ನವದೆಹಲಿ: ಇಂದು ವಿಶ್ವಾದ್ಯಂತ ಅತಿ ಹೆಚ್ಚು ಬಳಕೆಯಾಗುವ ಇನ್ಸ್ಟಂಟ್ ಮೆಸೇಜಿಂಗ್ ಆಪ್ ಅಂದರೆ ಅದು ವಾಟ್ಸ್ ಆಪ್. ಕಳೆದ ಕೆಲ ಕಾಲದಿಂದ ವಾಟ್ಸ್ ಆಪ್ ಟೆಲಿಗ್ರಾಮ್ ಗೆ ಭಾರಿ ಪೈಪೋಟಿ ನೀಡುತ್ತಿದೆ. ಇದೆ ನಿಟ್ಟಿನಲ್ಲಿ ಇದೀಗ ವಾಟ್ಸ್ ಆಪ್, ಟೆಲಿಗ್ರಾಮ್ ಮಾದರಿಯಲ್ಲಿಯೇ ತನ್ನ ಪ್ಲಾಟ್ಫಾರ್ಮ್ ಮೇಲೂ ಕೂಡ ಅನಿಮೇಟೆಡ್ ಸ್ಟಿಕರ್ ವೈಶಿಷ್ಟ್ಯ ಬಿಡುಗಡೆಗೊಳಿಸಿದೆ. ಇದಕ್ಕೂ ಮೊದಲು ವಾಟ್ಸ್ ಆಪ್ ನ ಅನಿಮೇಟೆಡ್ ಸ್ಟಿಕರ್ ವೈಶಿಷ್ಟ್ಯ ಬೀಟಾ ವರ್ಶನ್ v2.20.194.7 ನಲ್ಲಿ ಸ್ಪಾಟ್ ಮಾಡಲಾಗಿತ್ತು. ಆದರೆ, ತಕ್ಷಣ ಅದರ ಮುಂದಿನ ಆವೃತ್ತಿ v2.20.194.9 ಯಿಂದ ವಾಟ್ಸ್ ಆಪ್ ಈ ವೈಶಿಷ್ಟ್ಯವನ್ನು ತೆಗೆದು ಹಾಕಿತ್ತು. ಇದೀಗ ಕಂಪನಿ ತನ್ನ ಎಲ್ಲ ಬಳದೆದಾರರಿಗೆ ಈ ಬಹುನಿರೀಕ್ಷಿತ ವೈಶಿಷ್ಟ್ಯವನ್ನು ರೋಲ್ ಔಟ್ ಮಾಡಿದೆ. ಈ ಕುರಿತು ಕಂಪನಿ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಘೋಷಣೆ ಮಾಡಿದೆ. ಅಂಡ್ರಾಯಿಡ್ ಹಾಗೂ iOS ಎರಡು ಪ್ಲಾಟ್ಫಾರ್ಮ್ ಗಳಿಗಾಗಿ ಕಂಪನಿ ತನ್ನ ಈ ವೈಶಿಷ್ಟ್ಯವನ್ನು ಬಿಡುಗಡೆಗೊಳಿಸಿದೆ.



COMMERCIAL BREAK
SCROLL TO CONTINUE READING

ಅಪ್ಡೇಟ್ ಮಾಡಿ ನಿಮ್ಮ ವಾಟ್ಸ್ ಆಪ್
ಒಂದು ವೇಳೆ ನೀವೂ ಕೂಡ ವಾಟ್ಸ್ ಆಪ್ ನ ಅನಿಮೇಟೆಡ್ ಸ್ಟಿಕರ್ ಅನ್ನು ಬಳಸಲು ಬಯಸುತ್ತಿದ್ದರೆ, ಇದಕ್ಕಾಗಿ ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿರುವ ವಾಟ್ಸ್ ಆಪ್ ಅನ್ನು ಅಪ್ಡೇಟ್ ಮಾಡಬೇಕು. ಅಂಡ್ರಾಯಿಡ್ ಬಳಕೆದಾರರಿಗೆ v2.20194.16 ಹಾಗೂ iOS ಬಳಕೆದಾರರಿಗೆ v2.20.70 ಆವೃತ್ತಿಗಳ ಮೇಲೆ ವಾಟ್ಸ್ ಆಪ್ ಅನಿಮೇಟೆಡ್ ಸ್ಟಿಕರ್ ಗಳು ಸಿಗಲಿವೆ. ಇದಕ್ಕಾಗಿ ನೀವು ನಿಮ್ಮ ಪ್ಲೇ ಸ್ಟೋರ್ ಗೆ ಭೇಟಿ ನೀಡಿ ನಿಮ್ಮ ಮೊಬೈಲ್ ನಲ್ಲಿರುವ ವಾಟ್ಸ್ ಆಪ್ ಆವೃತ್ತಿಯನ್ನು ನೂತನ ಆವೃತ್ತಿಗೆ ಅಪ್ಡೇಟ್ ಮಾಡಬೇಕು. ಇದರ ಬಳಿಕ ಮಾತ್ರ ನೀವು ವಾಟ್ಸ್ ಆಪ್ ನ ಅನಿಮೇಟೆಡ್ ಸ್ಟಿಕರ್ ವೈಶಿಷ್ಟ್ಯವನ್ನು ಬಳಸಬಹುದು.


