ನವದೆಹಲಿ: ಮ್ಯೂಚುವಲ್ ಫಂಡ್ ಹೂಡಿಕೆಯನ್ನು ಉಲ್ಲೇಖಿಸುವಾಗ ನೀವು ಎಸ್‌ಐಪಿ, ಎಸ್‌ಟಿಪಿ ಮತ್ತು ಎಸ್‌ಡಬ್ಲ್ಯುಪಿ ಎಂಬ ಹೆಸರನ್ನು ಕೇಳಿರಬಹುದು ಅಥವಾ ಓದಿರಬೇಕು, ಹೆಚ್ಚಿನ ಜನರು ಎಸ್‌ಐಪಿ ತಿಳಿದುಕೊಳ್ಳುವ ಮೂಲಕ ತಮ್ಮ ಹೂಡಿಕೆಯ ಜ್ಞಾನವು ಪೂರ್ಣಗೊಂಡಿದೆ ಎಂದು ಭಾವಿಸುತ್ತಾರೆ. ಆದರೆ, ಎಸ್‌ಟಿಪಿ ಮತ್ತು ಎಸ್‌ಡಬ್ಲ್ಯೂಪಿ ಬಗ್ಗೆ ತಿಳಿದುಕೊಳ್ಳುವುದು ಸಹ ಬಹಳ ಮುಖ್ಯ. ಏಕೆಂದರೆ SWP, STP ಗಳ ಮಾಹಿತಿ ತಿಳಿಯದೆ SIP ಯ ಸಂಪೂರ್ಣ ಲಾಭ ಪಡೆಯಲು ಸಾಧ್ಯವಿಲ್ಲ.  ಹಾಗಾದರೆ ಬನ್ನಿ ಸರಳ ಭಾಷೆಯಲ್ಲಿ SIP, STP ಹಾಗೂ SWP ಏನು ಎಂಬುವುದನ್ನು ಅರಿಯೋಣ.


COMMERCIAL BREAK
SCROLL TO CONTINUE READING

SIP ಅಂದರೇನು?
ನೀವು ಮ್ಯೂಚುವಲ್ ಫಂಡ್‌ನಲ್ಲಿ ನಿಗದಿತ ಅವಧಿಯಲ್ಲಿ (ಪ್ರತಿ ತಿಂಗಳು / ತ್ರೈಮಾಸಿಕ) ಠೇವಣಿ ಇರಿಸಿದಾಗ ಅದನ್ನು ಎಸ್‌ಐಪಿ (ವ್ಯವಸ್ಥಿತ ಹೂಡಿಕೆ) ಎಂದು ಕರೆಯಲಾಗುತ್ತದೆ. ನೀವು 500 ರೂಪಾಯಿಗಳೊಂದಿಗೆ ಎಸ್‌ಐಪಿ ಪ್ರಾರಂಭಿಸಬಹುದು. ಎಸ್‌ಐಪಿ ಎಂದರೆ ಹೂಡಿಕೆಯ ಆಯುಧ. ಅಂದರೆ, ಅದು ನಿಮ್ಮ ಹೂಡಿಕೆಯನ್ನು ಮಾರುಕಟ್ಟೆಯ ಏರಿಳಿತಗಳಿಂದ ಹೆಚ್ಚಿನ ಪ್ರಮಾಣದಲ್ಲಿ ರಕ್ಷಿಸುತ್ತದೆ. ನಿಮಗೆ ಸ್ಟಾಕ್ ಮಾರುಕಟ್ಟೆಯ ಬಗ್ಗೆ ಹೆಚ್ಚಿನ ಜ್ಞಾನವಿಲ್ಲದಿದ್ದರೆ ಅಥವಾ ಮಾರುಕಟ್ಟೆಯನ್ನು ಪತ್ತೆಹಚ್ಚಲು ಸಮಯವಿಲ್ಲದಿದ್ದರೆ, ಎಸ್‌ಐಪಿ ಹೂಡಿಕೆ ಒಂದು ಉತ್ತಮ ಆಯ್ಕೆಯಾಗಿದೆ.


