Covid-19: ಭಾರತದಲ್ಲಿ ಕರೋನಾ 2ನೇ ಅಲೆ ಯಾವಾಗ ಉತ್ತುಂಗಕ್ಕೇರಲಿದೆ? CEA ಕೆ.ವಿ.ಸುಬ್ರಮಣಿಯನ್ ಹೇಳಿದ್ದೇನು?
ಕರೋನಾವೈರಸ್‌ನ ಎರಡನೇ ಅಲೆಯು ಮೇ ತಿಂಗಳ ಮಧ್ಯದ ವೇಳೆಗೆ ಗರಿಷ್ಠ ಮಟ್ಟವನ್ನು ತಲುಪಬಹುದು ಎಂದು ಭಾರತದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಕೆ.ವಿ.ಸುಬ್ರಮಣಿಯನ್ ಹೇಳಿದ್ದಾರೆ.
ನವದೆಹಲಿ: ಭಾರತದಲ್ಲಿ ಕೊರೊನಾವೈರಸ್‌ನ ಎರಡನೇ ತರಂಗ ಭಯಾನಕವಾಗುತ್ತಿದೆ ಮತ್ತು ನಿರಂತರವಾಗಿ ದಾಖಲೆಯ ಮಟ್ಟದಲ್ಲಿ ಪ್ರಕರಣಗಳು ವರದಿಯಾಗುತ್ತಿವೆ. ಏತನ್ಮಧ್ಯೆ, ಕರೋನಾವೈರಸ್‌ನ ಎರಡನೇ ತರಂಗವು ಮೇ ಮಧ್ಯದ ವೇಳೆಗೆ ಗರಿಷ್ಠ ಮಟ್ಟವನ್ನು ತಲುಪಬಹುದು ಎಂದು ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಕೆ.ವಿ.ಸುಬ್ರಮಣಿಯನ್ ಹೇಳಿದ್ದಾರೆ.
ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರುವುದಿಲ್ಲ:
ದೇಶಾದ್ಯಂತ ಕರೋನಾ ಸೋಂಕು ಶರವೇಗದಲ್ಲಿ ಹರಡುತ್ತಿರುವುದರ ಮಧ್ಯೆ ಆಘಾತಕಾರಿ ಮಾಹಿತಿ ನೀಡಿರುವ ಕೆ.ವಿ.ಸುಬ್ರಮಣಿಯನ್ ಕೋವಿಡ್ -19 (Covid 19) ಸಾಂಕ್ರಾಮಿಕ ರೋಗದ ಪ್ರಸ್ತುತ ಸೋಂಕು ಮುಂದಿನ ತಿಂಗಳ ಮಧ್ಯದಲ್ಲಿ ಉತ್ತುಂಗಕ್ಕೇರಬಹುದು ಎಂದು ಹೇಳಿದ್ದಾರೆ. ಆದರೆ ಆರ್ಥಿಕತೆಯ ಮೇಲೆ ಅದರ ಪ್ರಭಾವ ಅಷ್ಟೊಂದು ವ್ಯಾಪಕವಾಗಿರುವುದಿಲ್ಲ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ - Oral Symptoms of Covid: ನಿಮ್ಮ ಬಾಯಿಯಲ್ಲಿ ಕಾಣುವ ಈ ಲಕ್ಷಣ ಕೋವಿಡ್ -19 ಸಂಕೇತವಾಗಿರಬಹುದು, ತಕ್ಷಣವೇ ಟೆಸ್ಟ್ ಮಾಡಿ!
ಮೌಲ್ಯಮಾಪನವು ಐಸಿಎಂಆರ್ ಸಂಶೋಧನೆಯನ್ನು ಆಧರಿಸಿದೆ:
ಕರೋನಾ ಸೋಂಕಿನ ಉತ್ತುಂಗವನ್ನು ತಲುಪುವ ಅವರ ಮೌಲ್ಯಮಾಪನವು ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಸೇರಿದಂತೆ ವಿವಿಧ ಸಂಸ್ಥೆಗಳ ಸಂಶೋಧನೆಯನ್ನು ಆಧರಿಸಿದೆ ಎಂದು ಸುಬ್ರಮಣ್ಯಂ ಹೇಳಿದರು.
ಗ್ರೇಟ್ ಲೇಕ್ಸ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆನ್‌ಲೈನ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೆ.ವಿ.ಸುಬ್ರಮಣಿಯನ್ ಅವರು, ನಾನು ಸಾಂಕ್ರಾಮಿಕ ರೋಗಗಳ ಬಗ್ಗೆ ಪರಿಣತನಲ್ಲ, ಆದ್ದರಿಂದ ಅವರ ಮೌಲ್ಯಮಾಪನವನ್ನು ಅದೇ ಸಂದರ್ಭದಲ್ಲಿ ಪ್ರತಿ-ಚಿಂತನೆಯೊಂದಿಗೆ ತೆಗೆದುಕೊಳ್ಳಬೇಕು ಎಂದರು.
ಇದನ್ನೂ ಓದಿ - Corona Second Wave: ಏನು ತಿನ್ನಬೇಕು, ಏನನ್ನು ತಿನ್ನಬಾರದು? ಇಲ್ಲಿದೆ WHO ಸಲಹೆ
ಆರ್ಥಿಕತೆಗಾಗಿ ಸರ್ಕಾರ ಅನೇಕ ಸುಧಾರಣಾವಾದಿ ಕ್ರಮಗಳನ್ನು ತೆಗೆದುಕೊಂಡಿದೆ :
ಆರ್ಥಿಕತೆಯ ಮೇಲೆ ಪ್ರಸ್ತುತ ಸ್ಥಿತ್ಯಂತರದ ಪ್ರಭಾವದ ಬಗ್ಗೆ ಮಾಹಿತಿ ನೀಡಿದ ಕೆ.ವಿ.ಸುಬ್ರಮಣಿಯನ್, ಇದು ಸಮಗ್ರವಾಗಿರಬಾರದು. ಏಕೆಂದರೆ ಉತ್ಪಾದನಾ ನಷ್ಟವನ್ನು ತಡೆಯಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ, ವಿಶೇಷವಾಗಿ ಎಂಎಸ್‌ಎಂಇ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು)ಗಳಿಗಾಗಿ ವಿಶೇಷ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು. ಬಿಕ್ಕಟ್ಟಿನ ಈ ಸಮಯವನ್ನು ಅವಕಾಶವನ್ನಾಗಿ ಬಳಸಿಕೊಳ್ಳಲು ಭಾರತವು ಮುಂದಾಗಿದೆ ಮತ್ತು ಈ ಸಮಯದಲ್ಲಿ, ಪೂರೈಕೆಯ ಅಡೆತಡೆಗಳನ್ನು ತೆಗೆದುಹಾಕಲು ಅನೇಕ ಸುಧಾರಣಾವಾದಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.