ಹೇಗೆ ಬಳಸಬೇಕು?
ಹೊಸ ಅನಿಮೇಟೆಡ್ ಸ್ಟಿಕ್ಕರ್ ವೈಶಿಷ್ಟ್ಯ ಬಳಸಲು ಎಮೋಜಿ ಐಕಾನ್ ಕ್ಲಿಕ್ ಮಾಡಿ. ನಂತರ (+) ಐಕಾನ್ ಟ್ಯಾಪ್ ಮಾಡಿ. ಇದರ ನಂತರ ಸ್ಟಿಕ್ಕರ್ ಸ್ಟೋರ್ ನಿಮಗಾಗಿ ತೆರೆದುಕೊಳ್ಳಲಿದೆ. ಇದರ ನಂತರ ನೀವು ಅನಿಮೇಟೆಡ್ ಸ್ಟಿಕ್ಕರ್ ಪ್ಯಾಕ್ ಅನ್ನು ಡೌನ್‌ಲೋಡ್ ಮಾಡಬಹುದು ಮತ್ತು ಬಳಸಬಹುದು. ಟೆಲಿಗ್ರಾಮ್ ಈಗಾಗಲೇ ಅನಿಮೇಟೆಡ್ ಸ್ಟಿಕ್ಕರ್ ವೈಶಿಷ್ಟ್ಯವನ್ನು ಹೊಂದಿದೆ. ಈ ಅನಿಮೇಟೆಡ್ ಸ್ಟಿಕ್ಕರ್‌ಗಳನ್ನು ಡೆಸ್ಕ್‌ಟಾಪ್ ಆವೃತ್ತಿಯಲ್ಲಿ ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ, ಆದ್ದರಿಂದ ಬಳಕೆದಾರರು ಅವುಗಳನ್ನು ಫೋನ್‌ನಲ್ಲಿ ಮೊದಲು ಡೌನ್‌ಲೋಡ್ ಮಾಡಿ ನಂತರ  ಅವುಗಳನ್ನು ಡೆಸ್ಕ್‌ಟಾಪ್‌ನಲ್ಲಿ ಬಳಸಬಹುದು.


ಡೆಸ್ಕ್ ಟಾಪ್ ಗಾಗಿ ಡಾರ್ಕ್ ಮೋಡ್ ಪರಿಚಯ
ವಾಟ್ಸಾಪ್ ಇತ್ತೀಚೆಗಷ್ಟೇ ಡೆಸ್ಕ್‌ಟಾಪ್‌ಗಾಗಿ ಡಾರ್ಕ್ ಮೋಡ್ ನವೀಕರಣವನ್ನು ಬಿಡುಗಡೆ ಮಾಡಿದೆ. ಈ ಮೊದಲು ಈ ವೈಶಿಷ್ಟ್ಯಗಳು ಮೊಬೈಲ್ ಅಪ್ಲಿಕೇಶನ್‌ಗಳಿಗೆ ಮಾತ್ರ ಸೀಮಿತವಾಗಿತ್ತು. ಈಗ ಈ ವೈಶಿಷ್ಟ್ಯದ ಪರಿಚಯದ ನಂತರ, ಬಳಕೆದಾರರು ಡಾರ್ಕ್ ಮೋಡ್ ಅನ್ನು ಆನಂದಿಸಲು ಯಾವುದೇ ಟ್ರಿಕ್ ಅನ್ನು ಬಳಸಬೇಕಾಗಿಲ್ಲ.