ನವದೆಹಲಿ: ಕೊರೊನಾ ವೈರಸ್ ಬಿಕ್ಕಟ್ಟು ಮುಂದುವರೆಯುತ್ತಲೇ ಇದೆ. ಈ ಮಹಾಮಾರಿಯ ಕಾರಣ ಇಡೀ ವಿಶ್ವ ಆರತಕ ನಷ್ಟವನ್ನು ಅನುಭವಿಸುತ್ತಿದೆ. ಅಮೇರಿಕಾ-ಚೀನಾ- ರಷ್ಯಾಗಳಂತಹ ವಿಶ್ವದ ಮಹಾಶಕ್ತಿಗಳೂ ಕೂಡ ಈ ಮಾರಕ ರೋಗಕ್ಕೆ ತತ್ತರಿಸಿ ಹೋಗಿವೆ. ಸದ್ಯ ಈ ಬಿಕ್ಕಟ್ಟು ಯಾವಾಗ ಕೊನೆಗೊಳ್ಳಲಿದೆ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮನೆಮಾಡಿದೆ. ಅಷ್ಟೇ ಅಲ್ಲ ಈ ಮಹಾಮಾರಿಗೆ ಸಂಬಂಧಿಸಿದ ಹಲವು ಪ್ರಶ್ನೆಗಳು ಇದೀಗ ಜನರು ಮನದಲ್ಲಿ ಮೂಡಿವೆ. ಇನ್ನೊಂದೆಡೆ ಇದೀಗ ವಿಜ್ಞಾನಿಗಳು ವಿಶ್ವದ ಹಲವು ದೇಶಗಳಲ್ಲಿ ಕೊರೊನಾ ವೈರಸ್ ಎಷ್ಟು ಕಾಲ ಬದುಕಲಿದೆ ಎಂಬುದನ್ನು ಅಂದಾಜಿಸಿದ್ದಾರೆ.


COMMERCIAL BREAK
SCROLL TO CONTINUE READING

ಸಿಂಗಾಪುರ್ ವಿವಿ ವ್ಯಕ್ತಪಡಿಸಿದೆ ಈ ಅಂದಾಜು
ಸಿಂಗಾಪುರ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ಇನ್ನೋವೇಶನ್ ಲ್ಯಾಬ್ ಪ್ರಕಾರ, ಯುಕೆಯಲ್ಲಿ COVID-19 ರ ಬಿಕ್ಕಟ್ಟು ಸೆಪ್ಟೆಂಬರ್ 30 ರವರೆಗೆ ಇರಲಿದೆ ಎಂದು ಹೇಳಿದೆ. ಇದೆ ವೇಳೆ ಇದು ನವೆಂಬರ್ ವರೆಗೆ ಅಮೇರಿಕಾದಲ್ಲಿ ಉಳಿಯಲಿದೆ ಎಂದಿದೆ. ಭಾರತದ ಎರಡು ವಿಶ್ವವಿದ್ಯಾಲಯಗಳು ಮತ್ತೊಂದು ಅಧ್ಯಯನದಲ್ಲಿ ಉತ್ತರ ಭಾರತದಲ್ಲಿ ಇದರ ಪರಿಣಾಮವು ಆಗಸ್ಟ್ ವೇಳೆಗೆ ಕೊನೆಗೊಳ್ಳುತ್ತದೆ ಎಂದು ಹೇಳಿವೆ.


