ನವದೆಹಲಿ:ದೇಶಾದ್ಯಂತ ಇರುವ ಎಲ್ಲ ಬ್ಯಾಂಕ್ ಗಳು ತಮ್ಮ ತಮ್ಮ ATM ಗಳಲ್ಲಿ ರೂ.2000 ಮುಖಬೆಲೆಯ ನೋಟುಗಳನ್ನು ಹಾಕುವುದನ್ನು ಬಂದ್ ಮಾಡಿವೆ. ಅವುಗಳ ಜಾಗಕ್ಕೆ ಕಡಿಮೆ ಮುಖಬೆಲೆ ಇರುವ ನೋಟುಗಳನ್ನು ಭರ್ತಿ ಮಾಡಲಾರಂಭಿಸಿವೆ. ಶೀಘ್ರವೇ ATM ಗಳಿಂದ ಕೇವಲ 500, 200 ಹಾಗೂ 100 ಮುಖಬೆಲೆಯ ನೋಟುಗಳು ಹೊರಬರಲಿವೆ. ಈ ಕುರಿತಾದ ಸುದ್ದಿಗಳು ಕಳೆದ ಹಲವು ದಿನಗಳಿಂದ ಪ್ರಕಟಗೊಳ್ಳುತ್ತಲೇ ಇದ್ದು, ATM ಗಳಲ್ಲಿ ರೂ.2000 ಮುಖಬೆಲೆಯ ನೋಟುಗಳಿಗಾಗಿಯೇ ನಿಗದಿಪಡಿಸಲಾಗಿದ್ದ ಕ್ಯಾಸೆಟ್ ಗಳನ್ನೂ ಕೂಡ ರಿಪ್ಲೇಸ್ ಮಾಡಲಾಗುತ್ತಿದೆ ಎನ್ನಲಾಗಿದೆ. ಅವುಗಳ ಜಾಗದಲ್ಲಿ ಕಡಿಮೆ ಮುಖಬೆಲೆಯ ನೋಟುಗಳ ಕ್ಯಾಸೆಟ್ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ ಎಂದೂ ಕೂಡ ಹೇಳಲಾಗಿದೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಈ ಕುರಿತಾದ ವರದಿಯನ್ನು ಅಲ್ಲಗಳೆದಿದೆ. ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ರೀತಿ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಯಾವುದೇ ನಿರ್ದೇಶನಗಳನ್ನು ಇದುವರೆಗೆ ನೀಡಲಾಗಿಲ್ಲ
ಈ ಕುರಿತಾದ ಎಲ್ಲ ವರದಿಗಳನ್ನು ಅಲ್ಲಗಳೆದಿರುವ ನಿರ್ಮಲಾ ಸೀತಾರಾಮನ್, ನನಗೆ ಗೊತ್ತಿರುವಂತೆ ಬ್ಯಾಂಕ್ ಗಳಿಗೆ ಈ ರೀತಿಯ ಯಾವುದೇ ನಿರ್ದೇಶನಗಳನ್ನು ನೀಡಲಾಗಿಲ್ಲ ಎಂದಿದ್ದಾರೆ. ATM ಯಂತ್ರಗಳಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡುವ ನಿರ್ದೇಶನ ಬ್ಯಾಂಕ್ ಗಳಿಗೆ ನೀಡಲಾಗಿಲ್ಲ ಎಂದು ಸೀತಾರಾಮನ್ ಹೇಳಿದ್ದಾರೆ. ಆದರೆ, ATM ಗಳಿಂದ ರೂ.2000 ಮುಖಬೆಲೆಯ ನೋಟುಗಳು ಇನ್ಮುಂದೆ ಹೊರಬರಲಿವೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ, ATM ಗಳಲ್ಲಿ ಯಾವ ರೀತಿಯ ಬದಲಾವಣೆ ಮಾಡಬೇಕು ಇದು ಬ್ಯಾಂಕ್ ಗಳಿಗೆ ಬಿಟ್ಟ ವಿಷಯವಾಗಿದೆ.


