ನವದೆಹಲಿ: ವಿಶ್ವದ ಖ್ಯಾತ ಇನ್ಸ್ಟಂಟ್ ಮೆಸ್ಸೇಜಿಂಗ್ ಆಪ್ ವಾಟ್ಸ್ ಆಪ್ ನ ಒಂದು ವೈಶಿಷ್ಟ್ಯ ಇತ್ತೀಚಿಗೆ ಭಾರಿ ಚರ್ಚೆಯನ್ನೇ ಹುಟ್ಟುಹಾಕಿದೆ. ಇದಕ್ಕೆ ಕಾರಣ ಎಂದರೆ, ವಾಟ್ಸ್ ಆಪ್ ನ 'ಕ್ಲಿಕ್ ಟು ಚಾಟ್' ವೈಶಿಷ್ಟ್ಯ ಬಳಸುವವರ ಮೊಬೈಲ್ ಸಂಖ್ಯೆ ಗೂಗಲ್ ಸರ್ಚ್ ರಿಸಲ್ಟ್ ನಲ್ಲಿ ಕಾಣಿಸಿಕೊಳ್ಳುತ್ತಿದೆ. ಏಕೆಂದರೆ ಕ್ಲಿಕ್ ಟು ಚಾಟ್ ವೈಶಿಷ್ಟ್ಯವನ್ನು ಸಕ್ರೀಯಗೊಂಡಾಗ ಒಂದು ಲಿಂಕ್ ಸೃಷ್ಟಿಯಾಗುತ್ತದೆ. ಬಳಕೆದಾರರು ಈ ಲಿಂಕ್ ಮೇಲೆ ಕ್ಲಿಕ್ಕಿಸಿ ತನ್ನ ಕುಟುಂಬ ಸದಸ್ಯರು ಹಾಗೂ ಬಂಧು-ಮಿತ್ರರ ಜೊತೆಗೆ ಕನೆಕ್ಟ್ ಆಗಬಹುದಾಗಿದೆ. ಗೂಗಲ್ ಕ್ಲಿಕ್ ಟು ಚಾಟ್ ವೈಶಿಷ್ಟ್ಯದ ಮೆಟಾಡೇಟಾ ಮೂಲಕ ಫೋನ್ ನಂಬರ್ ಅನ್ನು ಸಂಗ್ರಹಿಸುತ್ತದೆ, ನಂತರ ಈ ನಂಬರ್ ಗೂಗಲ್ ಸರ್ಚ್ ಇಂಡೆಕ್ಸ್ ನಲ್ಲಿ ಕಾಣಿಸಿಕೊಳ್ಳಲಾರಂಭಿಸುತ್ತದೆ.


COMMERCIAL BREAK
SCROLL TO CONTINUE READING

ಈ ಕುರಿತು ನಡೆಸಲಾಗಿರುವ ಒಂದು ಸಂಶೋಧನೆ ಇದನ್ನು ಡೇಟಾ ಲೀಕ್ ಜೊತೆಗೆ ಜೋಡಿಸಿದೆ. ಅಷ್ಟೇ ಅಲ್ಲ ಸರಿ ಸುಮಾರು 3 ಲಕ್ಷ ವಾಟ್ಸ್ ಆಪ್ ಬಳಕೆದಾರರ ಮೊಬೈಲ್ ನಂಬರ್ ಸಾರ್ವಜನಿಕಗೊಳಿಸಲಾಗಿದೆ ಎಂದಿದೆ. ಆದರೆ, ಹೇಳಿದಷ್ಟು ಈ ವಿಷಯ ಗಂಭೀರವಾಗಿಲ್ಲ. ಏಕೆಂದರೆ, URL ಬಳಸಿ ಪಬ್ಲಿಕ್ ಚಾಟ್ ಆಪ್ಶನ್ ಆಯ್ಕೆ ಮಾಡಿದವರ ಮೊಬೈಲ್ ಸಂಖ್ಯೆ ಮಾತ್ರ ಗೂಗಲ್ ಇಂಡೆಕ್ಸ್ ನಲ್ಲಿ ಕಾಣಿಸಿಕೊಳ್ಳುತ್ತದೆ. ಇನ್ನೊಂದೆಡೆ, ಯಾವುದೇ ವ್ಯಕ್ತಿಗಳ ಹೆಸರು ಅಥವಾ ವೈಯಕ್ತಿಕ ಮಾಹಿತಿ ಗೂಗಲ್ ಸರ್ಚ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲ.


