೋಗಿದ್ದಾರೆಯೇ ಅಥವಾ ಹನುಮಾನ್ ಜಿ ಯನ್ನು ಅಪವಿತ್ರಗೊಳಿಸಲು ಹೋಗಿದ್ದಾರೆಯೇ? ಎಂದು ದೆಹಲಿ ಬಿಜೆಪಿ ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ.


'ಒಂದು ಕೈಯಿಂದ ಶೂ ತೆಗೆದು, ಅದೇ ಕೈಯಿಂದ ಹಾರವನ್ನು ತೆಗೆದುಕೊಂಡು... ಏನು ಮಾಡೋದು? ನಕಲಿ ಭಕ್ತರು ಬಂದಾಗ ಈ ರೀತಿ ಸಂಭವಿಸುತ್ತದೆ. ಹನುಮಾನ್ ಜಿ ಯನ್ನು ಚೆನ್ನಾಗಿ ತೊಳೆಯುವಂತೆ ನಾನು ಪಂಡಿತ್ ಜೀ ಅವರಿಗೆ ಹೇಳಿದ್ದೇನೆ ಎಂದವರು ತಿಳಿಸಿದರು.


ಗಮನಾರ್ಹವಾಗಿ, ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಕುಟುಂಬದೊಂದಿಗೆ ಕೊನಾಟ್ ಪ್ಲೇಸ್‌ನಲ್ಲಿರುವ ಪ್ರಾಚೀನ ಕಾರ್ಪೆಟ್ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.


ಇನ್ನು ಮನೋಜ್ ತಿವಾರಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅರವಿಂದ್ ಕೇಜ್ರಿವಾಲ್, 'ನಾನು ಹನುಮಾನ್ ಚಾಲೀಸಾವನ್ನು ಟಿವಿ ಚಾನೆಲ್‌ನಲ್ಲಿ ಓದಿದಾಗಿನಿಂದಲೂ, ಬಿಜೆಪಿ ಜನರು ನನ್ನನ್ನು ನಿರಂತರವಾಗಿ ಅಪಹಾಸ್ಯ ಮಾಡುತ್ತಿದ್ದಾರೆ. ನಿನ್ನೆ ನಾನು ಹನುಮಾನ್ ದೇವಸ್ಥಾನಕ್ಕೆ ಹೋಗಿದ್ದೆ. ಇಂದು ಬಿಜೆಪಿ ನಾಯಕರು ನನ್ನ ನಿರ್ಗಮನದಿಂದ ದೇವಾಲಯವನ್ನು ಅಪವಿತ್ರಗೊಳಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಇದು ಯಾವ ರೀತಿಯ ರಾಜಕೀಯ? ದೇವರು ಎಲ್ಲರಿಗೂ ಸೇರಿದವನು. ದೇವರು ಎಲ್ಲರನ್ನು ಆಶೀರ್ವದಿಸುತ್ತಾನೆ, ಬಿಜೆಪಿಯಲ್ಲಿಯೂ ಸಹ ಎಲ್ಲಾ ಚೆನ್ನಾಗಿರಲಿ ಎಂದರು.