ಎಲ್ಲಿ? ಯಾವಾಗ ಈ ಮಹಾಮಾರಿ ಅಂತ್ಯವಾಗಲಿದೆ
ಸಿಂಗಾಪುರ್ ಟೆಕ್ನಾಲಾಜಿ ವಿಶ್ವವಿದ್ಯಾಲಯದ ಪ್ರಕಾರ ಅಮೆರಿಕಾದಲ್ಲಿ ಈ ಮಹಾಮಾರಿ ಅಂತ್ಯವಾಗಲು ನವೆಂಬರ್ 11ರವರೆಗೆ ಕಾಲಾವಕಾಶ ಬೇಕಾಗಲಿದೆ. ಇನ್ನೊಂದೆಡೆ ಇಟಲಿಯಲ್ಲಿ ಆಗಸ್ಟ್ 12ರವರೆಗೆ ಇದು ಅಂತ್ಯವಾಗಲಿದೆ. ಸಿಂಗಾಪುರ್ ಗೆ ಜುಲೈ 19ಕ್ಕೆ ಇದರಿಂದ ಮುಕ್ತಿ ಸಿಗಲಿದೆ. ಸದ್ಯ ಇರುವ ಪರಿಸ್ಥಿತಿ, ಇನ್ಫೆಕ್ಷನ್ ದರ ಹಾಗೂ ಸಾವು-ನೋವುಗಳ ಅಂಕಿ ಅಂಶಗಳನ್ನು ಆಧಾರಿಸಿ ಸಿಂಗಾಪುರ್ ತಾಂತ್ರಿಕ ವಿವಿ ಈ ದಿನಾಂಕಗಳನ್ನು ಕ್ಯಾಲ್ಕ್ಯೂಲೆಟ್ ಮಾಡಿದೆ. ಅಷ್ಟೇ ಅಲ್ಲ ಸಮಯ ಬದಲಾವಣೆ ಹಾಗೂ ಮಾನದಂಡಗಳ ಬದಲಾವಣೆಗಳಿಂದಲೂ ಕೂಡ ಅಂಕಿ-ಅಂಶಗಳಲ್ಲಿ ಸ್ವಲ್ಪ ಅಂತರ ಬರುವ ಸಾಧ್ಯತೆ ಇದೆ ಎಂದೂ ಕೂಡ ವಿವಿ ಹೇಳಿದೆ. ಕೆಲ ದಿನಗಳ ಹಿಂದೆ ತಜ್ಞರು ಜೂನ್ ವರೆಗೆ ಬ್ರಿಟನ್ ನಲ್ಲಿ ಕೊರೊನಾ ಕಾರಣ ಸಂಭವಿಸುತ್ತಿರುವ ಸಾವುಗಳು ಜೂನ್ ವರೆಗೆ ನಿಲ್ಲಲಿವೆ ಎಂದು ಹೇಳಿರುವ ಹಿನ್ನೆಲೆ ಈ ಅಂಕಿ ಅಂಶಗಳು ಭಾರಿ ಮಹತ್ವಪಡೆದುಕೊಂಡಿವೆ.


ಭಾರತದಲ್ಲಿ ಯಾವಾಗ ಅಂತ್ಯವಾಗಲಿದೆ ಈ ಮಹಾಮಾರಿ
ಕರೋನಾ ವೈರಸ್ ನಿರ್ಮೂಲನೆ ಕುರಿತು ಪಂಜಾಬ್ ಸೆಂಟ್ರಲ್ ಯೂನಿವರ್ಸಿಟಿ (ಪಿಸಿಯು) ಮತ್ತು ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯ (ಎಚ್‌ಪಿಯು) ಸಹ ಸಂಶೋಧನೆ ನಡೆಸಿವೆ. ಈ ಸಂಶೋಧನೆ ಒಂದು ವೇಳೆ ನಿಜ ಎಂದು ಸಾಬೀತಾದರೆ, ಕೊರೋನಾದ ನಿರ್ಮೂಲನೆ ದೂರವಿರುವುದಿಲ್ಲ. ಈ ಜಂಟಿ ಅಧ್ಯಯನವು ಜುಲೈ ಕೊನೆಯಲ್ಲಿ ಅಥವಾ ಆಗಸ್ಟ್‌ನಲ್ಲಿ ಉತ್ತರ ಭಾರತದಲ್ಲಿ ಕರೋನಾ ಕೊನೆಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದೆ. ಈ ಅಧ್ಯಯನಕ್ಕಾಗಿ ಸಸೆಪ್ಟಬಲ್ ಇನ್ಫೆಕ್ಟೆಡ್ ರಿಕವರ್ಡ್ (ಎಸ್‌ಐಆರ್) ಮಾದರಿಯನ್ನು ಬಳಸಲಾಗಿದೆ.


ಜಂಟಿ ಅಧ್ಯಯನವು ಎಸ್‌ಐಆರ್ ಮಾದರಿಯು ಅತಿ ಸೂಕ್ಷ್ಮ ಪ್ರಕರಣಗಳು, ಸೋಂಕಿತ ಪ್ರಕರಣಗಳು ಮತ್ತು ಗುಣಮುಖರಾದ ರೋಗಿಗಳ ದತ್ತಾಂಶಗಳ ಅಧ್ಯಯನ ನಡೆಸಿದೆ. ಇದರ ಪ್ರಕಾರ, ಜೂನ್ ಎರಡನೇ ವಾರದಲ್ಲಿ, ಸೋಂಕಿತರ ಸಂಖ್ಯೆ ಗರಿಷ್ಠ ಮಟ್ಟದಲ್ಲಿ ಇಳಿಯಲು ಆರಂಭಿಸಲಿವೆ ಎಂದಿದೆ. ಮುಂಬರುವ ದಿನಗಳಲ್ಲಿ ಈ ಡೇಟಾದ ಮಾದರಿಯು ಕೂಡ ಬದಲಾಗಬಹುದು ಎಂದು ಅಧ್ಯಯನ ಹೇಳಿದೆ.


