ನವದೆಹಲಿ : ಕೇಂದ್ರೀಯ ಹಣಕಾಸು ಸಚಿವ ಅರುಣ್ ಜೇಟ್ಲಿ 2018ರ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದಾರೆ. ಆರ್ಥಿಕ ಸಮೀಕ್ಷೆಯು ಆರ್ಥಿಕ ವರ್ಷ 2018ರಲ್ಲಿ ಶೇ.6.75 ಜಿಡಿಪಿ ಬೆಳವಣಿಗೆಯನ್ನು ಅಂದಾಜಿಸಿದೆ. ಆರ್ಥಿಕ ವರ್ಷ 2019 ರಲ್ಲಿ GDP ಬೆಳವಣಿಗೆ ಶೇ.7-7.5 ರಷ್ಟು ಹೆಚ್ಚಿದೆ ಎಂದು ಅಂದಾಜಿಸಲಾಗಿದೆ. 


COMMERCIAL BREAK
SCROLL TO CONTINUE READING

ಆದರೆ, ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ, ಆರ್ಥಿಕತೆಯು ಎಷ್ಟು ಸೆಳೆಯಿತೆಂಬುದನ್ನು ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ವರದಿ ಪ್ರಕಾರ, ಜಿಎಸ್ಟಿ, ಬ್ಯಾಂಕುಗಳ ಪುನರ್ಸ್ಥಾಪನೆ, FDI ನಿಯಮಗಳಲ್ಲಿ ಸಡಿಲಿಕೆ, ರಫ್ತಿನಲ್ಲಿ ಉಂಟಾದ ಹೆಚ್ಚಳದಿಂದಾಗಿ ಆರ್ಥಿಕತೆಯು ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ವೇಗವನ್ನು ಗಳಿಸಿದೆ. ಹಾಗಾಗಿ ನೋಟು ಅಮಾನ್ಯ ಮತ್ತು ಜಿಎಸ್ಟಿ ಮುಂತಾದ ಆರ್ಥಿಕ ನಿಲುವುಗಳಿಂದಾಗಿ ದೇಶಕ್ಕೆ ಏನು ದೊರೆತಿದೆ ಎಂಬುದನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.


ನೋಟು ಅಮಾನ್ಯ- GST ಯಿಂದ ಹೆಚ್ಚಿದ ತೆರಿಗೆದಾರರು
ನೋಟು ಅಮಾನ್ಯ ಮತ್ತು GSTಗೆ ಸಂಬಂಧಿಸಿದಂತೆ ಆರ್ಥಿಕ ಸಮೀಕ್ಷೆಯು ಆಚ್ಚರಿಯ ವಿಷಯವೊಂದನ್ನು ಬಹಿರಂಗಪಡಿಸಿದೆ. ನೋಟು ಅಮಾನ್ಯದ ನಂತರ ಹೊಸ ತೆರಿಗೆದಾರರ ಸಂಖ್ಯೆಯಲ್ಲಿ ಸುಮಾರು 18 ಲಕ್ಷ ಏರಿಕೆ ಕಂಡಿದೆ. ಜಿಎಸ್ಟಿ ಜಾರಿಗೆ ಬಂದ ನಂತರ ತೆರಿಗೆ ಸಂಗ್ರಹದೊಂದಿಗೆ ವೈಯಕ್ತಿಯ ಆದಾಯ ತೆರಿಗೆ ಸಂಗ್ರಹವೂ ಹೆಚ್ಚಾಗಿದೆ. 


