ದೆಹಲಿ: ದೆಹಲಿಯ ಮೇಲಿನ ಅಧಿಕಾರದ ವಿಷಯವು ಈಗ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದು ಈಗ ಅದು ದೆಹಲಿಯ 'ಬಾಸ್' ಯಾರು? ಎನ್ನುವುದನ್ನು  ನಿರ್ಧರಿಸಲಿದೆ.


COMMERCIAL BREAK
SCROLL TO CONTINUE READING

ಈ ಹಿಂದೆ ದೆಹಲಿ ಹೈಕೋರ್ಟ್ ಲೆಫ್ಟಿನೆಂಟ್ ಗವರ್ನರ್ ದೆಹಲಿಯ ಬಾಸ್ ಎಂದು ತೀರ್ಪು ನೀಡಿತ್ತು, ಅಲ್ಲದೆ ಕೇಂದ್ರ ಸರ್ಕಾರವು ಸಹಿತ  ನವಂಬರ್ 21 ರಂದು ದೆಹಲಿ ಕೇಂದ್ರಾಡಳಿತ ಪ್ರದೇಶ  ಆದ್ದರಿಂದ ರಾಜ್ಯ ಪಡೆಯು ಎಲ್ಲ ಸವಲತ್ತುಗಳು ಅದಕ್ಕಿಲ್ಲ ಎಂದು ಕೋರ್ಟ್ ಗೆ ತಿಳಿಸಿತ್ತು.ಅಲ್ಲದೆ ಈ ಹಿಂದೆ ಸುಪ್ರಿಂಕೋರ್ಟ್ ನ 5 ನ್ಯಾಯಮೂರ್ತಿಗಳ ಪೀಠವು ದೆಹಲಿಯಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಳ್ಳಲು ಅದು ಲೆಫ್ಟಿನೆಂಟ್ ಗವರ್ನರ್ ರವರ ಒಪ್ಪಿಗೆ ಅವಶ್ಯಕವೆಂದು ಅಭಿಪ್ರಾಯ ಪಟ್ಟಿತ್ತು. 


ಈಗ ಈ ನಿರ್ಧಾರವನ್ನು ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರವು  ಸುಪ್ರಿಂಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಿದೆ.ಈ ವಿಚಾರಣೆಯನ್ನು ಮುಖ್ಯನ್ಯಾಯಾಧೀಶರಾದ  ದೀಪಕ್ ಮಿಶ್ರಾ ಮತ್ತು ನ್ಯಾಯಾಧೀಶರಾದ ಎ.ಕೆ.ಸಿಕ್ರಿ, ಎ.ಎಂ.ಖಾನವಿಲ್ಕರ್, ಡಿ.ವಾಯ್.ಚಂದ್ರಚೂಡ ಮತ್ತು ಅಶೋಕ್ ಭೂಷಣ್ ರವರನ್ನು ಒಳಗೊಂಡ ಸಂವಿಧಾನ ಪೀಠವು  ಈ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.