ನವದೆಹಲಿ : ವಿಶ್ವದ ಹಲವು ದೇಶಗಳಲ್ಲಿ ಕೊರೊನಾ (Coronavirus) ಸೋಂಕಿನ ಪ್ರಕರಣಗಳು ಮತ್ತೆ ಹೆಚ್ಚಾಗತೊಡಗಿವೆ. ಹೀಗಿರುವಾಗ ಮತ್ತೆ ಸಾಂಕ್ರಾಮಿಕ ರೋಗದ ಭೀತಿ ಜನರನ್ನು ಕಾಡತೊಡಗಿದೆ. ಏತನ್ಮಧ್ಯೆ, ಎಲ್ಲಾ ದೇಶಗಳು ಲಸಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವವರೆಗೆ, ಹೆಚ್ಚುತ್ತಿರುವ COVID-19 ಸೋಂಕು ಮತ್ತು ಹೊಸ ರೂಪಾಂತರಗಳೊಂದಿಗೆ ಜಗತ್ತು ಹೋರಾಡುತ್ತಲೇ ಇರಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.


COMMERCIAL BREAK
SCROLL TO CONTINUE READING

ಎಲ್ಲರೂ, ಸಾಂಕ್ರಾಮಿಕ ರೋಗದಿಂದ ಶೀಘ್ರ ಮುಕ್ತಿ ಹೊಂದಲು ಬಯಸುತ್ತಾರೆ. ಆದರೆ ಈ ಮಹಾಮಾರಿಯ ಅಪಾಯ ಇನ್ನೂ ಕೊನೆಯಾಗಿಲ್ಲ. ಎಲ್ಲಾ ದೇಶಗಳು ಲಸಿಕೆಯ ಪ್ರಕ್ರಿಯೆಯನ್ನು (Vaccination) ಪೂರ್ಣಗೊಳಿಸುವವರೆಗೆ ಸೋಂಕಿನ ಅಪಾಯ ಮತ್ತು ಹೊಸ ರೂಪಾಂತರಗಳನ್ನು ಎದುರಿಸುತ್ತಲೇ ಇರಬೇಕಾಗುತ್ತದೆ ಎಂದು WHO ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್,  ಹೇಳಿದ್ದಾರೆ. 


ಇದನ್ನೂ ಓದಿ : ಭ್ರಷ್ಟಾಚಾರ-ವಿರೋಧಿ ಸಹಾಯವಾಣಿಗೆ ಚಾಲನೆ ನೀಡಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್


ಹೊಸ ಪ್ರಕರಣಗಳಲ್ಲಿ ಶೇ. 7 ರಷ್ಟು ಹೆಚ್ಚಳ : 
ಪಶ್ಚಿಮ ಪೆಸಿಫಿಕ್‌ನಲ್ಲಿ ಹೆಚ್ಚುತ್ತಿರುವ ಸೋಂಕುಗಳಿಂದಾಗಿ ಕಳೆದ ವಾರ ಜಾಗತಿಕವಾಗಿ ಹೊಸ ಕರೋನವೈರಸ್ (Coronavirus) ಪ್ರಕರಣಗಳ ಸಂಖ್ಯೆಯಲ್ಲಿ ಶೇಕಡಾ 7 ರಷ್ಟು ಹೆಚ್ಚಳವಾಗಿದೆ ಎಂದು WHO ಹೇಳಿತ್ತು. ಆದರೆ, COVID-19 ಸಾವಿನ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಕೋವಿಡ್ -19 ಪ್ರಕರಣಗಳಲ್ಲಿ ಜಾಗತಿಕ ಹೆಚ್ಚಳ ಮುಂದುವರೆದಿದೆ ಎಂದು ಘೆಬ್ರೆಯೆಸಸ್ ಹೇಳಿದ್ದಾರೆ. 


