‘ಮಸೀದಿಯಲ್ಲಿ ಶವ ಸಿಕ್ಕರೆ ನಿಮ್ಮದು, ಶಿವಲಿಂಗ ಸಿಕ್ಕರೆ ನಮ್ಮದು’
ಭಾರತದ ಯಾವುದೇ ಮಸೀದಿಗಳಲ್ಲಿ ಉತ್ಖನನ ಕಾರ್ಯ ನಡೆಸಿ ನೋಡಿದರೂ ಅಲ್ಲಿ ಶಿವಲಿಂಗ ಪತ್ತೆಯಾಗುತ್ತಿವೆ ಎಂದು ತೆಲಂಗಾಣದ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ ಹೇಳಿದ್ದಾರೆ.
ಹೈದರಾಬಾದ್: ದೇಶದ ಯಾವುದೇ ಮಸೀದಿಯಲ್ಲಿ ಉತ್ಖನನ ನಡೆದರೂ ಅಲ್ಲಿ ಶಿವಲಿಂಗ ಸಿಗುತ್ತಿದೆ. ಮಸೀದಿಯಲ್ಲಿ ಶವ ಸಿಕ್ಕರೆ ಅದು ನಿಮ್ಮದು, ಶಿವಲಿಂಗ ಸಿಕ್ಕರೆ ಅದು ನಮ್ಮದು ಎಂದು ತೆಲಂಗಾಣದ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ ಹೇಳಿದ್ದಾರೆಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ.
ಭಾರತದ ಯಾವುದೇ ಮಸೀದಿಗಳಲ್ಲಿ ಉತ್ಖನನ ಕಾರ್ಯ ನಡೆಸಿ ನೋಡಿದರೂ ಅಲ್ಲಿ ಶಿವಲಿಂಗ ಪತ್ತೆಯಾಗುತ್ತಿವೆ. ನಾವು ತೆಲಂಗಾಣದ ಪ್ರತಿಯೊಂದು ಮಸೀದಿಯಲ್ಲಿಯೂ ಉತ್ಖನನ ಕಾರ್ಯ ನಡೆಸುತ್ತೇವೆ ಎಂದು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರಿಗೆ ಬಂಡಿ ಸಂಜಯ್ ಕುಮಾರ್ ಸವಾಲು ಹಾಕಿದ್ದಾರೆ.
ಇದನ್ನೂ ಓದಿ: Shocking News: ನಟಿಯನ್ನು ಗುಂಡಿಕ್ಕಿ ಕೊಂದ ಉಗ್ರರು..!
‘ದೇಶದ ಯಾವುದೇ ಮಸೀದಿಗಳಲ್ಲಿ ಉತ್ಖನನ ನಡೆಸುವಾಗ ಶವ ಸಿಕ್ಕರೆ ಅದು ನಿಮ್ಮದು, ಒಂದು ವೇಳೆ ಶಿವಲಿಂಗ ಸಿಕ್ಕರೆ ಅದರು ನಮ್ಮದು. ನೀವು ಈ ಸವಾಲಿಗೆ ಸಿದ್ಧರಾಗಿದ್ದೀರಾ? ಎಂದು ಸಂಜಯ್ ಕುಮಾರ್ ಪ್ರಶ್ನಿಸಿದ್ದಾರೆ.
ಬಾಂಬ್ ಸ್ಫೋಟ ಪ್ರಕರಣಗಳು ನಡೆಯುತ್ತಿವೆ. ಹೀಗಾಗಿ ಅವರನ್ನು ನಾವು ಗುರುತಿಸಬೇಕಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಎಫ್‌ಡಿ ಇಟ್ಟಿದ್ದ 1 ಕೋಟಿ ಮಂಗಮಾಯ!: ಐಪಿಎಲ್ ಬೆಟ್ಟಿಂಗ್ ನಲ್ಲಿ ಕಳೆದ ಪೋಸ್ಟ್ ಮಾಸ್ಟರ್!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.