ಬೆಂಗಳೂರು : ಟೀನಾ ದಾಬಿ ದೇಶದಲ್ಲಿ ಹೆಚ್ಚು ಪ್ರಸಿದ್ಧರಾಗಿರುವ ಐಎಎಸ್‌ಗಳಲ್ಲಿ ಒಬ್ಬರು. ಅವರು ತಮ್ಮ ಹೊಸ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರ ಹೊಸ ಲುಕ್‌ ನೋಡಿದ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಜೈಸಲ್ಮೇರ್‌ನ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಟೀನಾ ದಾಬಿ ಅವರು ಹೊಸ ಕೇಶ ವಿನ್ಯಾಸ ಮಾಡಿಸಿದ್ದಾರೆ. ಈ ಕುರಿತು ವಿಡಿಯೋ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಟೀನಾ ದಾಬಿ ಅವರು UPSC 2016 ರ ಬ್ಯಾಚ್ ಟಾಪರ್ ಆಗಿದ್ದಾರೆ. ವಿಭಿನ್ನ ವಿಷಯಗಳಿಗಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಉತ್ತಮ ಫಾಲೋವರ್ಸ್ ಹೊಂದಿರುವ ಐಎಎಸ್ ಅಧಿಕಾರಿಗಳಲ್ಲಿ ಟೀನಾ ಕೂಡ ಒಬ್ಬರು. 


ಇದನ್ನೂ ಓದಿ: ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮನ ; ಒಕ್ಕಲಿಗ, ವಾಲ್ಮೀಕಿ, ಕುರುಬ ಸಮುದಾಯಗಳ ಓಲೈಕೆ ಸಾಧ್ಯತೆ



ಟೀನಾ ದಾಬಿ ನವೆಂಬರ್ 9, 1993 ರಂದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಜನಿಸಿದರು. ಟೀನಾ ಅವರ ತಂದೆ ಜಸ್ವಂತ್ ದಾಬಿ ಅವರು ಟೆಲಿಕಾಂ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಅಂದರೆ ಬಿಎಸ್‌ಎನ್‌ಎಲ್‌ನಲ್ಲಿ ಜನರಲ್ ಮ್ಯಾನೇಜರ್ ಆಗಿದ್ದಾರೆ. ಆದರೆ, ಅವರ ತಾಯಿ ಹಿಮಾನಿ ದಾಬಿ ಕೂಡ ಭಾರತೀಯ ಇಂಜಿನಿಯರಿಂಗ್ ಸೇವೆಯ ಅಧಿಕಾರಿಯಾಗಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.