ನವದೆಹಲಿ: ವಾಹನಗಳ ತಡೆರಹಿತ ವರ್ಗಾವಣೆಗೆ ಅನುಕೂಲವಾಗುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ(Ministry of Road Transport & Highways)ವು ಹೊಸ ವಾಹನಗಳಿಗೆ ಹೊಸ ನೋಂದಣಿ ಗುರುತು ಪರಿಚಯಿಸಿದೆ. ಅಂದರೆ ‘ಭಾರತ್ ಸರಣಿ’ (ಬಿಎಚ್-ಸರಣಿ). ವಾಹನದ ಮಾಲೀಕರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸ್ಥಳಾಂತರಗೊಂಡಾಗ ಈ ನೋಂದಣಿ ಗುರುತು ಹೊಂದಿರುವ ವಾಹನಕ್ಕೆ ಹೊಸ ನೋಂದಣಿ ಗುರುತು ನೀಡುವ ಅಗತ್ಯವಿಲ್ಲ.


COMMERCIAL BREAK
SCROLL TO CONTINUE READING

ರಕ್ಷಣಾ ಸಿಬ್ಬಂದಿ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಿಗಳು, ಸರ್ಕಾರಿ ಸ್ವಾಮ್ಯದ ಕಂಪನಿಗಳು ಹಾಗೂ 4 ಅಥವಾ ಅದಕ್ಕಿಂತ ಹೆಚ್ಚಿನ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶದಲ್ಲಿ ಕಚೇರಿಗಳನ್ನು ಹೊಂದಿರುವ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಈ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಸ್ವಯಂ ಪ್ರೇರಿತವಾಗಿ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು ಎಂದು ಸಚಿವಾಲಯವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


ಇದನ್ನೂ ಓದಿ: ಸೆ.1 ರಿಂದ ಆಗುವ ಈ ಮಹತ್ವದ ಬದಲಾವಣೆಗಳನ್ನು ನೀವು ಗಮನಿಸಲೇಬೇಕು..! ಇಲ್ಲದಿದ್ದರೆ ಏನ್ ಆಗುತ್ತೆ ಗೊತ್ತಾ?


ಕೇಂದ್ರ ಮೋಟಾರು ವಾಹನಗಳ(12ನೇ ತಿದ್ದುಪಡಿ) ನಿಯಮ(Central Motor Vehicles Act)ವು ಸೆ.15ರಿಂದ ಜಾರಿಗೆ ಬರಲಿದೆ. ಬಿಎಚ್-ಸರಣಿಯ ವಾಹನಗಳಿಗೆ ನೋಂದಣಿಯನ್ನು ಆನ್ಲೈನ್ ಮೂಲಕ ಮಾಡಲಾಗುತ್ತದೆ. ಸದ್ಯ ಇರುವ ನಿಯಮದ ಪ್ರಕಾರ ಯಾವುದೇ ವಾಹನ ಮಾಲೀಕರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸ್ಥಳಾಂತರಗೊಂಡಾಗ ಆ ರಾಜ್ಯದಲ್ಲಿ 12 ತಿಂಗಳೊಳಗಾಗಿ ಮರು ನೋಂದಣಿ ಮಾಡಿಸಿಕೊಳ್ಳಬೇಕು.  


