Viral News: ಆತ 22 ಕಿಮೀ ನಡೆದು ಬಂದರೆ, ಆಕೆ 10 ಕಿ,ಮೀ ನಡೆದು ಬಂದಳು: ಮುಖಾಮುಖಿಯಾದಾಗ ಆಯ್ತು..!
Viral News: ಮೂಲಭೂತ ಸೌಲಭ್ಯವಿಲ್ಲದ ಕೊರತೆಯ ಕಾರಣ ವಧು ವರರಿಬ್ಬರೂ ಹಲವಾರು ಕಿ.ಮೀ. ದೂರ ದಟ್ಟಾರಣ್ಯದಲ್ಲಿ ನಡೆದುಕೊಂಡು ಬಂದು ತನ್ನ ಜೀವನ ಅಮೂಲ್ಯ ಕ್ಷಣಕ್ಕೆ ನಾಂದಿ ಹಾಡಿದ್ದಾರೆ. ವಧು 10 ಕಿ.ಮೀ. ನಡೆದು ಬಂದರೆ, ವರ 22 ಕಿ.ಮೀ. ದೂರ ನಡೆದುಕೊಂಡುಬಂದು ಮದುವೆಯಾಗಿದ್ದಾರೆ.
Viral News: ಎಲ್ಲೆಲ್ಲೂ ಅಭಿವೃದ್ಧಿಯಾಗಿದೆ ಎಂದು ಹೇಳುತ್ತಿದ್ದರೂ ಅನೇಕ ಪ್ರದೇಶಗಳಲ್ಲಿ ಇಂದಿಗೂ ಮೂಲಭೂತ ಸೌಕರ್ಯಗಳ ಕೊರತೆ ಕಾಣಿಸಿಕೊಳ್ಳುತ್ತಿದೆ. ಇಂತಹ ಸಮಸ್ಯೆಗಳಿಂದ ಜನರು ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ. ಇದಕ್ಕೆ ಉದಾಹರಣೆ ನಾವಿಂದು ಹೇಳಹೊರಟಿರುವ ವಿಷಯ.
ಮೂಲಭೂತ ಸೌಲಭ್ಯವಿಲ್ಲದ ಕೊರತೆಯ ಕಾರಣ ವಧು ವರರಿಬ್ಬರೂ ಹಲವಾರು ಕಿ.ಮೀ. ದೂರ ದಟ್ಟಾರಣ್ಯದಲ್ಲಿ ನಡೆದುಕೊಂಡು ಬಂದು ತನ್ನ ಜೀವನ ಅಮೂಲ್ಯ ಕ್ಷಣಕ್ಕೆ ನಾಂದಿ ಹಾಡಿದ್ದಾರೆ. ವಧು 10 ಕಿ.ಮೀ. ನಡೆದು ಬಂದರೆ, ವರ 22 ಕಿ.ಮೀ. ದೂರ ನಡೆದುಕೊಂಡುಬಂದು ಮದುವೆಯಾಗಿದ್ದಾರೆ.
ಇದನ್ನೂ ಓದಿ: IPL 2023: ಈ ಯುವ ಆಟಗಾರನಿಗೆ ಮೋಸ ಮಾಡಿದ್ರಾ ಎಂ ಎಸ್ ಧೋನಿ?
ಈ ಘಟನೆ ನಡೆದಿರುವುದು ಬೇರೆಲ್ಲೂ ಅಲ್ಲ. ನಮ್ಮ ರಾಜ್ಯದಲ್ಲಿಯೇ. ಹೌದು ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ ಸವೆಗುಳಿಯಲ್ಲಿ ಈ ಘಟನೆ ನಡೆದಿದೆ. ವಧು ವರರ ಜೊತೆ ಪುರೋಹಿತರೂ ಕೂಡ 10 ಕಿ.ಮೀ. ಕಾಲ್ನಡಿಗೆಯಲ್ಲಿ ಬೆವರು ಹರಿಸುತ್ತಲೇ ಬಂದು ಮದುವೆ ಮಾಡಿದ್ದಾರೆ.
ಸಿಕಳಿ ಗ್ರಾಮದ ಸುಮಿತ್ರಾ ರಾಮ ಗೌಡ ಅವರ ವಿವಾಹವು ಸವೆಗುಳಿ ಮೂಲದ ಮಹಾಬಲೇಶ್ವರ ಗೌಡ ಅವರೊಂದಿಗೆ ಏ. 10 ರಂದು ನಿಶ್ಚಯವಾಗಿತ್ತು. ಮಹಾಬಲೇಶ್ವರ ಗೌಡ ಕುಟುಂಬವು ಜೀವನಕ್ಕಾಗಿ ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ ಕೆಂದಗಿಯಲ್ಲಿ ತೋಟದ ಕೆಲಸ ಮಾಡಿಕೊಂಡಿದ್ದಾರೆ. ಹೀಗಾಗಿ ಅಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಆದರೆ ಮದುವೆಯನ್ನು ವರನ ಮೂಲಮನೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕೆಂದಗಿಯಿಂದ 22 ಕಿಮೀ ದೂರವಿರುವ ಓ ಸವೆಗುಳಿ ಗ್ರಾಮಕ್ಕೆ ರಸ್ತೆ ವ್ಯವಸ್ಥೆ ಇಲ್ಲ, ಕಾಲುದಾರಿಯೇ ಆಸರೆ. ಹೀಗಾಗಿ ಮದುವೆಯ ಹಿಂದಿನ ದಿನ ನಡೆದುಕೊಂಡು ಬಂದು 22 ಕಿಮೀ ಅಂತರವನ್ನು ತಲುಪಿದ್ದಾರೆ.
ಇನ್ನೊಂದೆಡೆ ವಧು ಕೂಡ ಸುಮಾರು 10 ಕಿಮೀ ನಡೆದಿದ್ದಾಳೆ. ಸಿಕಳಿಯಿಂದ ಸವೆಗುಳಿಯಲ್ಲಿರುವ ಮದುವೆಯ ಮಂಟಪಕ್ಕೆ 10ಕಿಮೀ ದೂರವಿದೆ. ಹೀಗಾಗಿ ಏ. 10ರ ಬೆಳಗ್ಗೆ 6 ಗಂಟೆಗೆ ಅರಿಶಿಣ ಶಾಸ್ತ್ರ ಮುಗಿಸಿಕೊಂಡು ಕಾಲ್ನಡಿಗೆಯಲ್ಲಿ ಮದುಮಗಳು ಹೊರಟಿದ್ದು ಮಧ್ಯಾಹ್ನ 11 ಗಂಟೆಗೆ ಮಂಟಪಕ್ಕೆ ತಲುಪಿದ್ದಾರೆ.
ಇದನ್ನೂ ಓದಿ: Viral Video: ಮಾವನ ಜೊತೆ ಸೊಸೆಯ ತರಲೆ-ತುಂಟಾಟ: ಅಮಿತಾಬ್-ಐಶ್ ಕ್ಯೂಟ್ ವಿಡಿಯೋ ನೋಡಿ
ಕರಿ ಒಕ್ಕಲು ಸಮಾಜದವರಾದ ಈ ಕುಟುಂಬ ತಮ್ಮ ಸಂಪ್ರದಾಯದಂತೆ ವಿವಾಹ ನಡೆಸಿ ವಧು-ವರನಿಗೆ ಆಶೀರ್ವಾದ ಮಾಡಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.