ನವದೆಹಲಿ:ವಿಶ್ವಾದ್ಯಂತ ಕ್ರಿಸ್ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಕ್ರೈಸ್ತ ಧರ್ಮದ ಅನುಸಾರ ಈ ದಿನ ಯೇಸು ಕ್ರಿಸ್ತನ ಜನನವಾಗಿತ್ತು. ಆ ಬಳಿಕ ಪ್ರತಿ ವರ್ಷದ ಡಿಸೆಂಬರ್ 25ನ್ನು ಕ್ರಿಸ್ಮಸ್ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಈ ದಿನ ವಿಶ್ವಾದ್ಯಂತ ಕ್ರಿಸ್ಮಸ್ ಹಬ್ಬದ ಸಡಗರ ಮತ್ತು ಸಂಭ್ರಮ ನೋಡಲು ಸಿಗುತ್ತದೆ. ಆದರೆ, ಈ ಹಬ್ಬದ ಆಚರಣೆಯ ಹಿಂದಿನ ಮಹತ್ವ ಏನು ಎಂಬುದು ನಿಮಗೆ ಗೊತ್ತಾ? ಸಂತಾ ಕ್ಲಾಸ್ ಯಾರು? ಕ್ರಿಸ್ಮಸ್ ಟ್ರೀ ಅನ್ನು ಯಾಕೆ ಶಿಂಗರಿಸಲಾಗುತ್ತದೆ? ಅಥವಾ ವಿಶ್ವದ ಯಾವ ಪ್ರದೇಶದಲ್ಲಿ ಈ ಹಬ್ಬವನ್ನು ಭರ್ಜರಿಯಿಂದ ಆಚರಿಸಲಾಗುತ್ತದೆ? ಹಾಗಾದ್ರೆ ಬನ್ನಿ .. ಅರಿಯೋಣ ಇಂತಹುದೇ ಕೆಲ ಪ್ರಶ್ನೆಗಳ ರೋಚಕ ಉತ್ತರ..


COMMERCIAL BREAK
SCROLL TO CONTINUE READING

ಕ್ರಿಸ್ಮಸ್ ಟ್ರೀ ಹಿಂದಿನ ಕಥೆ ಏನು?
ಈ ಹಬ್ಬದ ಆಚರಣೆಯ ವೇಳೆ ಕ್ರಿಸ್ಮಸ್ ಟ್ರೀ ತನ್ನದೇ ಆದ ಮಹತ್ವ ಹಾಗೂ ವೈಶಿಷ್ಟ್ಯ ಹೊಂದಿದೆ. ದೊರೆ ಯೇಸು ಕ್ರಿಸ್ತನ ಜನನದ ವೇಳೆ ಒಂದು ವಿಶಿಷ್ಟ ಶೈಲಿಯ ಮರವನ್ನು ಶಿಂಗರಿಸಲಾಗಿತ್ತು. ಬಳಿಕ ಈ ಮರಕ್ಕೆ ಕ್ರಿಸ್ಮಸ್ ಟ್ರೀ ಎಂದೇ ಹೆಸರಿಸಲಾಯಿತು ಎನ್ನಲಾಗುತ್ತದೆ. ಕ್ರಿಸ್ಮಸ್ ಹಬ್ಬದ ವೇಳೆ ಈ ಮರವನ್ನು ಚಾಕ್ಲೆಟ್ಸ್, ಚಿಕ್ಕ ಚಿಕ್ಕ ಗಿಫ್ಟ್ಸ್, ಹೊಳೆಯುತ್ತಿರುವ ನಕ್ಷತ್ರಗಳು ಹಾಗೂ ಬಣ್ಣ ಬಣ್ಣದ ದೀಪಗಳ ಮೂಲಕ ಶಿಂಗರಿಸಲಾಗುತ್ತದೆ. ವಿಶ್ವದ ಹಲವಾರು ಕಡೆಗಳಲ್ಲಿ ಕ್ರಿಸ್ಮಸ್ ಹಬ್ಬಕ್ಕೂ ಎರಡು ತಿಂಗಳು ಮುನ್ನವೇ ಈ ಮರದ ಶೃಂಗಾರ ಕೆಲಸ ಆರಂಭವಾಗುತ್ತದೆ ಹಾಗೂ ಕ್ರಿಸ್ಮಸ್ ಹಬ್ಬ ಮುಕ್ತಾಯದವರೆಗೆ ಇದು ಮುಂದುವರೆಯುತ್ತದೆ.



