ನವದೆಹಲಿ:ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧಿಸಿ ದೇಶಾದ್ಯಂತ ಹಿಂಸಾಚಾರಗಳು ಸಂಭವಿಸಿದ್ದು, ದೇಶವನ್ನು ಸುಟ್ಟುಹಾಕಲು ಸಂಚು ರೂಪಿಸಲಾಗಿದೆ. ಸದ್ಯ ಸಿಕ್ಕಿರುವ ಮಾಹಿತಿಯಿಂದ ಈ ಶಂಕೆ ಇನ್ನಷ್ಟು ದಟ್ಟವಾಗಿದೆ. ಹೌದು, CAA ವಿರೋಧಿಸಿ ದೇಶದಲ್ಲಿ ದಂಗೆ ಹುಟ್ಟುಹಾಕುವುದರ ಹಿಂದ ಪಾಪ್ಯೂಳರ್ ಫ್ರೊಂಗ್ ಆಫ್ ಇಂಡಿಯಾ ಅಂದರೆ PFI ಕೈವಾಡವಿರುವ ಶಂಕೆ ವ್ಯಕ್ತವಾಗಿದೆ
.
ಯಾವ  ರಾಜ್ಯಗಳಲ್ಲಿ ಸಕ್ರೀಯವಾಗಿದೆ PFI?


COMMERCIAL BREAK
SCROLL TO CONTINUE READING

ಪೌರತ್ವ ತಿದ್ದುಪಡಿ ಕಾಯ್ದೆಯ ಹಿನ್ನೆಲೆ ದೇಶಾದ್ಯಂತ ಸೃಷ್ಟಿಯಾದ ಗಲಭೆಗಳ ಹಿಂದೆ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಅಂದರೆ PFI ಇರುವ ಕುರಿತು ಶಂಕೆ ವ್ಯಕ್ತಪಡಿಸಲಾಗುತ್ತಿದ್ದು, PFI ಮೇಲೆ ತನಿಖಾ ಸಂಸ್ಥೆಗಳು ತಮ್ಮ ಪಟ್ಟು ಬಿಗಿಗೊಳಿಸಿವೆ. ಮೂಲಗಳ ಪ್ರಕಾರ PFI ಸಂಘಟನೆ ದೇಶದ ಒಟ್ಟು 8 ರಾಜ್ಯಗಳಲ್ಲಿ ಸಕ್ರೀಯವಾಗಿದೆ. ದೇಶಾದ್ಯಂತ ನಡೆದ ಹಿಂಸಾಚಾರ ಮತ್ತು ಗಲಭೆಗಳ ಹಿಂದೆ PFI ಕೈವಾಡವಿರುವ ಶಂಕೆ ಗುಪ್ತಚರ ಇಲಾಖೆ ವ್ಯಕ್ತಪಡಿಸಿದೆ.


ಈ ರಾಜ್ಯಗಳಲ್ಲಿ PFI ಸಕ್ರೀಯವಾಗಿದೆ


  1. ದೆಹಲಿ

  2. ಆಂಧ್ರ ಪ್ರದೇಶ

  3. ಅಸ್ಸಾಂ

  4. ಬಿಹಾರ

  5. ಕೇರಳ

  6. ಝಾರ್ಖಂಡ

  7. ಪಶ್ಚಿಮ ಬಂಗಾಳ

  8. ಉತ್ತರ ಪ್ರದೇಶ


ಮಲ್ಟಿ ಏಜೆನ್ಸಿ ಸೆಂಟರ್ ಅಂದರೆ MAC ನೀಡಿರುವ ವರದಿ ಪ್ರಕಾರ PFI ಜೊತೆ ಸಂಪರ್ಕ ಹೊಂದಿರುವ ಜನರು ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಸಭೆಗಳನ್ನು ನಡೆಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ ದೇಶಾದ್ಯಂತ ನಡೆದ CAA ಹಾಗೂ NRC ವಿರುದ್ಧದ ದಂಗೆಗಳಲ್ಲಿ PFI ಜನರು ಶಾಮೀಲಾಗಿದ್ದಾರೆ ಎಂಬುದರ ಕುರಿತು ಮಾಹಿತಿ ಲಭ್ಯವಾಗಿದೆ.


CAA ವಿರೋಧಿಸಿ ಕರಪತ್ರಗಳನ್ನು ಹಂಚಿತ್ತು PFI
ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ ಪೌರತ್ವ ತಿದ್ದುಪಡಿ ಕಾಯ್ದೆ ತಯಾರಿಗೂ ಮುನ್ನವೇ PFIಗೆ ಸಂಬಂಧಿಸಿದ ಜನರು ಆಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಈ ಕಾಯ್ದೆಗೆ ವಿರೋಧ ವ್ಯಕ್ತಪಡಿಸುವಂತೆ ಸಾಮಾನ್ಯ ಜನರಿಗೆ ಕರಪತ್ರಗಳನ್ನು ಹಂಚಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಪ್ರತಿಭಟನೆ ಮತ್ತು ಹಿಂಸಾಚಾರ ಭುಗಿಲೆದ್ದಿದೆ.


PFI ಸಂಘಟನೆಯ ಈ ಸಂಚನ್ನು ಬಹಿರಂಗಗೊಳಿಸಿದ್ದ ಲಖನೌ ಪೊಲೀಸರು ಸೋಮವಾರ ಸಂಘಟನೆಯ ರಾಜ್ಯ ಮುಖ್ಯಸ್ಥ ವಸೀಮ್ ಅಹ್ಮದ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ದಂಗೆಯ ಪರಿಸ್ಥಿತಿ ಹತೋಟಿ ಮೀರಿದ್ದು, ಈ ದಂಗೆಗಳಲ್ಲಿ ಇದುವರೆಗೆ ಸುಮಾರು 55 ಪೋಲೀಸ್ ಪೇದೆಗಳಿಗೆ ಗುಂಡು ತಗುಲಿವೆ.