ಅಹಮದಾಬಾದ್ : ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಗುಜರಾತ್ ನಲ್ಲಿ ಕಮಲ ಅರಳುವಂತೆ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 22 ವರ್ಷಗಳಾಗಿದ್ದು, ಸೋಮವಾರ ಹೊರಬಿದ್ದ ವಿಧಾನಸಭೆ ಚುನಾವಣಾ ಫಲಿತಾಂಶ ಬಿಜೆಪಿ ಮುಂದಿನ ಐದು ವರ್ಷ ಆಳುವ ಭರವಸೆ ನೀಡಿದೆ.
 
ಆದರೆ ಎಲ್ಲರಲ್ಲೂ ಮೂಡಿರುವ ಪ್ರಮುಖ ಪ್ರಶ್ನೆ ಎಂದರೆ, ಗುಜರಾತ್ನ ಮುಂದಿನ ಮುಖ್ಯಮಂತ್ರಿ ಯಾರು? ಮುಖ್ಯಮಂತ್ರಿ ರೆಸ್ನಲ್ಲಿರುವ ಪ್ರಮುಖ ನಾಯಕರ ಹೆಸರುಗಳು ಇಲ್ಲಿವೆ:
 
ಹಿಂದಿನ ಮುಖ್ಯಮಂತ್ರಿ ವಿಜಯ್ ರೂಪಾಣಿ : ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ರೇಸ್ನಲ್ಲಿ ರೂಪಾಣಿ ಪ್ರಮುಖರಾಗಿದ್ದಾರೆ. ಅಸಂಬದ್ಧವಾಗಿ ವರ್ತಿಸದ, ಸೌಮ್ಯ ಸ್ವಭಾವದ ವ್ಯಕ್ತಿಯಾದ ರೂಪಾಣಿ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಬಹುದು ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. 
 
ನಿತಿನ್ ಪಟೇಲ್: ಗುಜರಾತ್ನ ಉಪ ಮುಖ್ಯಮಂತ್ರಿಯಾಗಿದ್ದ ನಿತಿನ್ ಪಟೇಲ್ ತಮ್ಮ ಪಾಟೀದರ್-ಪ್ರಾಬಲ್ಯದ ಮೆಹ್ಸಾನಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರತಿಸ್ಪರ್ಧಿ ಜಿವಭಾಯಿ ಪಟೇಲ್ ವಿರುದ್ಧ ಜಯಗಳಿಸಿದ್ದಾರೆ. ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಪಟೇಲ್, ನರೇಂದ್ರ ಮೋದಿ ಅಧಿಕಾರವಧಿಯಲ್ಲಿ ಕ್ಯಾಬಿನೆಟ್ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 
 
ರಾಂಚೋದ್ಭಾಯ್ ಚನಭಾಯಿ ಫಾಲ್ಡು: ಬಿಜೆಪಿಯ ಗುಜರಾತ್ ಘಟಕದ ಮಾಜಿ ಅಧ್ಯಕ್ಷರಾದ ಫಾಲ್ಡು ಕಲಾವದ್ ಕ್ಷೇತ್ರದಿಂದ ಶಾಸನಸಭೆಯ ಸದಸ್ಯರಾಗಿದ್ದಾರೆ.
 
ಮನುಸುಖ್ ಮಾಂಡವಿಯಾ: ಕೇಂದ್ರದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವ ಮಂಡವಿಯ ಗುಜರಾತ್ ರಾಜ್ಯಸಭೆಯ ಸದಸ್ಯರಾಗಿದ್ದಾರೆ. ಅವರು ಬಿಜೆಪಿ ಗುಜರಾತ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಉತ್ತಮ ವ್ಯಕ್ತಿಗಳ  ಪಟ್ಟಿಯಲ್ಲಿದ್ದಾರೆ. 
 
