ನವದೆಹಲಿ: ಲಾಕ್ ಡೌನ್ ಕಾಲಾವಧಿಯಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಗೆ ಹೆಚ್ಚಾಗುತ್ತಿರುವ ಬೇಡಿಕೆಯನ್ನು ಪರಿಗಣಿಸಿರುವ ವಿಶ್ವದ ನಂ.1 ಮೆಸೇಜಿಂಗ್ ಆಪ್ WhatsApp ಕೂಡ ತನ್ನ ಗ್ರೂಪ್ ಕಾಲಿಂಗ್ ವೈಶಿಷ್ಟ್ಯದಲ್ಲಿ ಭಾರಿ ಬದಲಾವಣೆ ಮಾಡುವುದಾಗಿ ಘೋಷಿಸಿದೆ. ವಾಟ್ಸ್ ಆಪ್ ನ ಗ್ರೂಪ್ ಕಾಲಿಂಗ್ ಅಡಿಯಲ್ಲಿ ಈ ಮೊದಲು ನೀವು ಕೇವಲ ನಾಲ್ವರು ಸದಸ್ಯರನ್ನು ಮಾತ್ರ ಜೋಡಿಸಬಹುದಿತ್ತು. ಇದೀಗ ಈ ಸಂಖ್ಯೆಯನ್ನು ಹೆಚ್ಚಿಸಲು ತಯಾರಿ ನಡೆಸಲಾಗುತ್ತಿದೆ.


COMMERCIAL BREAK
SCROLL TO CONTINUE READING

ಲಾಕ್ ಡೌನ್ ಅವಧಿಯಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಆಪ್ ಗಳಾಗಿರುವ Zoom App, Google Duo ಇತ್ಯಾದಿಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಜನರು ತಮ್ಮ ಕಚೇರಿ ಕೆಲಸಕ್ಕಾಗಿ, ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸೆಸ್ ಗಾಗಿ ಇವುಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಇಂತಹುದರಲ್ಲಿ ಇದೀಗ ವಾಟ್ಸ್ ಆಪ್ ಕೂಡ ತನ್ನ ಗ್ರೂಪ್ ಕಾಲಿಂಗ್ ವೈಶಿಷ್ಟ್ಯದಲ್ಲಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲು ಹೊರಟಿದೆ.  ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ಅಪ್ಡೇಟ್ ಹಾಗೂ ವೈಶಿಷ್ಟ್ಯಗಳ ಮೇಲೆ ನಿಗಾ ಇರುವ WABetaInfo ಈ ಕುರಿತಾದ ವರದಿಗಳನ್ನು ಪುಷ್ಟೀಕರಿಸಿದೆ.


ಇದಕ್ಕೆ ಸಂಬಂಧಿಸಿದಂತೆ ವರದಿ ಪ್ರಕಟಿಸಿರುವ WABetaInfo, ಅಂಡ್ರಾಯಿಡ್ ಹಾಗೂ ಐಓಎಸ್ ಗಾಗಿ ಮುಂದಿನ ಕೆಲ ವಾರಗಳಲ್ಲಿ ಈ ವೈಶಿಷ್ಟ್ಯ ಲಭ್ಯವಾಗಲಿದೆ ಎಂದು ಹೇಳಿದೆ. ಆದರೆ, ಇದು ಎಷ್ಟು ಸದಸ್ಯರ ಮಿತಿಯನ್ನು ಒಳಗೊಂಡಿರಲಿದೆ ಎಂಬುದು ಇದುವರೆಗೂ ಸ್ಪಸ್ಥವಾಗಿಲ್ಲ. ಮೂಲಗಳ ಮಾಹಿತಿ ಪ್ರಕಾರ ಇದು 10-12 ಸದಸ್ಯರನ್ನು ಒಳಗೊಂಡಿರಲಿದೆ ಎನ್ನಲಾಗಿದೆ.