ಬಿಜೆಪಿಗೆ 300 ಸೀಟು ಚೋರ್ ಬಜಾರ್ ಅಥವಾ ಕರೋಲ್ ಭಾಗ್ನಲ್ಲಿ ಸಿಗುತ್ತವೆಯೇ?- ಶತ್ರುಘ್ನ ಸಿನ್ಹಾ
ಕಾಂಗ್ರೆಸ್ ಪಕ್ಷದ ಪಟ್ನಾ ಸಾಹಿಬ್ ಅಭ್ಯರ್ಥಿ ಶತ್ರುಘ್ನ ಸಿನ್ಹಾ ಮತ್ತು ಲಕ್ನೋ ಲೋಕಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿರುವ ಪತ್ನಿ ಪೂನಮ್ ಸಿನ್ಹಾ ಪುತ್ರರಾದ ಲವ್ ಮತ್ತು ಕುಶ್ ಅವರು ಕಡಮ್ವಾನ್ನಲ್ಲಿರುವ ಸೇಂಟ್ ಸೆವೆರಿನ್ಸ್ ಶಾಲೆಯಲ್ಲಿ ಮತ ಚಲಾಯಿಸಿದ್ದಾರೆ.
ನವದೆಹಲಿ: ಕಾಂಗ್ರೆಸ್ ಪಕ್ಷದ ಪಟ್ನಾ ಸಾಹಿಬ್ ಅಭ್ಯರ್ಥಿ ಶತ್ರುಘ್ನ ಸಿನ್ಹಾ ಮತ್ತು ಲಕ್ನೋ ಲೋಕಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿರುವ ಪತ್ನಿ ಪೂನಮ್ ಸಿನ್ಹಾ ಪುತ್ರರಾದ ಲವ್ ಮತ್ತು ಕುಶ್ ಅವರು ಕಡಮ್ವಾನ್ನಲ್ಲಿರುವ ಸೇಂಟ್ ಸೆವೆರಿನ್ಸ್ ಶಾಲೆಯಲ್ಲಿ ಮತ ಚಲಾಯಿಸಿದ್ದಾರೆ.
ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶತ್ರುಘ್ನ ಸಿನ್ಹಾ "ಬಿಜೆಪಿಗೆ 300 ಸ್ಥಾನಗಳು ಎಲ್ಲಿಂದ ಬರುತ್ತವೆ? ಅವರು ಅದನ್ನು ಚೋರ್ ಬಜಾರ್ ಅಥವಾ ಕರೋಲ್ ಬಾಗ್ ನಿಂದ ಖರೀದಿಸುತ್ತಾರೆಯೇ?" ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಇತ್ತಿಚಿಗೆ ಚುನಾವಣಾ ಆಯೋಗಕ್ಕೆ ಲೋಕಸಭಾ ಚುನಾವಣಾ ಅವಧಿಯನ್ನು ಕಡಿಮೆ ಮಾಡಬೇಕು ಎನ್ನುವ ಸಿಎಂ ನಿತೀಶ್ ಕುಮಾರ್ ಸಲಹೆಗೆ ಸಿನ್ಹಾ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.
ಏಳನೇ ಹಾಗೂ ಅಂತಿಮ ಹಂತದ ಚುನಾವಣೆ ಇಂದು ಮುಕ್ತಾಯಗೊಳ್ಳಲಿದೆ. 59 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. 918 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಕೊನೆಯ ಹಂತದಲ್ಲಿ 10.17 ಕೋಟಿ ಮತದಾರರು ತಮ್ಮ ಮತ ಚಲಾಯಿಸಲು ಅರ್ಹರಾಗಿದ್ದು, ಮತದಾನಕ್ಕಾಗಿ ಚುನಾವಣಾ ಆಯೋಗವು ,1.12 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಿದೆ.