ಆತ್ಮ ನಿರ್ಭರ ಎಂದರೇನು? ಈ ಪರಿಭಾಷೆಯನ್ನು ಈ ಮೊದಲು ಬಳಸಿದವರು ಯಾರು ಗೊತ್ತೇ ?
ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ 20 ಲಕ್ಷ ಕೋಟಿ ರೂ.ಆರ್ಥಿಕ ಪ್ಯಾಕೇಜ್ ನ್ನು ಆತ್ಮ-ನಿರ್ಭರ ಭಾರತ ನಿರ್ಮಾಣಕ್ಕಾಗಿ ಘೋಷಿಸಿದರು.
ನವದೆಹಲಿ: ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ 20 ಲಕ್ಷ ಕೋಟಿ ರೂ.ಆರ್ಥಿಕ ಪ್ಯಾಕೇಜ್ ನ್ನು ಆತ್ಮ-ನಿರ್ಭರ ಭಾರತ ನಿರ್ಮಾಣಕ್ಕಾಗಿ ಘೋಷಿಸಿದರು.
ಪ್ರಧಾನಿ ಮೋದಿ ಭಾಷಣದ ನಂತರ ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ಆತ್ಮ-ನಿರ್ಭರ ಪರಿಭಾಷೆ ಅರ್ಥವನ್ನು ಗೂಗಲ್ ಮೂಲಕ ಹುಡುಕ ತೊಡಗಿದರು. ನಿನ್ನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕನ್ನಡ, ತೆಲುಗು, ತಮಿಳು, ಮಲಯಾಳಂ, ಆತ್ಮ ನಿರ್ಭರ ಪದದ ಅರ್ಥವನ್ನು ಹೇಳುವ ಪ್ರಯತ್ನ ಮಾಡಿದರು.
ಈಗ ದೇಶದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಈ ಆತ್ಮ ನಿರ್ಭರ ಹುಟ್ಟಿಕೊಂಡಿದ್ದು ಹೇಗೆ ? ಎನ್ನುವ ವಿಚಾರವನ್ನು ನಾವು ಐತಿಹಾಸಿಕ ಹಿನ್ನಲೆಯ ಮೂಲಕ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ಆತ್ಮ ನಿರ್ಭರವನ್ನು ಇಂಗ್ಲಿಷ್ ನಲ್ಲಿ self-reliant ಎಂದು ಕರೆಯಲಾಗುತ್ತದೆ.ಇದಕ್ಕೆ ಕನ್ನಡದಲ್ಲಿ 'ಸ್ವಾವಲಂಬನೆ' ಎಂದು ಕರೆಯುತ್ತಾರೆ.
ಆತ್ಮ ನಿರ್ಭರ ಪರಿಭಾಷೆಯ ಹಿನ್ನಲೆ:
ಬ್ರಿಟಿಷರ ವಸಾಹತುಶಾಹಿ ಆಡಳಿತದಲ್ಲಿದ್ದಂತಹ ಭಾರತವು ಸ್ವಾತಂತ್ರದ ನಂತರ ಸಂಪನ್ಮೂಲವನ್ನು ಕ್ರೂಡಿಕರಿಸುವುದು ಅತ್ಯಂತ ಅವಶ್ಯಕವಾಗಿತ್ತು ,ಈ ಹಿನ್ನಲೆಯಲ್ಲಿ ಭಾರತದ ಮೊದಲ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರು ಸ್ವಾವಲಂಬನೆಗೆ ಹೆಚ್ಚಿನ ಆಧ್ಯತೆಯನ್ನು ನೀಡಿದರು.ಈ ಹಿನ್ನಲೆಯಲ್ಲಿ ದೇಶವು ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಪಂಚವಾರ್ಷಿಕ ಯೋಜನೆಗೆ ಚಾಲನೆ ನೀಡಿದರು. ಇನ್ನು ಇದಕ್ಕೂ ಮೊದಲು ಗಾಂಧೀಜಿ ಕರ ಕುಶಲ ಕೈಗಾರಿಕೆಗಳಿಗೆ ಹೆಚ್ಚಿನ ಆಧ್ಯತೆ ನೀಡುವ ಮೂಲಕ ಸ್ವದೇಶೀ ಚಳುವಳಿಗೆ ಮೊದಲ ಅಡಿಪಾಯ ಹಾಕಿದರು.