Mask ಧರಿಸುವ ಮೊದಲು ಈ ಸಂಗತಿಗಳು ನಿಮಗೆ ತಿಳಿದಿರಲಿ, WHO ಕೂಡ ಜಾರಿಗೊಳಿಸಿದೆ Alert
ಕರೋನವೈರಸ್ ದೇಶಾದ್ಯಂತ ವೇಗವಾಗಿ ಹರಡುವುದನ್ನು ತಡೆಯಲು ಎಲ್ಲರೂ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಏತನ್ಮಧ್ಯೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮುಖವಾಡಗಳನ್ನು ಧರಿಸುವ ಬಗ್ಗೆ ಮಾರ್ಗಸೂಚಿಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.
ನವದೆಹಲಿ:ಕರೋನವೈರಸ್ ದೇಶಾದ್ಯಂತ ವೇಗವಾಗಿ ಹರಡುವುದನ್ನು ತಡೆಯಲು ಎಲ್ಲರೂ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಏತನ್ಮಧ್ಯೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮುಖವಾಡಗಳನ್ನು ಧರಿಸುವ ಬಗ್ಗೆ ಇರುವ ಮಾರ್ಗಸೂಚಿಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಡಬ್ಲ್ಯುಎಚ್‌ಒ ಪ್ರಕಾರ, ಈ ಸಮಯದಲ್ಲಿ ಭಾರತದಲ್ಲಿ ಮುಖವಾಡಗಳನ್ನು ಧರಿಸುವುದು ಬಹಳ ಮುಖ್ಯವಾಗಿದೆ ಎಂದಿದೆ. ಭಾರತದಲ್ಲಿ ವೈರಸ್ ಹರಡುವ ವಿಧಾನವನ್ನು ಗಮನದಲ್ಲಿಟ್ಟುಕೊಂಡು ಡಬ್ಲ್ಯುಎಚ್‌ಒ ಯಾರು ಮುಖವಾಡ ಧರಿಸಬೇಕು, ಯಾವಾಗ ಧರಿಸಬೇಕು ಮತ್ತು ಯಾವುದರಿಂದ ಮುಖವಾದ ತಯಾರಿಸಬೇಕು ಎಂಬುದನ್ನು ಹೇಳಿದೆ. ಈ ಎಲ್ಲ ವಿಷಯಗಳ ಬಗ್ಗೆ ಇಲ್ಲಿದೆ ವಿವರ,
ಈ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಅನಿವಾರ್ಯ
ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೊಸ್ ಆಡ್ನೊಮ್ ಅವರ ಪ್ರಕಾರ, ವೈರಸ್ ಅಪಾಯ ಹೆಚ್ಚಿರುವ ಸ್ಥಳಗಳಲ್ಲಿ ಸಾರ್ವಜನಿಕರು ಮಾಸ್ಕ್ ಗಳನ್ನೂ ಧರಿಸಬೇಕು ಮತ್ತು ಸಾರ್ವಜನಿಕ ಸಾರಿಗೆ, ಅಂಗಡಿಗಳು ಅಥವಾ ಜನದಟ್ಟಣೆ ಇರುವ ಪ್ರದೇಶ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಷ್ಟ ಎನಿಸುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸಬೇಕು.
ರೋಗಿಗಳು ಮಾಸ್ಕ್ ಧರಿಸುವುದು ಅನಿವಾರ್ಯ
ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ WHO ಮುಖ್ಯಸ್ಥರು, ಕಮ್ಯೂನಿಟಿ ಟ್ರಾನ್ಸ್ಮಿಶನ್ ಇರುವ ಪ್ರದೇಶಗಳಲ್ಲಿ 60 ಕ್ಕಿಂತ ಹೆಚ್ಚಿನ ವಯಸ್ಸಿನವರು ಅಥವಾ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ಮೆಡಿಕಲ್ ಮಾಸ್ಕ್ ಧರಿಸಬೇಕು. ಇಂತಹ ಪ್ರದೇಶಗಳಲ್ಲಿ ಜನರಿಂದ ಶಾರೀರಿಕ ಅಂತರ ಕಾಯ್ದುಕೊಳ್ಳುವುದು ಸಾಧ್ಯವಿರುವುದಿಲ್ಲ.
ಮಾಸ್ಕ್ ತಯಾರಿಕೆಗೆ ಯಾವ ಮಟೀರಿಯಲ್ ಬಳಸಬೇಕು?
ವೈದ್ಯಕೀಯೇತರ ಫ್ಯಾಬ್ರಿಕ್ ಮಾಸ್ಕ್ ಗಳ ವಿನ್ಯಾಸಕ್ಕೆ ಸಂಬಂಧಿಸಿದಂತೆ ಡಬ್ಲ್ಯುಎಚ್‌ಒ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ, ಇದರ ಪ್ರಕಾರ ಮಾಸ್ಕ್ ಗಳು ಕನಿಷ್ಟ ಮೂರು ಪದರಗಳ ಪ್ರತ್ಯೇಕ ಬಟ್ಟೆಗಳನ್ನು ಹೊಂದಿರಬೇಕು ಎಂದು ಹೇಳಲಾಗಿದೆ. ವೈರಸ್ ಅನ್ನು ದೂರವಿರಿಸಲು ಮುಖವಾಡವು ಉತ್ತಮ ಆಯ್ಕೆಯಾಗಿದೆ ಎಂದು WHO ಮುಖ್ಯಸ್ಥರು ಹೇಳಿದ್ದರೂ ಕೂಡ, ಅದು ಶಾಶ್ವತ ಚಿಕಿತ್ಸೆಯಲ್ಲ. ಅಂದರೆ, ಅದನ್ನು ಧರಿಸಿದ ನಂತರವೂ ಅದು ಸಂಪೂರ್ಣವಾಗಿ ಸುರಕ್ಷಿತವಲ್ಲ.