ಭಾರತಕ್ಕೆ ಸಂಕಷ್ಟದಲ್ಲಿ ಇದ್ದರೆ, ರಾಹುಲ್ ಗಾಂಧಿಗೆ ಖುಷಿಯಾಗುತ್ತದೆ: ರವಿಶಂಕರ್ ಪ್ರಸಾದ್
ದೇಶದಲ್ಲಿ ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ಕಾಂಗ್ರೆಸ್ ಎಂದಿಗೂ ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ವಿಷಾದನೀಯ ಎಂದು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ನವದೆಹಲಿ: ಭಾರತ ತೊಂದರೆಯಲ್ಲಿದ್ದಗಲೆಲ್ಲಾ ರಾಹುಲ್ ಗಾಂಧಿ ಖುಷಿಯಾಗಿರುತ್ತಾರೆ ಎಂದು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಪಾಕಿಸ್ತಾನ ಮೂಲದ ಜೈಶ್ ಇ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸುವುದಕ್ಕೆ ಚೀನಾ ಅಡ್ಡಿಪಡಿಸಿದ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ "ಪ್ರಧಾನಿ ಮೋದಿಗೆ ಕ್ಸಿ ಕಂಡರೆ ಭಯ. ಅದಕ್ಕಾಗಿ ಮಸೂದ್ ಅಜರ್ ಜಾಗತಿಕ ಭಯೋತ್ಪಾಡಕ್ ಎಂದು ಘೋಷಿಸಲು ಚೀನಾ ಅಡ್ಡಿಪಡಿಸಿದರೂ ಸಹ ಮೋದಿ ಬಾಯಿಂದ ಒಂದು ಮಾತೂ ಸಹ ಹೊರಡಲಿಲ್ಲ ಎಂದು ವ್ಯಂಗ್ಯವಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ರವಿಶಂಕರ್ ಪ್ರಸಾದ್, ವಿದೇಶಾಂಗ ನೀತಿ ಟ್ವಿಟ್ಟರ್ ನಲ್ಲಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂಬುದನ್ನು ರಾಹುಲ್ ಗಾಂಧಿ ಮೊದಲು ಅರಿಯಬೇಕು. ದೇಶದಲ್ಲಿ ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ಕಾಂಗ್ರೆಸ್ ಎಂದಿಗೂ ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ವಿಷಾದನೀಯ. "ರಾಹುಲ್ ಗಾಂಧಿಗೆ ಇತಿಹಾಸದ ಬಗ್ಗೆ ಯಾವುದೇ ಜ್ಞಾನವಿಲ್ಲ. ನೆಹರು ಜಿ ಅವರ ತಪ್ಪಿನಿಂದಾಗಿ ರಾಷ್ಟ್ರ ಈ ಸಂಕಷ್ಟ ಎದುರಿಸುತ್ತಿದೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು. ನೆಹರೂ ಅವರ ಕಾರಣದಿಂದಾಗಿ ಚೀನಾ ವಿಶ್ವ ಸಂಸ್ಥೆಯಲ್ಲಿ ಶಾಶ್ವತ ಸದಸ್ಯತ್ವ ಪಡೆಯಿತು" ಎಂದು ಕಿಡಿ ಕಾರಿದ್ದಾರೆ.
ಈ ವಿಚಾರವನ್ನು ಸಾಬೀತುಪಡಿಸಲು ಕಾಂಗ್ರೆಸ್ ನಾಯಕ ಶಶಿ ತರೂರ್ ಬರೆದಿರುವ ಪುಸ್ತಕವನ್ನು ಉಲ್ಲೇಖಿಸಿ ಹೇಳಿರುವ ರವಿಶಂಕರ್ ಪ್ರಸಾದ್, ಮಸೂದ್ ಅಜರ್ ಅವರಂತಹ ಕ್ರೂರ ಕೊಲೆಗಾರರಲ್ಲಿ ಕಾಂಗ್ರೆಸ್ನ ಧ್ವನಿ ಎರಡನೆಯದು. ರಾಹುಲ್ ಗಾಂಧಿಯವರ ಟ್ವೀಟ್ ನೋಡಿದರೇ ತಿಳಿಯುತ್ತದೆ ಅವರು ಈ ಬಗ್ಗೆ ಸಂತೋಷವಾಗಿದ್ದಾರೆ ಎಂದು. ಭಾರತ ಸಂಕಷ್ಟದಲ್ಲಿರುವಾಗ ರಾಹುಲ್ ಏಕೆ ಸಂತೋಷಗೊಂಡಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.