ಜೀವನದ ಆರ್ಥಿಕ ಗುರಿಗಳನ್ನು ಸಾಧಿಸುವುದು ಎಸ್‌ಐಪಿಯ ಮುಖ್ಯ ಉದ್ದೇಶ, ಉದಾಹರಣೆಗೆ, ಮನೆಯನ್ನು ಖರೀದಿಸಬೇಕಾದರೆ, ಕಾರನ್ನು ಖರೀದಿಸಬೇಕಾದರೆ ಅಥವಾ ಮಕ್ಕಳ ಶಿಕ್ಷಣಕ್ಕಾಗಿ ಹಣವನ್ನು ಸಂಗ್ರಹಿಸಬೇಕಾದರೆ, ಎಸ್‌ಐಪಿ ನಿಮಗೆ ಉತ್ತಮ ಹೂಡಿಕೆ ಆಯ್ಕೆಯಾಗಿದೆ. ಎಸ್‌ಐಪಿ ಬಗ್ಗೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಇದರಲ್ಲಿ ನೀವು ಸಂಯುಕ್ತ ಪ್ರಯೋಜನಗಳನ್ನು ಪಡೆಯುತ್ತೀರಿ, ಅಂದರೆ, ನೀವು ಹೆಚ್ಚಿನ ಅವಧಿಗಾಗಿ ಈ ಯೋಜನೆಯಲ್ಲಿ ಹಣ  ಹೂಡಿಕೆ ಮಾಡಿದರೆ, ನೀವು ಹೆಚ್ಚು ಹಣವನ್ನು ಗಳಿಸಬಹುದು. ಹೀಗಾಗಿ ಆದಷ್ಟು ಬೇಗ SIP ಹೂಡಿಕೆ ಪ್ರಾರಂಭಿಸಿ ಎಂದು ಬಹುತೇಕ ಮಾರುಕಟ್ಟೆಯ ತಜ್ಞರು ಸಲಹೆ ನೀಡುತ್ತಾರೆ. ನಿಮ್ಮ ಬಳಿ ಹಣ ಇದ್ದಾಗ ಮಾತ್ರ ಇದರಲ್ಲಿ ಹಣ ಹೂಡಿಕೆ ಮಾಡಬೇಕು ಎಂಬ ನಿಯಮವಿಲ್ಲ. ನೀವು ಕೇವಲ ರೂ.500 ಮೂಲಕವೂ ಕೂಡ ಹೂಡಿಕೆ ಆರಂಭಿಸಬಹುದು. ನಿಗದಿತ ಕಾಲಾಂತರದಲ್ಲಿ ಹೂಡಿಕೆಯನ್ನು ಹೆಚ್ಚಿಸುವ ಮೂಲಕ ನೀವು ನಿಮ್ಮ ಆದಾಯವನ್ನೂ ಕೂಡ ಹೆಚ್ಚಿಸಬಹುದು.


STP ಅಂದರೇನು?
STP ಅಂದರೆ ಸಿಸ್ಟಮ್ಯಾಟಿಕ್ ಟ್ರಾನ್ಸ್ಫರ್ ಪ್ಲಾನ್.  ಒಂದು ವೇಳೆ ನಿಮ್ಮ ಬಳಿ ಒಂದೇ ಬಾರಿಗೆ ಅತಿ ಹೆಚ್ಚು ಹಣ ಬಂದರೆ ಹಾಗೂ ಒಂದೇ ಬಾರಿಗೆ ನೀವು ಅದನ್ನು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸುವುದಿಲ್ಲ. ಏಕೆಂದರೆ, ಅದರಲ್ಲಿ ತುಂಬಾ ರಿಸ್ಕ್ ಇರುತ್ತದೆ. ಇಂತಹ ಸಂದರ್ಭದಲ್ಲಿ STP ನಿಮಗೆ ಒಂದು ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ನೀವು ಯಾವುದೇ ಒಂದು ಫಂಡ್ ಹೌಸ್ ನ ಲಿಕ್ವಿಡ್ ಫಂಡ್ ಅಥವಾ ಡೆಟ್ ಫಂಡ್ ನಲ್ಲಿ ಎಲ್ಲ ಹಣವನ್ನು ಏಕಕಾಲಕ್ಕೆ ಇಡಬಹುದು. ಬಳಿಕ ಇದೆ ಹಣವನ್ನು ಅದೇ ಫಂಡ್ ಹೌಸ್ ನ ಇಕ್ವಿಟಿ ಫಂಡ್ ನಿಂದ ನಿಯಮಿತ ಕಾಲಾವಧಿಯಲ್ಲಿ STP ಮೂಲಕ ವರ್ಗಾವಣೆಯಾಗುತ್ತದೆ.


