ನವದೆಹಲಿ: ಈ ವರ್ಷದ ಅಂತ್ಯಕ್ಕೆ ವಾಟ್ಸಪ್ ನಲ್ಲಿ ಪೇಮೆಂಟ್ ಆಯ್ಕೆ ಬರಲಿದೆ ಎನ್ನಲಾಗಿದೆ. ಈಗಾಗಲೇ ಮೆಸೆಂಜರ್ ಸರ್ವಿಸ್ ಮೂಲಕ ಜಗತ್ತಿನಾದ್ಯಂತ ತನ್ನದೇ ಪ್ರಭಾವವನ್ನು ಹೊಂದಿರುವ ವಾಟ್ಸಪ್ ಈಗ ಡಿಜಿಟಲ್ ಪೇಮೆಂಟ್ ಗೆ ಹೆಚ್ಚಿನ ಒತ್ತನ್ನು ನೀಡಲಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಒಂದು ವರ್ಷದ ಪ್ರಾಯೋಗಿಕ ಯೋಜನೆ ನಂತರ ಈಗ ಅಧಿಕೃತವಾಗಿ ಈ ಯೋಜನೆಯನ್ನು ವಾಟ್ಸಪ್ ಜಾರಿಗೆ ತರಲಿದೆ ಎನ್ನಲಾಗಿದೆ.ಈ ವಿಷಯವನ್ನು ವಾಟ್ಸಪ್ ನ್ನ ಜಾಗತಿಕ ಮುಖ್ಯಸ್ಥ ವಿಲ್ ಕಾರ್ಟ್ ಹೇಳಿದ್ದಾರೆ. ಭಾರತದಲ್ಲಿನ ಅಗ್ಗದ ಡೇಟಾ ಆಫರ್ ನಿಂದಾಗಿ ಈಗ ವಾಟ್ಸಪ್ ಸಾಕಷ್ಟು ಜನಪ್ರಿಯತೆ ಪಡೆದಿದೆ. ಈ ಹಿನ್ನಲೆಯಲ್ಲಿ ಈಗ ಅದು ಪೇಮೆಂಟ್ ಸೇವೆಯನ್ನು  ಬಿಡುಗಡೆ ಮಾಡಲಿದೆ ಎನ್ನಲಾಗಿದೆ.


ಪೇಮೆಂಟ್ ಆಯ್ಕೆಯನ್ನು ಜಾರಿಗೊಳಿಸಲು ಭಾರತದಲ್ಲಿನ ನಿಯಮಗಳನ್ನು ಅನುಸರಿಸುವ ಹಿನ್ನಲೆಯಲ್ಲಿ ಅದಕ್ಕೆ ಬೇಕಾದ ಸೂಕ್ತ ದತ್ತಾಂಶಗಳ ಸಂಗ್ರಹಣೆಯಲ್ಲಿ ತೊಡಗಿಸಿಕೊಂಡಿದೆ. ವಾಟ್ಸಪ್ ಪೇಮೆಂಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಫೇಸ್ ಬುಕ್ ನ ಸಿಇಓ ಮಾರ್ಕ್ ಜುಕರ್ ಬರ್ಗ್ ಅವರು "ಇದು ಈ ಸಮಯದಲ್ಲಿ ಭಾರತದಲ್ಲಿ ನಿಯಂತ್ರಕ ಅನುಮೋದನೆ ಪ್ರಶ್ನೆಯಾಗಿದೆ ಎಂದು ಹೇಳಿದರು."ನಾವು ಹಲವಾರು ಇತರ ದೇಶಗಳಲ್ಲಿ ಭಾರತವನ್ನು ಮೀರಿ ಕೆಲಸ ಮಾಡುತ್ತಿದ್ದೇವೆ ಮತ್ತು ಮುಂದಿನ ದಿನಗಳಲ್ಲಿ ವಾಟ್ಸಾಪ್ ಬಳಸುವ ಹೆಚ್ಚಿನ ಶೇಕಡಾ ಜನರಿಗೆ ಇದು ಹೊರಹೊಮ್ಮಲಿದೆ ಎಂದು ಭಾವಿಸುತ್ತೇವೆ ಎಂದು ಅವರು ಹೇಳಿದರು.


ವಾಟ್ಸಾಪ್ ಈಗ ಭಾರತದಲ್ಲಿ ಸುಮಾರು 40 ಕೋಟಿ ಬಳಕೆದಾರರನ್ನು ಹೊಂದಿದೆ, ಇದು ಭಾರತದ 130 ಕೋಟಿ ಜನಸಂಖ್ಯೆಯ ಮೂರನೇ ಒಂದು ಭಾಗವನ್ನು ಇದು ಒಳಗೊಂಡಿದೆ ಎನ್ನಲಾಗಿದೆ.ವಾಟ್ಸಾಪ್ ಪಾವತಿ ವೈಶಿಷ್ಟ್ಯವು ಆಲ್ಫಾಬೆಟ್ ಇಂಕ್‌ನ ಗೂಗಲ್ ಪೇ, ಸಾಫ್ಟ್‌ಬ್ಯಾಂಕ್- ಮತ್ತು ಅಲಿಬಾಬಾ ಬೆಂಬಲಿತ ಪೇಟಿಎಂ ಮತ್ತು ವಾಲ್‌ಮಾರ್ಟ್‌ನ ಫೋನ್‌ಪೇ ಜೊತೆ ಸ್ಪರ್ಧೆ ಮಾಡಲಿದೆ.