ಕಪ್ಪುಹಣ ಎಲ್ಲಿಗೆ ಹೋಯಿತು?- ಮೋದಿ ಸರ್ಕಾರಕ್ಕೆ ಮಮತಾ ಪ್ರಶ್ನೆ
ಮೋದಿ ಸರ್ಕಾರದ ನೋಟು ನಿಷೇಧಿಕರಣವನ್ನು ಮತ್ತೆ ಪ್ರಶ್ನಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಕಪ್ಪು ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ್ದಾರೆ.
ಕೊಲ್ಕತ್ತಾ: ಮೋದಿ ಸರ್ಕಾರದ ನೋಟು ನಿಷೇಧಿಕರಣವನ್ನು ಮತ್ತೆ ಪ್ರಶ್ನಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಕಪ್ಪು ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ್ದಾರೆ.
ಆರ್ ಬಿ ಐ 99.3% ರಷ್ಟು ನಿಷೇಧಿತ ನೋಟುಗಳನ್ನು ವಾಪಾಸ್ ಪಡೆದಿರು ವರದಿಯನ್ನು ಪ್ರಕಟಿಸಿದ ನಂತರ ತಮ್ಮ ಫೆಸ್ ಬುಕ್ ನಲ್ಲಿ ಪ್ರತಿಕ್ರಿಯಿಸಿರುವ ಮಮತಾ ನೋಟು ನಿಷೇಧಿಕರಣ ಯೋಜನೆಯನ್ನು ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸಲು ಜಾರಿಗೆ ತರಲಾಗಿದೆಯೇ ಎಂದು ಅವರು ಪರ್ಶ್ನಿಸಿದ್ದಾರೆ.
ಈ ಕುರಿತಾಗಿ ಮೋದಿ ಸರ್ಕಾರ ಮೋದಿ ಎರಡು ಪ್ರಶ್ನೆಗಳನ್ನು ಇಟ್ಟಿರುವ ಮಮತಾ ಬ್ಯಾನರ್ಜೀ" ನನ್ನ ಮೊದಲ ಪ್ರಶ್ನೆ ಕಪ್ಪು ಹಣ ಎಲ್ಲಿಗೆ ಹೋಯಿತು.ಎರಡನೇದಾಗಿ ಈ ಯೋಜನೆಯನ್ನು ಕಪ್ಪು ಹಣವನ್ನು ಹೊಂದಿರುವ ಕೆಲವು ವ್ಯಕ್ತಿಗಳ ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸಲು ಜಾರಿ ಗೊಳಿಸಲಾಗಿದೆಯೇ ? ಎಂತಹ ದುರಂತ ಮತ್ತು ಅಸಹ್ಯ " ಎಂದು ಅವರು ಬರೆದುಕೊಂಡಿದ್ದಾರೆ.
ಇಂದು ರಿಸರ್ವ್ ಬ್ಯಾಂಕ್ ತನ್ನ 2017-18ರ ವಾರ್ಷಿಕ ವರದಿ ಬಿಡುಗಡೆಗೊಳಿಸಿ ಶೇ.99.3 ರಷ್ಟು ನಿಷೇಧಿತ ನೋಟುಗಳು ವಾಪಸ್ ಬಂದಿದೆ ಎಂದು ತಿಳಿಸಿದೆ.ಈ ಹಿನ್ನಲೆಯಲ್ಲಿ ಮಮತಾ ಬ್ಯಾನರ್ಜೀ ಮೋದಿ ಸರ್ಕಾರಕ್ಕೆ ಚಾಟಿ ಬಿಸಿದ್ದಾರೆ.