ನವದೆಹಲಿ: ಆಫ್ರಿಕಾದ ಗಾಂಧಿ ಎಂದೇ ಕರೆಯಲ್ಪಡುವ ನೆಲ್ಸನ್ ಮಂಡೇಲಾರ 101ನೇ ಜಯಂತಿಯಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಈಗ ನೆಲ್ಸನ್ ಮಂಡೇಲಾ ಜೊತೆಗಿರುವ ಫೋಟೋವೊಂದನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳುವ ಮೂಲಕ ಅವರನ್ನು ಸ್ಮರಿಸಿದ್ದಾರೆ.


COMMERCIAL BREAK
SCROLL TO CONTINUE READING

'ಇಡೀ ಜಗತ್ತು ನೆಲ್ಸನ್ ಮಂಡೇಲಾ ರಂತಹ ವ್ಯಕ್ತಿಗಳನ್ನು ಮಿಸ್ ಮಾಡಿಕೊಳ್ಳಲಿದೆ. ಅವರ ಜೀವನವು ಸತ್ಯ, ಪ್ರೀತಿ ಮತ್ತು ಸ್ವಾತಂತ್ರ್ಯಕ್ಕೆ ಸಾಕ್ಷಿಯಾಗಿದೆ. ನನಗೆ, ಅವರು ನೆಲ್ಸನ್ ಅಂಕಲ್ ( ನನಗೊಮ್ಮೆ ಅವರು ಬೇರೆ ಯಾರಾದರೂ ಮಾಡುವ ಮೊದಲು ನಾನು ರಾಜಕೀಯದಲ್ಲಿರಬೇಕು ಎಂದು ಹೇಳಿದ್ದರು!). ಅವನು ಯಾವಾಗಲೂ ನನಗೆ ಸ್ಫೂರ್ತಿ ಮತ್ತು ಮಾರ್ಗದರ್ಶಿಯಾಗಿರುತ್ತಾರೆ "ಎಂದು ಅವರು ನೆಲ್ಸನ್ ಮಂಡೇಲಾ ತಮ್ಮ ಮಗನನ್ನು ಎತ್ತಿ  ಹಿಡಿದಿರುವ ಫೋಟೋದೊಂದಿಗೆ ಪೋಸ್ಟ್ ಮಾಡಿದ್ದಾರೆ. 



ಜುಲೈ 18 ನೆಲ್ಸನ್ ಮಂಡೇಲಾ ಅವರ ಜನ್ಮ ದಿನಾಚರಣೆಯನ್ನು ಜಗತ್ತಿನೆಲ್ಲೆಡೆ ಆಚರಿಸುತ್ತಾರೆ. ದಕ್ಷಿಣ ಆಫ್ರಿಕಾದಲ್ಲಿನ ವರ್ಣಬೇದ ನೀತಿಯ ವಿರುದ್ಧದ ಹೋರಾಟದಲ್ಲಿ ಅವರು ಸುಮಾರು 27 ವರ್ಷಗಳ ಕಾಲ ಸೆರೆಮನೆವಾಸವನ್ನು ಅನುಭವಿಸಿ ಬಿಡುಗಡೆ ಯಾದರು, ತದನಂತರ ಅವರು ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿ ಆಯ್ಕೆಯಾದರು.


ಮಹಾತ್ಮಾ ಗಾಂಧೀಯವರ ವಿಚಾರಗಳಿಂದ ಪ್ರೇರಿತರಾದ ನೆಲ್ಸನ್ ಮಂಡೇಲಾ ವರ್ಣಬೇದ ನೀತಿ ವಿರುದ್ಧದ ಹೋರಾಟವನ್ನು ಕೈಕೊಂಡಿದ್ದರು. 1995 ರಲ್ಲಿ ಅವರು ಅಹಮದಾಬಾದಗೆ ಆಗಮಿಸಿದಾಗ ಮಹಾತ್ಮಾ ಗಾಂಧೀ ಯವರ ಸರಳತೆ ಮಾನವೀಯತೆ ಬಡವರಿಗಾಗಿನ ಪ್ರೀತಿ ಗಾಂಧಿಜಿ ತೋರಿಸಿದ ಹಂತವನ್ನು ನನಗೆ ಎಂದು ತಲುಪಲು ಸಾಧ್ಯವಿಲ್ಲ ಎಂದು ಅವರು ಹೇಳಿದರು .