ನವದೆಹಲಿ: ಭಾರತದ ವೈವಿಧ್ಯತೆ ಮತ್ತು ಬಹುಮುಖ ಪ್ರತಿಭೆಯ ಬಗ್ಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ ಉದ್ಯಮಿ ರಾಬರ್ಟ್ ವಾದ್ರಾ ಭಾನುವಾರ 'ಭವಿಷ್ಯವನ್ನು ಹೇಳುವ ಹಸು' ಕುರಿತು ಮಾತನಾಡುವಾಗ ಬೀದಿಗಳಲ್ಲಿ ವಿಹಾರದ ಅನುಭವವನ್ನು ವಿವರಿಸುವ ಚಿತ್ರಗಳನ್ನು ಮತ್ತು ವೀಡಿಯೊವನ್ನು ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ತಮ್ಮ ಫೇಸ್ ಬುಕ್ ಖಾತೆಯಲ್ಲಿ ಫೋಟೋ ಗಳನ್ನು ಹಂಚಿಕೊಂಡಿರುವ ರಾಬರ್ಟ್ ವಾದ್ರಾ "ಭಾರತವನ್ನು ಅದರ ವೈವಿಧ್ಯತೆ ಮತ್ತು ಬಹುಮುಖತೆಗಾಗಿ ಪ್ರೀತಿಸಿ !! "ನೀವು ಬೀದಿಯಲ್ಲಿ ಸಾಕಷ್ಟು ಕಲಿಯಬಹುದು ... ಜನರಿಗೆ ಸಹಾಯ ಮಾಡಿ, ಮತ್ತು ಅವರ ನಗುವಿನಲ್ಲಿನ ಮೆಚ್ಚುಗೆಯನ್ನು ನೋಡಿ ಅದಕ್ಕೆ ಪ್ರತಿಯಾಗಿ ಗುಲಾಬಿಗಳನ್ನು ಪಡೆಯಬಹುದು ..." ಎಂದು ನಗುತ್ತಿರುವ ಮಕ್ಕಳ ಗುಂಪಿನ ಮೂರು ಚಿತ್ರಗಳ ಜೊತೆಗೆ ಹಂಚಿಕೊಂಡು ಈ ರೀತಿಯಾಗಿ ಬರೆದುಕೊಂಡಿದ್ದಾರೆ.



ಇದೇ ವೇಳೆ ತಲೆಯನ್ನು ಅಲ್ಲಾಡಿಸುವ ಮೂಲಕ ಭವಿಷ್ಯವನ್ನು ಹೇಳುವ ಹಸುವನ್ನು ಭೇಟಿ ಮಾಡಿ ಅದರ ಬಗ್ಗೆಯೂ ಬರೆದುಕೊಂಡಿದ್ದಾರೆ. "ಪವಿತ್ರ ಹಸುವಿನಿಂದ ನಿಮ್ಮ ಭವಿಷ್ಯವನ್ನು ಸಹ ನೀವು ತಿಳಿದುಕೊಳ್ಳಬಹುದು, ಅದು ತಲೆಯನ್ನು ಅಲ್ಲಾಡಿಸುವ ಮೂಲಕ ಭವಿಷ್ಯವನ್ನು ಹೇಳುತ್ತದೆ ಎಂದಿದ್ದಾರೆ. ಇನ್ನು ಮುಂದುವರೆದು ಪ್ರೀತಿ ಎನ್ನುವುದು ಈ ದೇಶದ ಅದ್ಬುತ ಭಾಗವಾಗಿದೆ ಎಂದು ಹಸುವಿನ ಚಿತ್ರ ಹಾಗೂ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ.


ರಾಬರ್ಟ್ ವಾದ್ರಾ ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ವಿವಿಧ ಸ್ಥಳಗಳಿಗೆ ಅವರ ಭೇಟಿಗಳು ಮತ್ತು ವಿವಿಧ ವಿಷಯಗಳ ಬಗ್ಗೆ ಅವರ ಅಭಿಪ್ರಾಯಗಳು ಸೇರಿದಂತೆ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.