ಸ್ಮೃತಿ ಇರಾನಿ : ಇನ್ನೂ, ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಲ್ಲಿ ಸ್ಮೃತಿ ಇರಾನಿ ಅವರ ಹೆಸರೂ ಕೇಳಿ ಬರುತ್ತಿದೆ.  ಪ್ರಸ್ತುತ ಸ್ಮೃತಿ ಇರಾನಿ ಕೇಂದ್ರದಲ್ಲಿ ಟೆಕ್ಸ್ಟೈಲ್ಸ್ ಮತ್ತು ಇನ್ಫರ್ಮೇಷನ್ ಮತ್ತು ಬ್ರಾಡ್ಕಾಸ್ಟಿಂಗ್ ಸಚಿವಾಲಯಗಳ ಸಚಿವೆಯಾಗಿದ್ದಾರೆ. ನಿರರ್ಗಳವಾಗಿ ಮಾತನಾಡುವ, ಎಂತಹ ಸಂದರ್ಭವನ್ನು ಸುಲಬಹ್ವಾಗಿ ನಿಭಾಯಿಸುವ ಛಾತಿ ಹೊಂದಿರುವ ಇರಾನಿ, ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಸಚಿವರಲ್ಲಿ ಒಬ್ಬರಾಗಿದ್ದಾರೆ. 


COMMERCIAL BREAK
SCROLL TO CONTINUE READING

ಹಾಗೆಯೇ ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ಕಾಂಗ್ರೆಸ್, ಗುಜರಾತ್ ಶಾಸಕಾಂಗದ ಮುಂದಿನ ವಿರೋಧ ಪಕ್ಷದ ನಾಯಕರ ಹೆಸರನ್ನು ಘೋಷಿಸಲು ಉದ್ದೇಶಿಸಿದೆ.


ವಿರೋಧಪಕ್ಷದ ನಾಯಕರ ಸ್ಥಾನಕ್ಕೆ ಸಂಭಾವ್ಯರ ಪಟ್ಟಿ ಇಂತಿದೆ. 
 
ಪರೇಶ್ ಧನನಿ: 41 ವರ್ಷ ವಯಸ್ಸಿನ ಧನನಿ ಗುಜರಾತ್ನಲ್ಲಿ ಪ್ರಬಲ ಪಾಟಿದಾರ್ ಸಮುದಾಯದ ಮೇಲೆ ಪ್ರಭಾವ ಬೀರಿದ್ದು, ಪಾಟಿದಾರ್ ಪ್ರಾಬಲ್ಯದ ಅಮ್ರೆಲಿ ಜಿಲ್ಲೆಯಲ್ಲಿ ಬಿಜೆಪಿಯ ಬವುಕು ಉಂದದ್ ಅವರ ವಿರುದ್ಧ ಜಯಗಳಿಸಿದ್ದಾರೆ. 
 
ಮೋಹನ್ ಸಿಂಗ್ ರಾತ್ವಾ: ಛೋಟಾ ಉದೈಪುರ್ ಕ್ಷೇತ್ರದಿಂದ ಬಿಜೆಪಿಯ ಜಶುಭಾಯ್ ರತ್ವಾ ಅವರನ್ನು ಸೋಲಿಸುವ ಮೂಲಕ 10 ನೇ ಬಾರಿ ಜಯ ದಾಖಲಿಸಿದ್ದಾರೆ.
 
ವಿಕ್ರಮ್ ಮಾಡಮ್: ಸಂಸತ್ತಿನ ಮಾಜಿ ಸದಸ್ಯ ಮದಮ್ ದ್ವಾರಕಾ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ. 
 
ಕುನ್ವಾರ್ಜಿ ಬವಲಿಯ: ಕೋಲಿ ನಾಯಕ ಬವಲಿಯ ಸಹ ಪ್ರತಿಪಕ್ಷ ನಾಯಕನ ಸ್ಪರ್ಧೆಯಲ್ಲಿದ್ದಾರೆ. ಅವರು ರಾಜ್ಕೋಟ್ ಜಿಲ್ಲೆಯ ಜಸ್ದಾನ್ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.