ನವದೆಹಲಿ: ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕಿರುವ ಕಾರಣ ಪಾಕಿಸ್ತಾನವು ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಕೊನೆಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರೆ, ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್ ಭಾರತದಲ್ಲಿ ಪ್ರಮುಖ ಭಯೋತ್ಪಾದಕ ದಾಳಿಯನ್ನು ಯೋಜಿಸುತ್ತಿದೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ. 


COMMERCIAL BREAK
SCROLL TO CONTINUE READING

ಏತನ್ಮಧ್ಯೆ, ಕಾಶ್ಮೀರದಲ್ಲಿ ಶಾಂತಿಯನ್ನು ಭಂಗಗೊಳಿಸಲು ಪಾಕಿಸ್ತಾನ ಅಥವಾ ಅದರ ಸೈನ್ಯವು ನಡೆಸುತ್ತಿರುವ ಪ್ರಯತ್ನಗಳ ತೀವ್ರ ಆತಂಕದ ಹಿನ್ನೆಲೆಯಲ್ಲಿ, ಶಾಂತಿಯನ್ನು ಭಂಗಗೊಳಿಸಲು ಯಾರಾದರೂ ಪಾಕಿಸ್ತಾನ ಕಡೆಯಿಂದ ಬಂದರೆ ನಾವು ಅವರನ್ನು ಕೊನೆಗೊಳಿಸುತ್ತೇವೆ ಎಂದು ಭಾರತೀಯ ಸೇನೆ ಎಚ್ಚರಿಸಿದೆ. ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಕಮಾಂಡರ್, ಲೆಫ್ಟಿನೆಂಟ್ ಜನರಲ್ ಕನ್ವಾಲ್ಜಿತ್ ಸಿಂಗ್ ಧಿಲ್ಲಾನ್ ಈ ಎಚ್ಚರಿಕೆ ನೀಡಿದರು.



ಚಿನಾರ್ ಕಾರ್ಪ್ಸ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ, ಲೆಫ್ಟಿನೆಂಟ್ ಜನರಲ್ ಕನ್ವಾಲ್ಜಿತ್ ಸಿಂಗ್ ಧಿಲ್ಲಾನ್, 'ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಸೇನೆ ಯಾವಾಗಲೂ ಶಾಂತಿಗೆ ಭಂಗಕ್ಕೆ ಪ್ರಯತ್ನಿಸುತ್ತಿದೆ. ಇತ್ತೀಚೆಗೆ, ಕಾಶ್ಮೀರದಲ್ಲಿ ಕೆಲವು ಘಟನೆಗಳಿಗೆ ಪಾಕಿಸ್ತಾನ ಬಹಿರಂಗವಾಗಿ ಬೆದರಿಕೆ ಹಾಕಿದೆ. ಇದರ ಹೊರತಾಗಿಯೂ, ನಾವು ಅವರೆಲ್ಲರನ್ನೂ ನೋಡಿಕೊಳ್ಳುತ್ತೇವೆ. ಕಣಿವೆಯಲ್ಲಿ ಶಾಂತಿಯನ್ನು ಭಂಗಗೊಳಿಸಲು ಯಾರಾದರೂ ಬಂದರೆ, ನಾವು ಅವರನ್ನು ಕೊನೆಗೊಳಿಸುತ್ತೇವೆ!' ಎಂದಿದ್ದಾರೆ.