ಇಂಡಿಯನ್ ಬ್ಯಾಂಕ್ ಮಾಡಿತ್ತು ಈ ಕುರಿತಾದ ಘೋಷಣೆ
ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಇಂಡಿಯನ್ ಬ್ಯಾಂಕ್ ಈ ಕುರಿತು ಹೇಳಿಕೆ ಬಿಡುಗಡೆಗೊಳಿಸಿ ತನ್ನ ATMಗಳಲ್ಲಿ ಇನ್ಮುಂದೆ ರೂ.2000 ಮುಖಬೆಲೆಯ ನೋಟುಗಳನ್ನು ಹಾಕಲಾಗುವುದಿಲ್ಲ ಎಂದು ಹೇಳಿತ್ತು. ಮೂಲಗಳ ಪ್ರಕಾರ ರೂ.2000 ಮುಖಬೆಲೆಯ ನೋಟುಗಳಿಂದ ಚಿಲ್ಲರೆ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಬ್ಯಾಂಕ್ ಗಳು ATM ಗಳಲ್ಲಿ 2000 ಮುಖಬೆಲೆಯ ನೋಟುಗಳನ್ನು ಹಾಕುವುದನ್ನು ನಿಲ್ಲಿಸಲಿವೆ ಎನ್ನಲಾಗಿತ್ತು. ಇವುಗಳ ಬದಲಾಗಿ ಬ್ಯಾಂಕ್ ಗಳು ರೂ.500 ಮುಖಬೆಲೆಯ ನೋಟುಗಳನ್ನು ಹೆಚ್ಚಾಗಿ ಬಳಸಲಿವೆ ಎಂದೂ ಕೂಡ ಹೇಳಲಾಗಿತ್ತು.


ಈ ಕುರಿತು RBI ನೀಡಿತ್ತು ಉತ್ತರ
ಕಳೆದ ವರ್ಷ ಮಾಹಿತಿ ಹಕ್ಕು ಕಾಯ್ದೆ ಅಡಿ ದಾಖಲಾದ ಅರ್ಜಿಯೊಂದಕ್ಕೆ ಉತ್ತರ ನೀಡಿದ್ದ ಭಾರತೀಯ ರಿಸರ್ವ್ ಬ್ಯಾಂಕ್, ರೂ.2000 ಮುಖಬೆಲೆಯ ನೋಟುಗಳ ಮುದ್ರಣ ಸ್ಥಗಿತಗೊಳಿಸಲಾಗಿದೆ ಎಂದಿತ್ತು. ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ವಿತ್ತ ಸಚಿವಾಲಯ ಈ ರೀತಿಯ ಯಾವುದೇ ನಿರ್ದೇಶನ ನೀಡಿಲ್ಲ ಎನ್ನಲಾಗಿದೆ. ಬ್ಯಾಂಕ್ ಗಳು ಖುದ್ದಾಗಿ ತಮ್ಮ ತಮ್ಮ ATMಗಳಲ್ಲಿ ಕಡಿಮೆ ಮುಖಬೆಲೆಯ ನೋಟುಗಳನ್ನು ಹಾಕಲು ಮುಂದಾಗಿವೆ. ಸಣ್ಣ ಮುಖಬೆಲೆಯ ನೋಟುಗಳನ್ನು ಹೆಚ್ಚಾಗಿ ಹಾಕಲು ಕೆಲ ಬ್ಯಾಂಕ್ ಗಳು ತಮ್ಮ ATM ಯಂತ್ರಗಳನ್ನು ರಿಕ್ಯಾಲಿಬ್ರೆಟ್ ಕೂಡ ಮಾಡಿವೆ.


ಆದರೆ ಈ ನಿರ್ಧಾರ ಏಕೆ ಕೈಗೊಳ್ಳಲಾಗಿದೆ
ದೇಶಾದ್ಯಂತ ಸುಮಾರು 2,40,000 ATMಗಳಿದ್ದು, ಅವುಗಳನ್ನು ರಿಕ್ಯಲಿಬ್ರೆಟ್ ಮಾಡಲು ಸುಮಾರು ಒಂದು ವರ್ಷಗಳ ಸಮಯ ಬೇಕು. ರೂ.2000 ಮುಖಬೆಲೆಯ ನೋಟುಗಳ ಮುದ್ರದ ಇದೀಗ ಬಹುತೇಕ ಬಂದ್ ಆಗಿದೆ. ವರದಿಗಳ ಪ್ರಕಾರ ರೂ.2000 ಮುಖಬೆಲೆಯ ನೋಟುಗಳನ್ನು ATMಗಳಿಂದ ತೆರವುಗೊಳಿಸಲು ನಿರ್ದೇಶನಗಳನ್ನು ನೀಡಲಾಗಿದೆ. ಕ್ಯಾಶ್ ಮ್ಯಾನೇಜ್ಮೆಂಟ್ ಸಿಸ್ಟಮ್ ಅನ್ನು ಸುಧಾರಿಸುವ ನಿಟ್ಟಿನಲ್ಲಿ ಬ್ಯಾಂಕ್ ಗಳು ಈ ರೀತಿಯ ನಿರ್ಧಾರಕ್ಕೆ ಕೈಹಾಕಿವೆ ಎನ್ನಲಾಗಿದೆ.