70 ರಷ್ಟು ಜನಸಂಖ್ಯೆಗೆ ಇನ್ನೂ ಲಸಿಕೆ ಹಾಕಿಸಬೇಕು : 
ಈ ವರ್ಷದ ಮಧ್ಯದ ವೇಳೆಗೆ ಪ್ರತಿ ದೇಶದ 70 ಪ್ರತಿಶತದಷ್ಟು ಜನಸಂಖ್ಯೆಗೆ ಲಸಿಕೆ ಹಾಕುವ ಗುರಿಯನ್ನು WHO ಹೊಂದಿದೆ. ಆರೋಗ್ಯ ಕಾರ್ಯಕರ್ತರು, ವೃದ್ಧರು ಮತ್ತು ಇತರ ಅಪಾಯದಲ್ಲಿರುವ ಗುಂಪುಗಳಿಗೆ ಆದ್ಯತೆಯನ್ನು ನೀಡಲಾಗುತ್ತದೆ.


ಇದನ್ನೂ ಓದಿ : Bengal violence: ಅಪರಾಧಿಗಳನ್ನು ಕ್ಷಮಿಸಬಾರದು -ಪ್ರಧಾನಿ ನರೇಂದ್ರ ಮೋದಿ


ಮೂರನೇ ಒಂದು ಭಾಗದಷ್ಟು ಜನರು ಇನ್ನೂ ಲಸಿಕೆ ಹಾಕಿಸಿಕೊಂಡಿಲ್ಲ : 
ಕೆಲವು ಹೆಚ್ಚಿನ ಆದಾಯದ ದೇಶಗಳು ಎರಡನೇ ಬೂಸ್ಟರ್ ಡೋಸ್ ಅನ್ನು ಪ್ರಸ್ತಾಪಿಸಿವೆ. ಆದರೆ ವಿಶ್ವದ ಜನಸಂಖ್ಯೆಯ 1/3 ರಷ್ಟು ಜನರು ಇನ್ನೂ ಲಸಿಕೆ ಹಾಕಿಸಿಕೊಂಡಿಲ್ಲ. ಆದಾಗ್ಯೂ, ಅನೇಕ ದೇಶಗಳಲ್ಲಿ ವ್ಯಾಕ್ಸಿನೇಷನ್ (Vaccination)ಬಗ್ಗೆ ಪ್ರಗತಿ ಸಾಧಿಸಿದೆ. 


ಕೋವಿಡ್-19 ಪ್ರೋಟೋಕಾಲ್ ಕೊನೆಗೊಳಿಸಿರುವುದೇ ಇದಕ್ಕೆ ಕಾರಣ :
ಈ ವರ್ಷದ ಜನವರಿಯಿಂದ ಕರೋನವೈರಸ್ ಪ್ರಕರಣಗಳು ಕ್ಷೀಣಿಸಲಾರಂಭಿಸಿತ್ತು. ಆದರೆ ಕಳೆದ ವಾರದಿಂದ ಮತ್ತೆ ಪ್ರಕರಣಗಳು ಹೆಚ್ಚಾಗಲು ಪ್ರಾರಂಭಿಸಿವೆ ಎಂದು ಆರೋಗ್ಯ ಸಂಸ್ಥೆ ಹೇಳಿದೆ (WHO). ಯುರೋಪ್, ಉತ್ತರ ಅಮೆರಿಕ ಮತ್ತು ಇತರ ದೇಶಗಳಲ್ಲಿ ಕೋವಿಡ್-19 ಪ್ರೋಟೋಕಾಲ್ ಅಂತ್ಯಗೊಂಡಿರುವುದೇ ಇದಕ್ಕೆ ಕಾರಣ. 


ಇದನ್ನೂ ಓದಿ Brahmos: ಪಾಕ್ ಗೆ ನಿದ್ದೆಗೆಡಿಸುವ ಸುದ್ದಿ, ಭಾರತದ ಈ 'ಬಾಹುಬಲಿ' ಮಿಸೈಲ್ ಪರೀಕ್ಷೆ ಯಶಸ್ವಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.