ವಿಶ್ವದ ಅತ್ಯಂತ ಎತ್ತರದ ಕ್ರಿಸ್ಮಸ್ ಟ್ರೀ ಎಲ್ಲಿದೆ
ಕ್ರಿಸ್ಮಸ್ ಹಬ್ಬ ಮತ್ತು ಅದರ ಆಚರಣೆ ಕೇಳಿಬರುತ್ತಿದ್ದಂತೆ ಮೊಟ್ಟಮೊದಲಿಗೆ ಲಂಡನ್, ಪ್ಯಾರಿಸ್, ನ್ಯೂಯಾರ್ಕ್ ಗಳಂತಹ ನಗರಗಳು ಕಣ್ಮುಂದೆ ಗೋಚರಿಸತೊಡಗುತ್ತವೆ. ಆದರೆ, ವಿಶ್ವದ ಅತ್ಯಂತ ಎತ್ತರದ ಕ್ರಿಸ್ಮಸ್ ಟ್ರೀ, ರಿಯೋ ಡಿ ಜನೆರಿಯೋನಲ್ಲಿದೆ ಎಂಬುದು ನಿಮಗೆ ಗೊತ್ತೇ? ಹೌದು, ಇದು ಸುಮಾರು 278 ಅಡಿ ಎತ್ತರವಾಗಿದೆ. ಅಷ್ಟೇ ಅಲ್ಲ ಇದು ವಿಶ್ವದ ಮೊಟ್ಟಮೊದಲ ತೇಲಾಡುವ ಕ್ರಿಸ್ಮಸ್ ಟ್ರೀ ಆಗಿರುವುದು ಇದರ ಮತ್ತೊಂದು ವಿಶೇಷತೆ. ಜರ್ಮನಿಯಲ್ಲಿರುವ ಡಾರ್ಟಮುಂಡ್ ಹಾಗೂ ಮ್ಯೂನಿಕ್ ಗಳಷ್ಟು ಪಾಪ್ಯೂಲರ್ ಇಲ್ಲದೆ ಹೋದರು ಈ ಪಟ್ಟಣ ತನ್ನ ವಿಶಿಷ್ಟ ಕ್ರಿಸ್ಮಸ್ ಆಚರಣೆಯ ಕಾರಣ ಪ್ರಖ್ಯಾತಿ ಪಡೆದಿದೆ. ಪ್ರತಿ ವರ್ಷ ಇಲ್ಲಿ 145 ಅಡಿ ಎತ್ತರದ ಕ್ರಿಸ್ಮಸ್ ಟ್ರೀ ಅನ್ನು ಶೃಂಗಾರಗೊಳಿಸಲಾಗುತ್ತದೆ.



ಸಂತ ನಿಕೊಲಸ್ ನಿಂದ ಬಂತು ಸಾಂತಾ ಕ್ಲಾಸ್ ವಾಡಿಕೆ
ಕ್ರಿಸ್ಮಸ್ ಟ್ರೀ ಅನ್ನು ಹೊರತುಪಡಿಸಿದರೆ ಕ್ರಿಸ್ಮಸ್ ಆಚರಣೆಯ ಸಂದರ್ಭದಲ್ಲಿ ಇನ್ನೋರ್ವ ವ್ಯಕ್ತಿ ಹೆಚ್ಚು ಫೇಮಸ್ ಅಂದರೆ ಆತ ಸಾಂತಾ ಕ್ಲಾಸ್. ಈತನನ್ನು ಸಂತ ನಿಕೊಲಸ್ ನ ರೂಪ ಎಂದು ಹೇಳಲಾಗುತ್ತದೆ. ಚಿಕ್ಕಂದಿನಿಂದಲೇ ಸಂತ ನಿಕೊಲಸ್ ಭಗವಾನ್ ಯೇಸುವಿನ ಬಗ್ಗೆ ಅಪಾರ ಭಕ್ತಿ, ಗೌರವ ಹೊಂದಿದ್ದರು. ನಂತರದ ದಿನಗಳಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸುವ ಅವರು, ಬಿಷಪ್ ಪದವಿ ಕೂಡ ಅಲಂಕರಿಸುತ್ತಾರೆ. ಚಿಕ್ಕ ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ಕಾಣುವ ಸಂತ ನಿಕೊಲಸ್ ಅವರು, ದಿಕ್ಕಿಲ್ಲದೆ ಬದುಕುತ್ತಿರುವ ಅನಾಥ ಚಿಕ್ಕ ಮಕ್ಕಳಿಗಾಗಿ ಉಗುಗೊರೆಗಳನ್ನು ಕೊಂಡೊಯ್ಯುತ್ತಿದ್ದರು. ತಮ್ಮ ಗುರುತು ಮರೆಮಾಚುವ ಉದ್ದೇಶದಿಂದ ಇವರು ತಮ್ಮ ಎಲ್ಲ ಉಡುಗೊರೆಗಳನ್ನು ಇರುಳಿನ ವೇಳೆಯಲ್ಲಿಯೇ ಹಂಚುತ್ತಿದ್ದರು.



ಸಂತಾ ಕ್ಲಾಸ್ ಪೋಷಾಕು ಕೋಕಾ ಕೋಲಾದ ಉಡುಗೊರೆ
ಸಂತಾ ಕ್ಲಾಸ್ ಧರಿಸುವ ಬಿಳಿ ಮತ್ತು ಕೆಂಪು ಬಣ್ಣದ ಪೋಷಾಕಿನ ಹಿಂದೆ ಕೋಕಾ ಕೋಲಾ ಕೈವಾಡವಿರುವ ರೋಚಕ ಕಥೆ ತುಂಬಾ ಕಡಿಮೆ ಜನರಿಗೆ ತಿಳಿದಿದೆ. ಹೌದು, ಕೋಕಾ ಕೋಲಾ ಕಂಪನಿ ತನ್ನ ಒಂದು ಜಾಹೀರಾತಿನಲ್ಲಿ ಕೆಂಪು ಮತ್ತು ಬಿಳಿ ಬಣ್ಣದ ಪೋಷಾಕು ಧರಿಸಿದ್ದ  ಸಂತಾ ಕ್ಲಾಸ್ ನನ್ನು ಪರದೆಗೆ ಇಳಿಸಿತ್ತು. ಹಲವು ದಿನಗಳವರೆಗೆ ಈ ಜಾಹೀರಾತು ಬಳಕೆಯಲ್ಲಿತ್ತು. ಆ ನಂತರ ವಿಶ್ವದ ಹಲವೆಡೆ ಕೆಂಪು ಮತ್ತು ಬಿಳಿ ಬಣ್ಣದ ಪೋಷಾಕನ್ನು ಸಂತಾ ಕ್ಲಾಸ್ ನ ಮೂಲ ಉಡುಗೆಯಾಗಿ ಸ್ವೀಕರಿಸಲಾಗಿತು.