ವಾಹನಗಳಿಗೆ ‘ಬಿಎಚ್’ ಭಾರತ್ ಸರಣಿಯ ಪ್ರಯೋಜನಗಳು


ಮೋಟಾರು ವಾಹನ ತೆರಿಗೆ(Motor Vehicles Tax)ಯನ್ನು 2 ವರ್ಷ ಅಥವಾ 4, 6, 8 ವರ್ಷಗಳವರೆಗೆ ವಿಧಿಸಲಾಗುತ್ತದೆ. ಈ ಯೋಜನೆಯು ಹೊಸ ರಾಜ್ಯ/ಕೇಂದ್ರಾಡಳಿತ ಪ್ರದೇಶಕ್ಕೆ ಸ್ಥಳಾಂತರಗೊಂಡ ನಂತರ ಭಾರತದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ್ಯಂತ ವೈಯಕ್ತಿಕ ವಾಹನಗಳ ಉಚಿತ ಸಂಚಾರವನ್ನು ಸುಲಭಗೊಳಿಸುತ್ತದೆ. 14ನೇ ವರ್ಷ ಪೂರ್ಣಗೊಂಡ ನಂತರ ಮೋಟಾರು ವಾಹನ ತೆರಿಗೆಯನ್ನು ವಾರ್ಷಿಕವಾಗಿ ವಿಧಿಸಲಾಗುತ್ತದೆ. ಅದು ಆ ವಾಹನಕ್ಕೆ ಈ ಹಿಂದೆ ವಿಧಿಸಿದ ಮೊತ್ತದ ಅರ್ಧದಷ್ಟು ಆಗಿರುತ್ತದೆ.


ಭಾರತ್ ಸರಣಿಯ ಸ್ವರೂಪ (BH- ಸರಣಿ) ನೋಂದಣಿ ಗುರುತು -


ನೋಂದಣಿ ಗುರುತು ನಮೂನೆ: -


YH BH #### XX


YY - ಮೊದಲ ನೋಂದಣಿಯ ವರ್ಷ


BH- ಭಾರತ್ ಸರಣಿಗಾಗಿ ಕೋಡ್


####- 0000 ರಿಂದ 9999 (randomized)


XX- Alphabets (AA to ZZ)


ಇದನ್ನೂ ಓದಿ: Smartphone Tips: ನಿಮ್ಮ ಫೋನ್ ಅನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಟ್ರೈ ಮಾಡಿ


'ಬಿಎಚ್' ಭಾರತ್ ಸರಣಿಗೆ ಅರ್ಜಿ ಸಲ್ಲಿಸುವುದು ಹೇಗೆ..?


ವಾಹನವನ್ನು ಮರು ನೋಂದಾಯಿಸಲು ಪ್ರಯಾಣಿಕ ವಾಹನದ ಬಳಕೆದಾರರು ಈ ಕೆಳಗಿನ ಕ್ರಮಗಳನ್ನು ಅನುಸರಿಸಬೇಕು.


(i) ಮತ್ತೊಂದು ರಾಜ್ಯದಲ್ಲಿ ಹೊಸ ನೋಂದಣಿ ಸಂಖ್ಯೆ ಪಡೆದುಕೊಳ್ಳಲು ಪ್ರಸ್ತುತ ನೀವು ಇರುವ ರಾಜ್ಯದಿಂದ ‘ನೋ ಆಬ್ಜೆಕ್ಷನ್ ಸರ್ಟಿಫಿಕೇಟ್’ ಪಡೆದುಕೊಳ್ಳಬೇಕು.  


(ii) NOC ಪಡೆದ ನಂತರ ಹೊಸ ರಾಜ್ಯದಲ್ಲಿ ಪ್ರೊರಾಟಾ(prorate) ಆಧಾರದ ಮೇಲೆ ರಸ್ತೆ ತೆರಿಗೆಯನ್ನು ಪಾವತಿಸಿದ ನಂತರ ನಿಮಗೆ ಹೊಸ ನೋಂದಣಿ ಸಂಖ್ಯೆಯನ್ನು ನೀಡಲಾಗುತ್ತದೆ


(iii) ಆನಂತರ ನೀವು ಪರ ರಾಜ್ಯಗಳ ಆಧಾರದ ಮೇಲೆ ಮೂಲ ರಾಜ್ಯದಲ್ಲಿ ರಸ್ತೆ ತೆರಿಗೆ ಮರುಪಾವತಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.


ಆದಾಗ್ಯೂ ಪರ ರಾಜ್ಯಗಳ ಆಧಾರದ ಮೇಲೆ ಮಾತೃ ರಾಜ್ಯದಿಂದ ಮರುಪಾವತಿ ಪಡೆಯಲು ಈ ನಿಬಂಧನೆಯು ಬಹಳ ತೊಡಕಿನ ಪ್ರಕ್ರಿಯೆಯಾಗಿರುತ್ತದೆ. ನಿಯಮಗಳು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಬದಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