ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೊಡ್ಡ "ಅನಕೊಂಡ", ಅವರು ಸಿಬಿಐ ಮತ್ತು ಆರ್‌ಬಿಐನಂತಹ ರಾಷ್ಟ್ರೀಯ ಸಂಸ್ಥೆಗಳನ್ನೇ ನುಂಗಿಹಾಕಿದ್ದಾರೆ ಎಂದು ಆಂಧ್ರಪ್ರದೇಶ ಹಣಕಾಸು ಸಚಿವ ಯನಮಲ ರಾಮ ಕೃಷ್ಣುಡು ಕಟುವಾಗಿ ಟೀಕಿಸಿದ್ದಾರೆ. 


COMMERCIAL BREAK
SCROLL TO CONTINUE READING

ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ದೇಶದಲ್ಲಿ ರಾಜಕೀಯದ ತಾಪ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ರಾಜಕೀಯ ನಾಯಕರು ಮತ್ತು ರಾಜಕೀಯ ಪಕ್ಷಗಳ ವಿರುದ್ಧ ವಾಗ್ದಾಳಿಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿವೆ. ಆಂಧ್ರ ಪ್ರದೇಶದಲ್ಲಿ ಆಡಳಿತ ತೆಲುಗು ದೇಶಂ ಪಕ್ಷ , ಕಾಂಗ್ರೆಸ್ ಜೊತೆ ಮೈತ್ರಿ ಹೊಂದಿದ ಬೆನ್ನಲ್ಲೇ ಯನಮಲ ರಾಮ ಕೃಷ್ಣುಡು ತೀವ್ರ ವಾಗ್ದಾಳಿ ನಡೆಸಿದ್ದಾರೆ. 


"ನರೇಂದ್ರ ಮೋದಿಗಿಂತ ಅತಿದೊಡ್ಡ ಅನಕೊಂಡ ಯಾರಿದ್ದಾರೆ? ಅವರೇ ದೊಡ್ಡ ಅನಕೊಂಡ, ಸಿಬಿಐ, ಆರ್ಬಿಐ ಸೇರಿದಂತೆ ಹಲವು ರಾಷ್ಟ್ರೀಯ ಸಂಸ್ಥೆಗಳನ್ನು ನುಂಗಿ ಹಾಕಿದ್ದಾರೆ" ಎಂದು ವಾಗ್ದಾಳಿ ನಡೆಸಿದ್ದಾರೆ. 


ಟಿಡಿಪಿಯ ಮುಖ್ಯ ಗುರಿ ದೇಶವನ್ನು ಬಿಜೆಪಿಯಿಂದ ರಕ್ಷಿಸುವುದು. "ಎಲ್ಲಾ ಟಾಮ್, ಡಿಕ್ ಮತ್ತು ಹ್ಯಾರಿಗಳು ಪೂರ್ವ ಪಾಲಿಟಿಕ್ಸ್ ಬಗ್ಗೆ ಮಾತನಾಡುತ್ತಿದ್ದಾರೆ. ಭೂತಕಾಲದಲ್ಲಿ ನಡೆದಿದ್ದು ವರ್ತಮಾನದಲ್ಲಿ ಮತ್ತು ಭವಿಷ್ಯದಲ್ಲಿ ನಡೆಯಬೇಕೆಂದೇನೂ ಇಲ್ಲ. ಇದನ್ನು ತೆಲಗು ದೇಶಂ ಪಕ್ಷದ ಟೀಕಾಕಾರರು ಅರಿಯಬೇಕು. ಟಿಡಿಪಿ ಯಾವುದೇ ಪಕ್ಷಕ್ಕೆ ವಿರುದ್ಧವಾಗಿ ಸ್ಥಾಪನೆಯಾಗಿಲ್ಲ. ಅದು ವ್ಯವಸ್ಥೆಯ ವಿರುದ್ಧವಾಗಿ ಸ್ಥಾಪನೆಯಾಗಿದೆ" ಎಂದು ಹೇಳಿದರು.


ವಿಪಕ್ಷಗಳಾದ ವೈಎಸ್ಆರ್ ಕಾಂಗ್ರೆಸ್ ಮತ್ತು ಜನ ಸೇನಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಈ ಪಕ್ಷಗಳು ಅಧಿಕಾರಕ್ಕಾಗಿ ಮಾತ್ರ ಹಾತೊರೆಯುತ್ತವೆ. ಆದರೆ ರಾಷ್ಟ್ರೀಯ ಜವಾಬ್ದಾರಿ ಎಂಬುದು ಇವರಿಗಿಲ್ಲ ಎಂದು ದೂರಿದರು. ಹಾಗಾಗಿಯೇ "ಆ ಎರಡು ಪಕ್ಷಗಳು, ರಾಷ್ಟ್ರೀಯ ಸಂಸ್ಥೆಗಳು ಮತ್ತು ಪ್ರಜಾಪ್ರಭುತ್ವವನ್ನು ನಾಶಪಡಿಸುವ ಮೋದಿಗೆ ಬೆಂಬಲ ನೀಡುತ್ತಿವೆ" ಎಂದು ಆರೋಪಿಸಿದರು.