ಭಾರತದಲ್ಲಿ ಎಲ್ಲಿ ಮತ್ತು ಯಾವಾಗ ಅಂತ್ಯವಾಗಲಿದೆ ಈ ಮಹಾಮಾರಿ


  • ಪಂಜಾಬ್ ಸೆಂಟ್ರಲ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪ್ರೊಫೆಸರ್ ಅಶೋಕ್ ಕುಮಾರ್ ಅವರ ಹೇಳುವ ಪ್ರಕಾರ, ಭಾರತದಲ್ಲಿ ಇದುವರೆಗೆ ಪ್ರಕರಣಗಳು ಹೆಚ್ಚುತ್ತಿವೆ. ಆದರೂ ಕೂಡ ಅಕ್ಟೋಬರ್ ಅಂತ್ಯದ ವರೆಗೆ ದೇಶದಲ್ಲಿ ಕರೋನಾ ಪ್ರಭಾವ ಕೊನೆಗೊಳ್ಳುವ ಸಾಧ್ಯತೆಯಿದೆ.

  • ಜೂನ್ 10 ರ ಹೊತ್ತಿಗೆ, ಹರಿಯಾಣದಲ್ಲಿ ಕರೋನಾದ ಪ್ರಭಾವವು ಕೊನೆಗೊಳ್ಳುತ್ತದೆ.

  • ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ, ಆಗಸ್ಟ್ ಎರಡನೇ ವಾರದಲ್ಲಿ ಕರೋನಾ ಕೊನೆಗೊಳ್ಳುವ ಸಾಧ್ಯತೆಯಿದೆ.

  • ಉತ್ತರಾಖಂಡದಲ್ಲಿ ಜೂನ್ ಮೊದಲ ವಾರದಲ್ಲಿ ಕರೋನಾ ಕೊನೆಗೊಳ್ಳುವ ನಿರೀಕ್ಷೆಯಿದೆ.

  • ಕರೋನಾ ಹಿಮಾಚಲ ಪ್ರದೇಶದಲ್ಲಿ ನಿವಾರಣೆಗೆ ಜೂನ್ ಅಂತ್ಯದವರೆಗೆ ಕಾಲಾವಕಾಶ ತೆಗೆದುಕೊಳ್ಳಬಹುದು.

  • ಪ್ರಸ್ತುತ ಕೇರಳದಲ್ಲಿ ಕರೋನಾ ಅಂತಿಮ ಹಂತದಲ್ಲಿದೆ. ಕರೋನಾ ಜೂನ್ ಮೊದಲ ವಾರದಲ್ಲಿ ಇಲ್ಲಿ ಕೊನೆಗೊಳ್ಳುವ ನಿರೀಕ್ಷೆಯಿದೆ.

  • ಅಕ್ಟೋಬರ್ ಎರಡನೇ ವಾರದಲ್ಲಿ ಕರೋನಾ ದೆಹಲಿಯಲ್ಲಿ ಕೊನೆಗೊಳ್ಳಲಿದೆ.

  • ಸೆಪ್ಟೆಂಬರ್ ಎರಡನೇ ವಾರದಲ್ಲಿ ಗುಜರಾತ್‌ನಲ್ಲಿ ಈ ಸಾಂಕ್ರಾಮಿಕ ರೋಗ ಅಂತ್ಯಗೊಳ್ಳಲಿದೆ.

  • ಜಮ್ಮು ಮತ್ತು ಕಾಶ್ಮೀರದಲ್ಲಿ, ಆಗಸ್ಟ್ ಎರಡನೇ ವಾರದ ವೇಳೆಗೆ ಇದು ಪ್ರಭಾವಿತಗೊಳಿಸಬಹುದು.

  • ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಸಾಕಷ್ಟು ಪ್ರಕರಣಗಳಿವೆ. ಈ ಎರಡೂ ರಾಜ್ಯಗಳಲ್ಲಿ,ಇದರ ಪ್ರಭಾವ ಸೆಪ್ಟೆಂಬರ್ ಎರಡನೇ ವಾರದವರೆಗೆ ಇರಲಿದೆ.

  • ಪಶ್ಚಿಮ ಬಂಗಾಳ ಮತ್ತು ಒಡಿಶಾ ನವೆಂಬರ್ ಅಥವಾ ಡಿಸೆಂಬರ್ ಮೊದಲ ವಾರದವರೆಗೆ ಇದರ ಪ್ರಭಾವ ಇರಲಿದೆ.