Ram idol ayodhya : ಜನವರಿ 22 ರಂದು ಅಂದ್ರೆ ನಾಳೆ ಅಯೋಧ್ಯೆ ರಾಮಮಂದಿರವನ್ನು ಅದ್ಧೂರಿಯಾಗಿ ಉದ್ಘಾಟಿಸಲಾಗುತ್ತಿದೆ. ಜನವರಿ 23 ರಿಂದ ಭಕ್ತರು ಪ್ರಭು ಶ್ರೀರಾಮನ ದರ್ಶನ ಪಡೆಯಬಹುದು. ರಾಮಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಠೆ ಹೇಗೆ ನಡೆಯುತ್ತದೆ ಎಂಬುವುದನ್ನು ನೀವು ನಾಳೆ ನೋಡಬಹುದು. ಇದರ ನಡುವೆ ಹಲವರಲ್ಲಿ ಒಂದು ಪ್ರಶ್ನೆ ಉದ್ಭವಿಸಿದೆ. ನೀಲಿ ಬಣ್ಣದ ರಾಮನ ಮೂರ್ತಿ ಕಪ್ಪಾಗಿದೆ ಏಕೆ ಅಂತ ಕೆಲವರು ತಲೆ ಕೆಡಿಸಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಸುಧೀರ್ಘ ಸಮಯದ ನಂತರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. 2019 ರಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ರಾಮಮಂದಿರ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ನಾಳೆ ಅಂದರೆ ಇನ್ನು 24 ಗಂಟೆಗಳಲ್ಲಿ ರಾಮಮಂದಿರ ಉದ್ಘಾಟನಾ ಸಮಾರಂಭ ನಡೆಯಲಿದೆ. ರಾಮಮಂದಿರದಲ್ಲಿ ರಾಮಲಲ್ಲಾನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ.


ಇದನ್ನೂ ಓದಿ:ರಾಮಮಂದಿರದಿಂದ ತಂದ ಅಕ್ಷತೆಯನ್ನು ಈ 5 ರೀತಿಗಳಲ್ಲಿ ಬಳಸಿ: ಸಾಕ್ಷಾತ್ ಶ್ರೀರಾಮನೇ ಮನೆಗೆ ಆಗಮಿಸುತ್ತಾನೆ!


ಸುಮಾರು ಒಂದು ವಾರದಿಂದ ವಿವಿಧ ರೀತಿಯ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಜನವರಿ 22 ರಂದು ಮಧ್ಯಾಹ್ನ 12.20ಕ್ಕೆ ಬಲರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈಗಾಗಲೇ ಬಲರಾಮನ ವಿಗ್ರಹ ಹೇಗಿದೆ ಎಂಬುವುದನ್ನು ಎಲ್ಲರೂ ನೋಡಿದ್ದಾರೆ. ಒಟ್ಟು ಮೂರು ಮೂರ್ತಿಗಳನ್ನು ತಯಾರಿಸಲಾಗಿದ್ದು, ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ತಯಾರಿಸಿದ ವಿಗ್ರಹವನ್ನು ಪ್ರಾಣ ಪ್ರತಿಷ್ಠೆಗೆ ಆಯ್ಕೆ ಮಾಡಲಾಗಿದೆ. 


ಈ ಮೂರು ವಿಗ್ರಹಗಳಲ್ಲಿ, ಎರಡು ಕಪ್ಪು ಬಣ್ಣದ್ದಾಗಿವೆ. ಅದರಲ್ಲಿ ಒಂದು ಬಿಳಿ ಬಣ್ಣದ್ದು. ಈಗ ಶ್ರೀರಾಮನ ವಿಗ್ರಹ ಏಕೆ ಕಪ್ಪು ಎಂದು ಸಾಮಾನ್ಯ ಭಕ್ತರು ಕೇಳುತ್ತಿದ್ದಾರೆ. ಅದಕ್ಕೆ ಕಾರಣ ರಾಮನ ಪ್ರತಿಮೆಗೆ ಆಯ್ಕೆ ಮಾಡಿಕೊಂಡಿರುವ ಬಂಡೆಯೇ ವಿಶೇಷ. ಈ ಬಂಡೆಯು ಬಹಳ ವಿಶಿಷ್ಟವಾಗಿದೆ. ರಾಮನ ಮೂರ್ತಿಗೆ ಪ್ರತಿದಿನ ಹಾಲು ಅಥವಾ ಇತರ ದ್ರವ್ಯಗಳಿಂದ ಅಭಿಷೇಕ ಮಾಡುವುದರಿಂದ ಈ ಕಲ್ಲಿಗೆ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ. ಅಂದರೆ ವಿಗ್ರಹಕ್ಕೆ ಧಕ್ಕೆಯಾಗುವುದಿಲ್ಲ. 


ಇದನ್ನೂ ಓದಿ:ಶ್ರೀರಾಮನು ಅಯೋಧ್ಯೆಯನ್ನು ಎಷ್ಟು ವರ್ಷ ಆಳಿದನು? ಆಗ ಸೀತಾಪತಿಯ ವಯಸ್ಸೆಷ್ಟಿತ್ತು?


ಇದಲ್ಲದೆ, ಈ ಬಂಡೆಯು ಸಾವಿರಾರು ವರ್ಷಗಳಿಂದ ಹಾಗೇ ಉಳಿದಿದೆ. ಅಂದರೆ ಎಷ್ಟು ವರ್ಷವಾದರೂ ಮೂರ್ತಿಯಲ್ಲಿ ಬದಲಾವಣೆ ಆಗುವುದಿಲ್ಲ. ಅಲ್ಲದೆ, ವಾಲ್ಮೀಕಿ ರಾಮಾಯಣದಲ್ಲಿ ರಾಮನನ್ನು ವರ್ಣಿಸುವಾಗ, ಅವನು ಸುಂದರ, ಮೃದು ಮತ್ತು ಆಕರ್ಷಕ ಮೈಬಣ್ಣ ಎಂದು ಹೇಳಿದ್ದಾನೆ. ಅದಕ್ಕಾಗಿಯೇ ಕಾಂತಿಯುತ ಕಪ್ಪು ಶಿಲೆಯಲ್ಲಿ ಶ್ರೀರಾಮ ಅದ್ಭುತವಾಗಿ ಮೂಡಿಬಂದಿದ್ದಾನೆ. 


ಇನ್ನು ರಾಮನ ಪ್ರತಿಮೆಯ ಎತ್ತರ ಕೇವಲ 51 ಇಂಚುಗಳು ಏಕೆ..? ಅಂತ ಹಲವರು ಪ್ರಶ್ನೆ ಮಾಡುತ್ತಿದ್ದಾರೆ. ಒಂದನ್ನ ತಲೆಯಲ್ಲಿ ಇಟ್ಟುಕೊಳ್ಳಿ.. ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗುತ್ತಿರುವುದು ಬಾಲ ರಾಮ. ಅದು ಶ್ರೀರಾಮನ ಐದನೇ ವಯಸ್ಸಿನ ಪ್ರತಿಮೆ. ದಶರಥ ಪುತ್ರನ ಮಗುವಿನ ರೂಪ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.