ಏನಿದು 'ಕ್ಲಿಕ್ ಟು ಚಾಟ್' ವೈಶಿಷ್ಟ್ಯ?
ವಾಟ್ಸ್ ಆಪ್ ನ 'ಕ್ಲಿಕ್ ಟು ಚಾಟ್' ವೈಶಿಷ್ಟ್ಯ ತನ್ನ ಬಳಕೆದಾರರಿಗೆ ಒಂದು URL ಲಿಂಕ್ ಸೃಷ್ಟಿಸಲು ಅನುಮತಿ ನೀಡುತ್ತದೆ. ಇದರ ಮೂಲಕ ಯಾವುದೇ ಓರ್ವ ವ್ಯಕ್ತಿ ಈ ಲಿಂಕ್ ಬಳಸಿ ಚಾಟ್ ಗೆ ಸೇರಬಹುದಾಗಿದೆ. ಆದರೆ, ಇದರಲ್ಲಿ ಚಾಟ್ ಮಾಡುವ ವ್ಯಕ್ತಿಯ ಹೆಸರು ಸೇವ್ ಮಾಡುವುದು ಅಗತ್ಯವಿಲ್ಲ. ಮೆಸೆಂಜರ್ ಆಪ್ ನಲ್ಲಿ ನೇರವಾಗಿ ಲಿಂಕ್ ಮೊಲಕ ಯಾವುದೇ ವ್ಯಕ್ತಿಯ ಜೊತೆಗೆ ಚಾಟಿಂಗ್ ಅಥವಾ ಕಾಲ್ ಮಾಡಬಹುದಾಗಿದೆ.


'ಕ್ಲಿಕ್ ಟು ಚಾಟ್' ಈ ವೈಶಿಷ್ಟ್ಯವನ್ನು ಹೆಚ್ಚಾಗಿ ವ್ಯಾಪಾರಿಗಳು ತಮ್ಮ ವ್ಯಾಪಾರಕ್ಕಾಗಿ ಬಳಸುತ್ತಾರೆ. ಯಾವುದೇ ವ್ಯಾಪಾರಿ ತಮ್ಮ ಗ್ರಾಹಕರಿಗೆ ಅವರ ನಂಗರ್ ಸೇವ್ ಮಾಡುವ ಮಾಡದೆಯೇ ತನ್ನೊಂದಿಗೆ ಕನೆಕ್ಟ್ ಆಗಲು ಆಪ್ಶನ್ ನೀಡಬಹುದಾಗಿದೆ. 


ಗೂಗಲ್ ಸರ್ಚ್ ಇಂಡೆಕ್ಸ್ ನಲ್ಲಿ ಬಳಕೆದಾರರ ಮೊಬೈಲ್ ನಂಬರ್ ಕಾಣಿಸಿಕೊಳ್ಳುತ್ತಿರುವ ವರದಿಯನ್ನು ಮೊಟ್ಟಮೊದಲ ಬಾರಿಗೆ ವಾಟ್ಸ್ ಆಪ್ ವೈಶಿಷ್ಟ್ಯಗಳನ್ನು ಟ್ರ್ಯಾಕ್ ಮಾಡುವ ವೆಬ್ ಸೈಟ್ WaBetaInfo ಫೆಬ್ರುವರಿಯಲ್ಲಿ ವರದಿ ಮಾಡಿತ್ತು. ಆ ಬಳಿಕ ಇದು ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.