ಮುಂಬೈ: ಮಹಾರಾಷ್ಟ ಸರ್ಕಾರದ ಮಂತ್ರಿ ಮಂಡಲದಲ್ಲಿ ಸ್ಥಾನಗಳ ಹಂಚಿಕೆಯಾಗಿದೆ. ರಾಜ್ಯದ ಮುಖ್ಯಮಂತ್ರಿ ಗುರುವಾರ ಎಲ್ಲ ಮಂತ್ರಿಗಳ ಸ್ಥಾನ ಹಂಚಿಕೆ ಮಾಡಿದ್ದಾರೆ. ಶಿವಸೇನೆಯ ಖಾತೆಗೆ ಗೃಹ, ನಗರಾಭಿವೃದ್ಧಿ, ಪರಿಸರ, ಪಿಡಬ್ಲ್ಯೂಡಿ, ಸಂಸದೀಯ ವ್ಯವಹಾರಗಳ ಸಚಿವಾಲಯ ಸೇರಿಕೊಂಡಿವೆ. ಒಂದೆಡೆ NCP ಪಾಲಿಗೆ ಹಣಕಾಸು, ಕಾರ್ಪೋರೆಟ್, ಗ್ರಾಮೀಣಾಭಿವೃದ್ಧಿ, ಜಲಸಂಪನ್ಮೂಲ, ಸಾಮಾಜಿಕ ನ್ಯಾಯ, ಆರೋಗ್ಯ ಹಾಗೂ ಅಲ್ಪಸಂಖ್ಯಾತ ಖಾತೆಗಳು ಬಂದರೆ, ಇನ್ನೊಂದೆಡೆ  ಕಾಂಗ್ರೆಸ್ ಪಾಲಿಗೆ ರೆವಿನ್ಯೂ, ಮೆಡಿಕಲ್ ಎಜ್ಯುಕೇಶನ್, ಶಿಕ್ಷಣ, ಪಶು ಸಂಗೋಪನಾ ಹಾಗೂ ಡೆರಿ, ಬುಡಕಟ್ಟು, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಖಾತೆ ಹಾಗೂ ಜವಳಿ ಖಾತೆಗಳು ಬಂದಿವೆ.


COMMERCIAL BREAK
SCROLL TO CONTINUE READING

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜೊತೆ ಪ್ರಮಾಣವಚನ ಸ್ವೀಕರಿಸಿದ ಮಂತ್ರಿಗಳಿಗೆ ಈ ಖಾತೆಗಳನ್ನು ನೀಡಲಾಗಿದೆ.
ಏಕನಾಥ್ ಸಿಂಧೆ(ಶಿವಸೇನೆ): ಗೃಹ ಖಾತೆ, ನಗರಾಭಿವೃದ್ಧಿ, ಅರಣ್ಯ ಇಲಾಖೆ, ಪರಿಸರ, ನಿರಾವರಿ, ಪ್ರವಾಸೋದ್ಯಮ, ಸಾರ್ವಜನಿಕ ಉಪಕ್ರಮ, ಸಂಸದೀಯ ವ್ಯವಹಾರ, ಮಾಜಿ ಸೈನಿಕ ಕಲ್ಯಾಣ ಖಾತೆ.


ಸುಭಾಷ್ ದೇಸಾಯಿ(ಶಿವಸೇನಾ): ಉದ್ಯೋಗ, ಉನ್ನತ ಶಿಕ್ಷಣ, ಕ್ರೀಡಾ ಮತ್ತು ಯುವ ಅಭಿವೃದ್ಧಿ, ಕೃಷಿ, ಟ್ರಾನ್ಸ್ಪೋರ್ಟ್, ಫಲೋತ್ಪಾದನೆ, ಉದ್ಯೋಗ ಖಾತರಿ ಯೋಜನೆ, ಮರಾಠಿ ಭಾಷಾಭಿವೃದ್ಧಿ. 


ಛಗನ್ ಭುಜಬಲ್(NCP): ಗ್ರಾಮೀಣಾಭಿವೃದ್ಧಿ, ನಿರಾವರಿ ಹಾಗೂ ಲಾಭ ಕ್ಷೇತ್ರಗಳ ವಿಕಾಸ, ಸಾಮಾಜಿಕ ನ್ಯಾಯ, ವಿಶೇಷ ಸಹಾಯ, ಏಕ್ಸಾಯಿಸ್ ಡಿಪಾರ್ಟ್ಮೆಂಟ್, ಸ್ಕಿಲ್ ಡೆವಲಪ್ಮೆಂಟ್, FDA.


ಜಯಂತ್ ಪಾಟೀಲ್(NCP): ಹಣಕಾಸು, ಹೌಸಿಂಗ್, ಪಬ್ಲಿಕ್ ಹೆಲ್ತ್, ಸಹಕಾರ ಮತ್ತು ಜವಳಿ ಖಾತೆ, ನಾಗರಿಕ ಆಹಾರ ಪೂರೈಕೆ, ಗ್ರಾಹಕ ಸಂರಕ್ಷಣೆ, ಲೇಬರ್ and ಮೈನಾರಿಟಿ ಡೆವಲಪ್ಮೆಂಟ್.


ಬಾಳಾಸಾಹೇಬ್ ಥೋರಾತ್(INC) : ರೆವಿನ್ಯೂ, ವಿದ್ಯುತ್, ಮೆಡಿಕಲ್ ಎಜ್ಯುಕೇಶನ್, ಸ್ಕೂಲ್ ಎಜ್ಯುಕೇಶನ್, ಪಶು ಸಂಗೋಪನಾ ಖಾತೆ,  ಡೆರಿ ಅಭಿವೃದ್ಧಿ ಹಾಗೂ ಮೀನುಗಾರಿಕೆ ಖಾತೆ.


ನಿತಿನ್ ರಾವುತ್ (INC): ಪಿಡಬ್ಲ್ಯೂಡಿ, ಬುಡಕಟ್ಟು ಜನಾಂಗಾಭಿವೃದ್ಧಿ, ಮಹಿಳಾ ಹಾಗೂ ಮಕ್ಕಳ ಕಲ್ಯಾಣ, ಟೆಕ್ಸ್ಟೈಲ್ಸ್, ಸಹಾಯ ಮತ್ತು ಪುನರ್ವಸತಿ ಖಾತೆ.