ನವದೆಹಲಿ: ಚುನಾವಣಾ ಆಯೋಗ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಪಕ್ಷಗಳು ಎವಿಎಂಗಳಲ್ಲಿ ಸಂಭವಿಸುತ್ತಿರುವ ಲೋಪಗಳ ವಿಚಾರವಾಗಿ ಮತ್ತೆ ಪ್ರಶ್ನೆ ಎತ್ತಿವೆ.


COMMERCIAL BREAK
SCROLL TO CONTINUE READING

ಅಲ್ಲದೆ ಬಹುತೇಕ ಚುನಾವಣೆಗಳಲ್ಲಿ ಮತದಾರನ ಮತ ಕೇವಲ ಒಂದೇ ಪಕ್ಷಕ್ಕೆ ಚಲಾವಣೆ ಆಗುವ ಲೋಪದ ಕುರಿತಾಗಿ ಪ್ರಶ್ನೆಯನ್ನು ಎತ್ತಿವೆ ಅಲ್ಲದೆ ಮತಯಂತ್ರಗಳನ್ನು ರಿಪೇರಿ ಮಾಡುವವರ ಹೆಸರು ಮತ್ತು ವಿಳಾಸವನ್ನು ಕೇಳಿವೆ.ಚುನಾವಣಾ ಆಯೋಗ ಕರೆದಿದ್ದ ಸರ್ವ ಪಕ್ಷಗಳ ಸಭೆಯಲ್ಲಿ ಆಡಳಿತ ಪಕ್ಷ ಬಿಜೆಪಿ,ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್,ಬಿಎಸ್ಪಿ,ಸಮಾಜವಾದಿ ಪಾರ್ಟಿ,ಸಿಪಿಐ,ಸಿಪಿಎಂ,ಮತ್ತು ಶರದ್ ಪವಾರ್ ಅವರ ಎನ್ಸಿಪಿ ಮತ್ತು ಇತರ 51 ರಾಜ್ಯ ಪಕ್ಷಗಳು ಹಾಜರಿದ್ದವು.ಚುನಾವಣಾ ವ್ಯವಸ್ಥೆಯಲ್ಲಿ ಕೆಲವು ಸುಧಾರಣೆಯನ್ನು ತರುವ ನಿಟ್ಟಿನಲ್ಲಿ ಎಲ್ಲ ಪಕ್ಷಗಳ ಅಭಿಪ್ರಾಯವನ್ನು ಸಂಗ್ರಹಿಸುವ ಸಲುವಾಗಿ ಆಯೋಗ ಸಭೆಯನ್ನು ಆಯೋಜಿಸಿತ್ತು.


ಕಳೆದ ವರ್ಷ ಉತ್ತರ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ ನಂತರ  ಮಾಯಾವತಿ ಹಾಗೂ ಆಮ್ ಆದ್ಮಿ ಪಕ್ಷಗಳು ಮತಯಂತ್ರಗಳನ್ನು ವಿರೂಪಗೊಳಿಸುತ್ತಿರುವುದರ ಬಗ್ಗೆ ಆರೋಪಿಸಿದ್ದವು.ಈ ಆರೋಪದ ನಂತರ ಹಲವು ಘಟನೆಗಳು ವಿಪಕ್ಷಗಳ ಆರೋಪಕ್ಕೆ ಸಾಕ್ಷಿಯನ್ನುವಂತೆ ನಡೆದಿದ್ದವು ಆದರೆ ಚುನಾವಣಾ ಆಯೋಗ ವಿಪಕ್ಷಗಳ ಆರೋಪವನ್ನು ಅಲ್ಲಗಳೆದು ಎವಿಎಂ ಗಳನ್ನು ಹ್ಯಾಕ್ ಮಾಡುವ ಸವಾಲನ್ನು ಹಾಕಿತ್ತು. 


ಚುನಾವಣಾ ಆಯೋಗದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ  ಕಾಂಗ್ರೆಸ್ ನಾಯಕ  ಮುಕುಲ್ ವಾಸ್ನಿಕ್ "ಮತಯಂತ್ರಗಳು ಜನರ ಆಶಯವನ್ನು  ಪ್ರತಿಧ್ವನಿಸುವುದಿಲ್ಲ ,ಎವಿಎಂಗಳು ವಿರೂಪಗೊಳಿಸಿ ಒಂದೇ ರಾಜಕೀಯ ಪಕ್ಷಕ್ಕೆ ಮತ ಚಲಾವಣೆಯಾಗಿರುವ ಘಟನೆಗಳು ಹಲವಾರು  ಬಾರಿ ನಡೆದಿವೆ.ಆದ್ದರಿಂದ ನಮಗೆ ಎವಿಎಂಗಳನ್ನು ಯಾರು ರಿಪೇರಿ ಮಾಡುತ್ತಾರೆ ಹಳೆಯ ಎಷ್ಟು ಎವಿಎಂಗಳನ್ನು ಬಳಸಲಾಗಿದೆ ಎನ್ನುವುದನ್ನು ತಿಳಿಸಬೇಕು ಅಲ್ಲದೆ ನಮಗೆ ವಿವಿಪ್ಯಾಟ್ ಮತ್ತು ಮತಯಂತ್ರಗಳನ್ನು ಚೆಕ್ ಮಾಡಬೇಕೆಂದು ವಾಸ್ನಿಕ್  ತಿಳಿಸಿದರು .


ಇನ್ನು ತೃಣಮೂಲ ಕಾಂಗ್ರೆಸ್ ಪಕ್ಷದ ಕಲ್ಯಾಣ ಮುಖರ್ಜೀ "ನಮಗೆ ಇವಿಎಮ್ ಗಳಲ್ಲಿ ನಂಬಿಕೆ ಇಲ್ಲ ಆದ್ದರಿಂದ ಮರಳಿ ಬ್ಯಾಲೆಟ್ ಬಾಕ್ಸ್ ಗೆ ಮರಳಬೇಕೆಂದು ಆಗ್ರಹಿಸಿದರು.ಇದೇ ವೇಳೆ ಮಾಜಿ ಚುನಾವಣಾ ಮುಖ್ಯಸ್ಥ ಎಸ್.ವೈ.ಕುರೇಶಿ ಮಾತನಾಡಿ" ಚುನಾವಣಾ ಆಯೋಗವು ಶೇಕಡಾ 5 ರಷ್ಟು ಮತಗಳನ್ನು  ಇವಿಎಮ್  ಮತ್ತು  ಪೇಪರ್ ಸ್ಲಿಪ್   ಪ್ರಯೋಗದ ಮೂಲಕ ಪರೀಕ್ಷೆಗೆ ಒಳಪಡಿಸಬೇಕಂದು ಸಲಹೆ ನೀಡಿದರು .