ಶೇ.3ರಷ್ಟು ಹಣಕಾಸಿನ ಕೊರತೆಯ ಅಂದಾಜು
ಮುಂದಿನ ಆರ್ಥಿಕ ವರ್ಷದಲ್ಲಿ, ರಫ್ತು ಪ್ರಮಾಣದಲ್ಲಿ ಬೆಳವಣಿಗೆ ಕಾಣುವುದರೊಂದಿಗೆ ಆರ್ಥಿಕತೆಯು ಉತ್ತಮಗೊಳ್ಳುವ ಸಾಧ್ಯತೆಯಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ನೇರ ತೆರಿಗೆ ಸಂಗ್ರಹದಲ್ಲಿ ಹೆಚ್ಚಿನ  ಗುರಿಯನ್ನು ನಿರೀಕ್ಷಿಸಲಾಗಿದೆ. 2019ರ ಹಣಕಾಸಿನ ವರ್ಷದಲ್ಲಿ, ಹಣಕಾಸಿನ ಕೊರತೆ ಉಂಟಾಗಲಿದ್ದು ಶೇ.3 ಇರಲಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ ಜಿಎಸ್ಟಿ ಸಂಗ್ರಹ ಸುಧಾರಣೆಗೊಳ್ಳಲಿದ್ದು, ಆದಾಯ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. 


ಉದ್ಯೋಗ, ಶಿಕ್ಷಣ ಮತ್ತು ಕೃಷಿ ಮೇಲೆ ಸರ್ಕಾರ ಗಮನ
ಮಧ್ಯಮ ಅವಧಿಯಲ್ಲಿ ಉದ್ಯೋಗ, ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳಿಗೆ ವಿಶೇಷ ಗಮನ ನೀಡುವ ಅಗತ್ಯವಿದೆ ಎಂದು ಆರ್ಥಿಕ ಸಮೀಕ್ಷೆ 2018ರಲ್ಲಿ ಆರ್ಥಿಕ ಸಲಹೆಗಾರರು ಸಲಹೆ ನೀಡಿದ್ದಾರೆ. ದೇಶದ ಆರ್ಥಿಕತೆಯಲ್ಲಿ ಅಭಿವೃದ್ಧಿ ತರುವ ನಿಟ್ಟಿನಲ್ಲಿ ಹಾಗೂ ಪ್ರಸ್ತುತ ಸಮಯದ ಸವಾಲುಗಳನ್ನು ಪರಿಹರಿಸಲು, ಉದ್ಯೋಗ ಕ್ಷೇತ್ರದಲ್ಲಿ ಅಭಿವೃದ್ಧಿ ತರುವ ಅಗತ್ಯವಿದೆ. 


ಕೃಷಿಗೆ ವಿಶೇಷ ಅಧ್ಯಾಯ
ಈ ಬಾರಿಯ ಆರ್ಥಿಕ ಸಮೀಕ್ಷೆಯಲ್ಲಿ ಇಡೀ ಮೊದಲ ಬಾರಿಗೆ ಕೃಷಿಗಾಗಿಯೇ ವಿಶೇಷ ಅಧ್ಯಾಯವನ್ನು ಸೇರಿಸಲಾಗಿದ್ದು, 2017-18ರಲ್ಲಿ ಕೃಷಿ ಕ್ಷೇತ್ರದ ಬೆಳವಣಿಗೆಯು ಶೇ. 2.1 ವೃದ್ಧಿಯಾಗಲಿದೆ ಎಂದು ಸಮೀಕ್ಷೆ ಅಂದಾಜು ಮಾಡಿದೆ. ಅದು 2016-17ರ ಬೆಳವಣಿಗೆಗಿಂತ 2.8 ರಷ್ಟು ಕಡಿಮೆಯಾಗಿದೆ. ಕಳೆದ ವರ್ಷ ಕೃಷಿ ವಲಯದಲ್ಲಿ ಶೇ. 4.9 ರಷ್ಟು ಏರಿಕೆಯಾಗಿತ್ತು. ಕೈಕೊಟ್ಟ ಮಾನ್ಸೂನ್ ಕಾರಣದಿಂದ ಸಮೀಕ್ಷೆ ಪ್ರಕಾರ, ಬೆಳೆಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರಿದ ಕಾರಣ ಬೆಳವಣಿಗೆಯಲ್ಲಿ ಇಳಿಕೆಯಾಗಿದೆ ಎಂದು ಸಮೀಕ್ಷೆ ತಿಳಿಸಿದೆ.