ಕನಿಷ್ಠ STP ಮೊತ್ತ ಆ ಫಂಡ್ ಹೌಸ್ ಸ್ಕೀಮ್ ಹಾಗೂ ಫಂಡ್ ಮೇಲೆ ಅವಲಂಭಿಸಿರುತ್ತದೆ. STP ಮೂಲಕ ನೀವು ನಿಮ್ಮ ಹಣವನ್ನು ಹಲವು ಸ್ಕೀಮ್ ಗಳಲ್ಲಿ ಹಂಚಿಕೆ ಮಾಡಬಹುದು.  ಮೊದಲನೆಯದಾಗಿ ಇಕ್ವಿಟಿ ಫಂಡ್ ನಲ್ಲಿ ಮಾಡಿರುವ ಹೂಡಿಕೆಯ ಮೇಲೆ ಉತ್ತಮ ರಿಟರ್ನ್ ಸಿಗುತ್ತದೆ. ಎರಡನೆಯದಾಗಿ ಡೆಟ್ ಫಂಡ್ ನಲ್ಲಿ ನೀವು ಏಕಕಾಲಕ್ಕೆ ಮಾಡಿರುವ ಹೂಡಿಕೆ ಸುರಕ್ಷಿತ ಕೂಡ ಆಗಿರುತ್ತದೆ.


STP ಅನ್ನು ಇಕ್ವಿಟಿಯಿಂದ ಡೆಟ್ ಕೂಡ ಪರಿವರ್ತಿಸಬಹುದು. ನೀವು ನಿಮ್ಮ ಗುರಿಯ ಹತ್ತಿರಕ್ಕೆ ಇರುವಾಗ ಮಾತ್ರ ಈ  ರೀತಿ ಮಾಡುವುದು ಉತ್ತಮ. ಇದರಿಂದ ನಿಮ್ಮ ಹೂಡಿಕೆಯ ಮೇಲಿನ ರಿಸ್ಕ್ ಕಮ್ಮಿಯಾಗುತ್ತದೆ. ಹೀಗಾಗಿ ನಿಧಾನವಾಗಿ ನೀವು ನಿಮ್ಮ ಇಕ್ವಿಟಿ ಹೂಡಿಕೆಯನ್ನು ಡೆಟ್ ಕಡೆಗೆ ಕೊಂಡೊಯ್ಯಬೇಕು.


SWP ಅಂದರೇನು?
SWP ಅಂದರೆ ಸಿಸ್ಟಮ್ಯಾಟಿಕ್ ವಿಥ್ ಡ್ರಾವಲ್ ಪ್ಲಾನ್. ಹೆಸರೇ ಸೂಚಿಸುವಂತೆ SIP ತದ್ವಿರುದ್ಧ ಅಂದರೆ ಅದು SWP. ಇದರಲ್ಲಿ ನೀವು ನಿಮ್ಮ ಫಂಡ್ ಅಕೌಂಟ್ ನಿಂದ ಒಂದು ನಿರ್ಧಿಷ್ಟ ಪ್ರಮಾಣದ ಮೊತ್ತವನ್ನು ನಿಯಮಿತ ಕಾಲಾಂತರದಲ್ಲಿ ಹಿಂಪಡೆಯುತ್ತಿರಿ. ನಿಮ್ಮ ಮ್ಯೂಚವಲ್ ಫಂಡ್ ಖಾತೆಯಲ್ಲಿ ಕನಿಷ್ಠ ಅಂದರೆ 25,000 ರೂ. ಇದ್ದಾಗ ಮಾತ್ರ ಮಾಡಬೇಕು. ಏಕಕಾಲಕ್ಕೆ ಒಂದುವೇಳೆ ನೀವು ಯಾವುದೇ ಮ್ಯೂಚವಲ್ ಫಂಡ್ ಖಾತೆಯಲ್ಲಿ ಹಣ ಹೂಡಿಕೆ ಮಾಡಿ, ಬಳಿಕ ಹಿಂಪಡೆದರೆ. ಈ ಹಿಂಪಡೆಯುವಿಕೆಯನ್ನು ನೀವು ಮಾಸಿಕ ಅಥವಾ ತ್ರೈಮಾಸಿಕವಾಗಿ ಹಿಂಪಡೆಯಬೇಕು.


ಸಾಮಾನ್ಯವಾಗಿ SWP ಬಳಕೆಯನ್ನು ನಿವೃತ್ತಿಯ ವೇಳೆ ಮಾಡಲಾಗುತ್ತದೆ. ಇದು, ಸ್ವಂತ ಬಳಕೆಗಾಗಿ ಸಿದ್ಧ ಪಡಿಸಿರುವ ಒಂದು ಪೆನ್ಷನ್ ಆಗಿದೆ. ಆದರೆ, ಒಂದು ವೇಳೆ ನಿಮ್ಮ ಬಳಿ ಹಣ ಗಳಿಕೆಯ ಯಾವುದೇ ಸಾಧನ ಇಲ್ಲ ಎಂದ ವೇಳೆಯೂ ಕೂಡ ನೀವು ಇದನ್ನು ಬಳಕೆ ಮಾಡಬಹುದು. ಉದಾಹರಣೆಗಾಗಿ ಕೊರೊನಾ ಸಂಕಷ್ಟದಲ್ಲಿ ಹಲವರು ತಮ್ಮ ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.